More

    ಶ್ರೀಮಂತರ ಸಾಲಮನ್ನಾ! ಕಳೆದ 5 ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂ. ರೈಟ್​-ಆಫ್​

    ನವದೆಹಲಿ: ಕಳೆದ ಐದು ವರ್ಷಗಳಲ್ಲಿ ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು 10.57 ಲಕ್ಷ ಕೋಟಿ ರೂಪಾಯಿ ಸಾಲವನ್ನು ರೈಟ್​ ಆಫ್​​ ಮಾಡಿದ್ದು, ಇದರಲ್ಲಿ 5.52 ಲಕ್ಷ ಕೋಟಿ ರೂ. ದೊಡ್ಡ ಕೈಗಾರಿಕೆಗಳಿಗೆ ಸಂಬಂಧಿಸಿರುವುದಾಗಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ನಿನ್ನೆ (ಡಿ.05) ಮಾಹಿತಿಯನ್ನು ಹಂಚಿಕೊಂಡಿದೆ.

    ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಡೇಟಾ ಪ್ರಕಾರ, ದೇಶದ ಎಲ್ಲ ವಾಣಿಜ್ಯ ಬ್ಯಾಂಕುಗಳು ಕಳೆದ ಐದು ಹಣಕಾಸು ವರ್ಷಗಳಲ್ಲಿ 10.57 ಲಕ್ಷ ಕೋಟಿ ರೂಪಾಯಿಯನ್ನು ರೈಟ್​ ಆಫ್​​ ಮಾಡಿವೆ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಿತ್ತ ಖಾತೆಯ ರಾಜ್ಯ ಸಚಿವ ಭಾಗವತ್ ಕರದ್ ಸಂಸತ್ತಿನಲ್ಲಿ ಮಾಹಿತಿ ನೀಡಿದರು.

    ಅಂದಹಾಗೆ ರೈಟ್​ ಆಫ್​ ಮತ್ತು ಸಾಲಮನ್ನಾ ನಡುವೆ ಒಂದು ವ್ಯತ್ಯಾಸವಿದೆ. ಅದೇನೆಂದರೆ, ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್​​ ಶೀಟ್​ನಿಂದ ಮರುಪಾವತಿಯಾದ ಸಾಲವನ್ನು ತೆಗದುಹಾಕಿ ಎನ್​ಪಿಎ ವರ್ಗಕ್ಕೆ ಸೇರಿಸುತ್ತದೆ. ಅಂದರೆ, ಸಾಲವನ್ನು ಬ್ಯಾಂಕ್​ನ ಆಸ್ತಿ ಎಂದು ಪರಿಗಣಿಸುವುದಿಲ್ಲ. ಆದರೆ, ಸಾಲವನ್ನು ರೈಟ್​ ಆಫ್​ ಮಾಡಿದ ನಂತರವೂ ಸಾಲ ಮರುಪಾವತಿ ಪ್ರಕ್ರಿಯೆ ಮುಂದುವರಿಯುತ್ತದೆ. ಆದರೆ, ಸಾಲಮನ್ನಾ ವಿಚಾರಕ್ಕೆ ಬಂದಾಗ ಬ್ಯಾಂಕ್​ ನೀಡಿದ ಸಾಲವನ್ನು ಸಂಪೂರ್ಣವಾಗಿ ವಜಾಗೊಳಿಸಲಾಗುತ್ತದೆ. ಅಂದರೆ, ಬ್ಯಾಂಕ್​ ಮತ್ತು ಸಾಲ ಪಡೆದವನ ನಡುವೆ ಯಾವುದೇ ಒಪ್ಪಂದ ಇರುವುದಿಲ್ಲ. ಹೀಗಾಗಿ ಸಾಲವನ್ನು ಮರುಪಾವತಿ ಮಾಡುವ ಅವಕಾಶವೇ ಇರುವುದಿಲ್ಲ.

    ಇನ್ನು ಇದೇ ಐದು ಹಣಕಾಸು ವರ್ಷದ ಅವಧಿಯಲ್ಲಿ 7.15 ಲಕ್ಷ ಕೋಟಿ ರೂ. ಸಾಲವನ್ನು ಎನ್​ಪಿಎ (ನಾನ್​ ಪರ್ಫಾಮಿಂಗ್​ ಅಸೆಟ್ಸ್​) ವರ್ಗದಿಂದ ಯಶಸ್ವಿಯಾಗಿ ಮರು ಪಡೆಯಲಾಗಿದ್ದು, ಸರ್ಕಾರದ ಸೂಕ್ತ ಕ್ರಮಗಳ ಅನುಷ್ಠಾನದಿಂದ ಇದು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

    ಬೃಹತ್​ ಕೈಗಾರಿಕೆಗಳ ಸಾಲವೂ ಮನ್ನಾ

    2018-19ನೇ ಹಣಕಾಸು ವರ್ಷದಿಂದ 2022-23ನೇ ಹಣಕಾಸು ವರ್ಷದವರೆಗೆ ಕಳೆದ ಐದು ವರ್ಷಗಳಲ್ಲಿ ಬೃಹತ್ ಕೈಗಾರಿಕೆಗಳು ಮತ್ತು ಇತರೆ ಸೇವೆಗಳಿಗೆ ಸಂಬಂಧಿಸಿದ 5.52 ಲಕ್ಷ ಕೋಟಿ ರೂ.ಗಳನ್ನು ವಾಣಿಜ್ಯ ಬ್ಯಾಂಕುಗಳು ರೈಟ್​ ಆಫ್​ ಮಾಡಿವೆ. ಇದರಲ್ಲಿ 93,874 ಕೋಟಿ ರೂ. ವಂಚನೆಯ ಹಣವೂ ಸೇರಿದೆ. ಒಟ್ಟು 10.57 ಲಕ್ಷ ಕೋಟಿ ರೂ.ಗಳು ಅಂದರೆ, ಶ್ರೀಮಂತರ ಲಕ್ಷಾಂತರ ಕೋಟಿ ರೂಪಾಯಿ ಕೂಡ ಮನ್ನಾವಾದಂತೆ.

    ಅಂದಹಾಗೆ ಬ್ಯಾಂಕ್‌ಗಳು ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ಸ್ವಚ್ಛಗೊಳಿಸಲು, ತೆರಿಗೆ ಪ್ರಯೋಜನಗಳನ್ನು ಪಡೆಯಲು ಮತ್ತು ಬಂಡವಾಳವನ್ನು ಅತ್ಯುತ್ತಮವಾಗಿಸುವ ತಮ್ಮ ಪ್ರಯತ್ನಗಳ ಭಾಗವಾಗಿ ಆಯಾ ಮಂಡಳಿಗಳ ಮಾರ್ಗಸೂಚಿಗಳು ಮತ್ತು ನೀತಿಗಳಿಗೆ ಅನುಗುಣವಾಗಿ ರೈಟ್-ಆಫ್​ಗಳು ಪರಿಣಾಮವನ್ನು ನಿಯಮಿತವಾಗಿ ನಿರ್ಣಯಿಸುತ್ತವೆ. (ಏಜೆನ್ಸೀಸ್​)

    ಅದಾನಿ ಆಸ್ತಿ 88,000 ಕೋಟಿ ರೂ.ಹೆಚ್ಚಳ; ಬಿಲಿಯನೇರ್‌ಗಳ ಪಟ್ಟಿಯಲ್ಲಿ 16ನೇ ಸ್ಥಾನ, ಸಂಪತ್ತು ಹೆಚ್ಚಾಗೋಕೆ ಕಾರಣ ಇದೆ..

    ಚಲಿಸುವ ರೈಲಿನಲ್ಲಿ ಪ್ರಯಾಣಿಕರ ನಡುವೆಯೇ ಯುವತಿಗೆ ತಾಳಿ ಕಟ್ಟಿದ ಯುವಕ! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts