More

    ಟ್ರಾಫಿಕ್ ಫೈನ್, 50% ಆಫರ್​; ರಿಯಾಯಿತಿಯಲ್ಲಿ ದಂಡ ಕಟ್ಟುವವರಿಗೆ ಇನ್ನೆರಡೇ ದಿನ ಅವಕಾಶ

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ 13 ದಿನಗಳಲ್ಲಿ 3.22 ಲಕ್ಷ ಪ್ರಕರಣಗಳಿಂದ 9.30 ಕೋಟಿ ರೂ. ದಂಡ ಸಂಗ್ರಹವಾಗಿದೆ. ಅದಾಗ್ಯೂ ರಿಯಾಯಿತಿ ದರದಲ್ಲಿ ದಂಡ ಕಟ್ಟುವವರಿಗೆ ಇನ್ನೆರಡೇ ದಿನ ಉಳಿದುಕೊಂಡಿದೆ.

    ಫೆ.11ರ ಒಳಗೆ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡವನ್ನು ಶೇ.50 ಪಾವತಿಸಿ ಪ್ರಕರಣಗಳನ್ನು ಮಾ.18ರೊಳಗೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ) ಪೇಟಿಎಂ ಆ್ಯಪ್, ಕೆಎಸ್‌ಪಿ ಆ್ಯಪ್, ಕರ್ನಾಟಕ ಒನ್, ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿ ದಂಡ ಪಾವತಿಸಲು ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಟ್ಯಾಂಕರ್​-ಕಾರು ಡಿಕ್ಕಿ

    ಬಾಕಿ ದಂಡ ಪಾವತಿಗೆ ರಿಯಾಯಿತಿ ಸೌಲಭ್ಯ 2 ದಿನ ಮಾತ್ರ ಇರಲಿದೆ. ಕಳೆದ ಬಾರಿ ನಗರ ವ್ಯಾಪ್ತಿಯಲ್ಲಿ ಜನರು ಸ್ವಯಂಪ್ರೇರಿತರಾಗಿ 9 ದಿನಗಳಲ್ಲಿ 43.35 ಲಕ್ಷ ಪ್ರಕರಣಗಳಿಂದ 152.87 ಕೋಟಿ ರೂ. ದಂಡ ಪಾವತಿಸಿದ್ದರು.

    ಇಬ್ರಿಗೂ ಒಬ್ನೇ ಪತಿ, ಶಿಫ್ಟ್​ನಲ್ಲಿ ಸಂಸಾರ: ವಾರದಲ್ಲಿ 3 ದಿನ ಆ ಪತ್ನಿಗೆ, ಇನ್ನು 3 ದಿನ ಈ ಪತ್ನಿಗೆ; ಭಾನುವಾರ ಮಾತ್ರ ಗಂಡ ಫ್ರೀ!

    ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts