More

    ಲಾರ್ಜ್​, ಮಿಡ್​, ಸ್ಮಾಲ್​ ಕ್ಯಾಪ್​ ಮ್ಯೂಚುವಲ್​ ಫಂಡ್​ಗಳು: ಹೊಸ ವರ್ಷದಲ್ಲಿ ಹೂಡಿಕೆಗೆ ಯಾವುದು ಉತ್ತಮ?

    ಮುಂಬೈ: ಮ್ಯೂಚುವಲ್​ ಫಂಡ್​ಗಳ ಪೈಕಿ ಸ್ಮಾಲ್​ ಕ್ಯಾಪ್​ಗಳಿಗೆ ಹೋಲಿಸಿದರೆ ಲಾರ್ಜ್​ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಫಂಡ್​ಗಳು ಹೆಚ್ಚು ಸುರಕ್ಷಿತ ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ. ಏಕೆಂದರೆ ಲಾರ್ಜ್​ ಕ್ಯಾಪ್​ ಫಂಡ್​ಗಳು ಬೃಹತ್​ ಕಂಪನಿಗಳ ಷೇರುಗಳಲ್ಲಿ ಹಾಗೂ ಮಿಡ್​ ಕ್ಯಾಪ್​ ಫಂಡ್​ಗಳು ಮಧ್ಯಮ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಇನ್ನು ಸ್ಮಾಲ್ ಕ್ಯಾಪ್​ ಫಂಡ್​ಗಳು ಅತ್ಯಂತ ಸಣ್ಣ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಸಣ್ಣ ಕಂಪನಿಗಳ ಷೇರುಗಳು ಚಂಚಲತೆ ಹೊಂದಿದ್ದು, ಇವುಗಳ ಆದಾಯದಲ್ಲಿ ಸಾಕಷ್ಟು ಏರಿಳಿತ ಇರುತ್ತದೆ ಎಂದೇ ಭಾವಿಸಲಾಗುತ್ತದೆ.

    ಆದರೆ, ಲಾಭದ ವಿಷಯಕ್ಕೆ ಬಂದಾಗ, ಸ್ಮಾಲ್​ ಮತ್ತು ಮಿಡ್​ ಕ್ಯಾಪ್ ಫಂಡ್​ಗಳು ತಮ್ಮ ದೊಡ್ಡ ಗೆಳೆಯರನ್ನು (ಲಾರ್ಜ್​ ಕ್ಯಾಪ್​ ಫಂಡ್​ಗಳನ್ನು) ಮೀರಿಸಬಹುದಾಗಿದೆ, 2023ನೇ ಸಾಲಿನಲ್ಲಿ ಈ ಅಂದಾಜು ನಿಜವಾಗಿದೆ.

    2023ನೇ ವರ್ಷದಲ್ಲಿ ಲಾರ್ಜ್ ಕ್ಯಾಪ್ ಫಂಡ್‌ಗಳು ಸರಾಸರಿ 16.15 ಪ್ರತಿಶತದಷ್ಟು ವಾರ್ಷಿಕ ಆದಾಯವನ್ನು ನೀಡಿವೆ. ಮಿಡ್ ಕ್ಯಾಪ್ ಫಂಡ್‌ಗಳು ಶೇಕಡಾ 30.77 ರಷ್ಟು ಲಾಭ ಗಳಿಸಿಕೊಟ್ಟಿವೆ. ಇದೇ ವೇಳೆ ಸ್ಮಾಲ್ ಕ್ಯಾಪ್‌ ಫಂಡ್​ಗಳು ತಂದುಕೊಟ್ಟಿರುವ ಲಾಭ ಸರಾಸರಿ ಶೇಕಡಾ 34.29.

    ಲಾರ್ಜ್ ಕ್ಯಾಪ್ ಫಂಡ್‌ಗಳು ಕಡಿಮೆ ಪ್ರಮಾಣದ ಆದಾಯ ನೀಡುತ್ತಿದ್ದರೂ ಗರಿಷ್ಠ ಪ್ರಮಾಣದ ಹೂಡಿಕೆ ಪಡೆದುಕೊಂಡಿವೆ. 2,76,639 ಕೋಟಿ ರೂಪಾಯಿಗಳನ್ನು ಇದರಲ್ಲಿ ಹೂಡಿಕೆ ಮಾಡಲಾಗಿದೆ. ಸ್ಮಾಲ್​ ಕ್ಯಾಪ್​ ಫಂಡ್​ಗಳಲ್ಲಿ ಹೂಡಿಕೆಯಾದ ಮೊತ್ತ 2,20,176 ಕೋಟಿ ರೂಪಾಯಿ.

    ಲಾರ್ಜ್​ ಕ್ಯಾಪ್ ಮ್ಯೂಚುಯಲ್ ಫಂಡ್​:

    ಈ ಫಂಡ್​ಗಳಲ್ಲಿ ಕನಿಷ್ಠ 80 ಪ್ರತಿಶತ ಹೂಡಿಕೆಯನ್ನು ದೊಡ್ಡ ಕಂಪನಿಗಳ ಸ್ಟಾಕ್‌ಗಳಲ್ಲಿ ಮಾಡಲಾಗುತ್ತದೆ. ಲಾರ್ಜ್​ ಕ್ಯಾಪ್​ಗಳೆಂದರೆ ಅತಿದೊಡ್ಡ 100 ಕಂಪನಿಗಳ ಷೇರುಗಳಾಗಿರುತ್ತವೆ, ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣದ ಪ್ರಕಾರ ಈ ಶ್ರೇಯಾಂಕ ನೀಡಲಾಗುತ್ತದೆ. ಅಂದರೆ, ಹೆಚ್ಚಿನ ಬಂಡವಾಳ ಇರುವ 100 ದೊಡ್ಡ ಕಂಪನಿಗಳ ಷೇರುಗಳು. ಲಾರ್ಜ್​ ಕ್ಯಾಪ್​ ಫಂಡ್​ಗಳು ಇವುಗಳ ಷೇರುಗಳಲ್ಲಿಯೇ ಹೂಡಿಕೆ ಮಾಡುತ್ತವೆ.

    2023ರ ಡಿಸೆಂಬರ್ 21ರವರೆಗೆ ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ನೀಡಿದ ಸರಾಸರಿ ಒಂದು ವರ್ಷದ ಆದಾಯವು 16.15 ಪ್ರತಿಶತ ಇದೆ.

    ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್​:

    ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ತಮ್ಮ ಕನಿಷ್ಠ 65 ಪ್ರತಿಶತ ಹೂಡಿಕೆಗಳನ್ನು ಮಿಡ್​ ಕ್ಯಾಪ್ ಸ್ಟಾಕ್‌ಗಳಲ್ಲಿ ಮಾಡುತ್ತವೆ. ಅಂದರೆ, ಮಧ್ಯಮ ಗಾತ್ರದ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಮಾರುಕಟ್ಟೆ ಬಂಡವಾಳೀಕರಣದ ಪ್ರಕಾರ 101 ರಿಂದ 250 ರ ನಡುವಿನ ಸ್ಥಾನದಲ್ಲಿ ಇರುವ ಕಂಪನಿಗಳ ಷೇರುಗಳು ಮಿಡ್ ಕ್ಯಾಪ್ ಸ್ಟಾಕ್‌ಗಳಾಗಿವೆ.

    ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳ ಸರಾಸರಿ ಒಂದು ವರ್ಷದ ಆದಾಯವು 30.77 ಪ್ರತಿಶತದಷ್ಟಿದೆ.

    ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್:

    ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಲ್ಲಿ (ಸಣ್ಣ ಕಂಪನಿಗಳ ಷೇರುಗಳಲ್ಲಿ) ಕನಿಷ್ಠ 65 ಪ್ರತಿಶತ ಹೂಡಿಕೆ ಮಾಡುತ್ತವೆ. ಮಾರುಕಟ್ಟೆ ಬಂಡವಾಳೀಕರಣದ ಪ್ರಕಾರ 250ರ ನಂತರದ ಶ್ರೇಯಾಂಕದಲ್ಲಿ ಇರುವ ಕಂಪನಿಗಳ ಷೇರುಗಳೇ ಸ್ಮಾಲ್ ಕ್ಯಾಪ್ ಸ್ಟಾಕ್‌ಗಳಾಗಿವೆ.

    ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳ ಸರಾಸರಿ ಒಂದು ವರ್ಷದ ಆದಾಯವು 34.29 ಪ್ರತಿಶತದಷ್ಟಿದೆ.

    2023ರಲ್ಲಿ ಈ ಮೂರು ಪ್ರಮುಖ ವರ್ಗದ ಮ್ಯೂಚುವಲ್​ ಫಂಡ್​ಗಳು ಎಷ್ಟು ಲಾಭ ನೀಡಿವೆ? ಇವುಗಳಲ್ಲಿ ಯಾವುದು ಹೆಚ್ಚು ಸುರಕ್ಷಿತ? ರಿಸ್ಕ್​ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ ಎಷ್ಟು? ಇಂತಹ ಸಂಗತಿಗಳನ್ನು ಲೆಕ್ಕಹಾಕಿ ಹೊಸ ವರ್ಷ 2024ರಲ್ಲಿ ನೀವು ಮ್ಯೂಚುವಲ್​ ಫಂಡ್​ಗಳನ್ನು ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬಹುದು.

    ಅತ್ಯಾಚಾರವೆಸಗಿ ಜೈಲುಪಾಲಾದ ಬಿಜೆಪಿ ಶಾಸಕ ಈಗ ಅನರ್ಹ: ವಿಧಾನಸಭೆಯಿಂದ ಅನರ್ಹರಾದವರ ದೊಡ್ಡ ಪಟ್ಟಿಯೇ ಇದೆ…

    ಸಿಎಂ ನೀಡಿದ 50ಸಾವಿರ ರೂ. ಚೆಕ್​ ಎನ್​ಕ್ಯಾಶ್​ ಮಾಡಿಕೊಳ್ಳಲ್ಲ: ಸುರಂಗದಲ್ಲಿ ಕಾರ್ಮಿಕರನ್ನು ರಕ್ಷಿಸಿದ ರ್ಯಾಟ್​ ಹೋಲ್​ ಮೈನರ್ಸ್ ತಕರಾರೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts