More

    ಅತ್ಯಾಚಾರವೆಸಗಿ ಜೈಲುಪಾಲಾದ ಬಿಜೆಪಿ ಶಾಸಕ ಈಗ ಅನರ್ಹ: ವಿಧಾನಸಭೆಯಿಂದ ಅನರ್ಹರಾದವರ ದೊಡ್ಡ ಪಟ್ಟಿಯೇ ಇದೆ…

    ಲಖನೌ: ಒಂಬತ್ತು ವರ್ಷಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಇತ್ತೀಚೆಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಶಾಸಕ ರಾಮದುಲರ್ ಗೊಂಡ್​ನನ್ನು ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

    ಇದನ್ನೂ ಓದಿ: ಸಿಎಂ ನೀಡಿದ 50ಸಾವಿರ ರೂ. ಚೆಕ್​ ಎನ್​ಕ್ಯಾಶ್​ ಮಾಡಿಕೊಳ್ಳಲ್ಲ: ಸುರಂಗದಲ್ಲಿ ಕಾರ್ಮಿಕರನ್ನು ರಕ್ಷಿಸಿದ ರ್ಯಾಟ್​ ಹೋಲ್​ ಮೈನರ್ಸ್ ತಕರಾರೇನು?

    ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಜೈಲು ಶಿಕ್ಷೆಗೆ ಗುರಿಯಾದ ಶಾಸಕರನ್ನು “ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ” ಅನರ್ಹಗೊಳಿಸಲಾಗುತ್ತದೆ. ಅಲ್ಲದೆ, ಶಿಕ್ಷೆ ಅವಧಿ ಪೂರ್ಣಗೊಳಿಸಿದ ನಂತರ ಇನ್ನೂ ಆರು ವರ್ಷಗಳವರೆಗೂ ಅನರ್ಹರಾಗಿರುತ್ತಾರೆ.

    ಸೋನಭದ್ರದಲ್ಲಿರುವ ಎಂಪಿ-ಎಂಎಲ್‌ಎ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಹ್ಸನ್ ಉಲ್ಲಾ ಖಾನ್ ಅವರು ಗೊಂಡನಿಗೆ 10 ಲಕ್ಷ ರೂ. ದಂಡ ವಿಧಿಸಿದ್ದಾರೆ. ಈ ಮೊತ್ತವನ್ನು ಈಗ ಮದುವೆಯಾಗಿರುವ ಮತ್ತು ಎಂಟು ವರ್ಷದ ಬಾಲಕಿಯ ತಾಯಿಯಾಗಿರುವ ಅತ್ಯಾಚಾರ ಸಂತ್ರಸ್ತೆಗೆ ನೀಡಲಾಗುವುದು.

    ಪರಿಶಿಷ್ಟ ಪಂಗಡಕ್ಕೆ ಮೀಸಲಾದ ದುಡ್ಡಿ ಕ್ಷೇತ್ರದ ಈ ಶಾಸಕನನ್ನು ಡಿಸೆಂಬರ್ 12 ರಂದು ನ್ಯಾಯಾಲಯವು ತಪ್ಪಿತಸ್ಥರೆಂದು ಪರಿಗಣಿಸಿ, ಮೂರು ದಿನಗಳ ನಂತರ ಶಿಕ್ಷೆಯ ಪ್ರಮಾಣ ಘೋಷಿಸಿತ್ತು.

    ಅತ್ಯಾಚಾರ ಘಟನೆ 2014 ರಲ್ಲಿ ನಡೆದಿದ್ದು, ದೂರಿನ ಮೇರೆಗೆ ಗೊಂಡ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

    ಈ ಘಟನೆ ನಡೆದ ಸಂದರ್ಭದಲ್ಲಿ ಗೊಂಡ ಶಾಸಕನಾಗಿರಲಿಲ್ಲ, ಆದರೆ, ಈತನ ಪತ್ನಿ ಗ್ರಾಮದ ಪ್ರಧಾನರಾಗಿದ್ದರು.

    ಈ ಪ್ರಕರಣದ ವಿಚಾರಣೆಯು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ ಕಾಯಿದೆ) ಯಲ್ಲಿ ಪ್ರಾರಂಭವಾಯಿತು, ಆದರೆ, ನಂತರ ಗೊಂಡ ಶಾಸಕನಾಗಿ ಆಯ್ಕೆಯಾದಾಗ ಸಂಸದ-ಶಾಸಕ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.

    ಉತ್ತರ ಪ್ರದೇಶದಲ್ಲಿ ಅನೇಕ ಪ್ರಕರಣಗಳಲ್ಲಿ ಶಿಕ್ಷೆ ಘೋಷಿಸಿದ ನಂತರ ಹಲವಾರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಅಕ್ಟೋಬರ್ 2022 ರಲ್ಲಿ, ಸಮಾಜವಾದಿ ಪಕ್ಷದ ಶಾಸಕ (ರಾಂಪುರ್ ಸದರ್ ಕ್ಷೇತ್ರ) ಅಜಮ್ ಖಾನ್ ಮತ್ತು ಬಿಜೆಪಿಯ ವಿಕ್ರಮ್ ಸಿಂಗ್ ಸೈನಿ (ಖತೌಲಿ ಶಾಸಕ) ಅವರನ್ನು ಅನರ್ಹಗೊಳಿಸಲಾಗಿದೆ.

    2019ರ ದ್ವೇಷ ಭಾಷಣ ಪ್ರಕರಣದಲ್ಲಿ ಮೂರು ವರ್ಷಗಳ ಶಿಕ್ಷೆಗೆ ಗುರಿಯಾದ ನಂತರ ಖಾನ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದ್ದರೆ, 2013 ರ ಮುಜಫರ್‌ನಗರ ಗಲಭೆ ಪ್ರಕರಣದಲ್ಲಿ ಸೈನಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪಡೆದ ನಂತರ ಅನರ್ಹಗೊಳಿಸಲಾಯಿತು.

    ಉನ್ನಾವೊದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್​ನನ್ನು ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಫೆಬ್ರವರಿ 2020 ರಲ್ಲಿ ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು.

    ಅಜಂ ಖಾನ್ ಪುತ್ರ ಮತ್ತು ಸಮಾಜವಾದಿ ಪಕ್ಷದ ಶಾಸಕ ಅಬ್ದುಲ್ಲಾ ಅಜಂ ಖಾನ್​ ಈ ವರ್ಷದ ಫೆಬ್ರವರಿಯಲ್ಲಿ ತನ್ನ ವಿಧಾನಸಭೆ ಸದಸ್ಯತ್ವ ಕಳೆದುಕೊಂಡಿದ್ದ, ನಂತರ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದಕ್ಕಾಗಿ 2 ವರ್ಷಗಳ ಜೈಲು ಶಿಕ್ಷೆಗೆ ಈತ ಗುರಿಯಾಗಿದ್ದ.

    ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರವನ್ನು ಭಾರತ ಮಾತ್ರವಲ್ಲ, ಇಡೀ ಜಗತ್ತು ವೀಕ್ಷಿಸಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts