More

    ದುಬೈ ಕನ್ನಡಮಿತ್ರರ ಸೇವೆ ಅಭಿನಂದನೀಯ: ಅಗಸನಪುರ ಸರ್ಕಾರಿ ಶಾಲೆಗೆ ಲ್ಯಾಪ್‌ಟಾಪ್ ಹಸ್ತಾಂತರ

    ಳವಳ್ಳಿ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದುಬೈನಲ್ಲಿರುವ ಕನ್ನಡ ಮಿತ್ರರು ಸಂಘಟನೆಯ ಸೇವೆ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಹೇಳಿದರು.
    ತಾಲೂಕಿನ ಅಗಸನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುಬೈ ಕನ್ನಡ ಮಿತ್ರರು ಸಂಘದಿಂದ ಲ್ಯಾಟಾಪ್, ಪ್ರೊಜೆಕ್ಟರ್ ಮತ್ತು ಯು.ಪಿ. ಎಸ್ ಪರಿಕರಗಳನ್ನು ಸ್ವೀಕರಿಸಿ ಮಾತನಾಡಿದರು.
    ದೂರದ ದೇಶದಲ್ಲಿ ನೆಲೆಸಿದ್ದರೂ, ಜನ್ಮ ಭೂಮಿಯ ಮೇಲಿನ ಕನ್ನಡ ಮಿತ್ರರ ಸೇವೆಯನ್ನು ಶ್ಲಾಸಬೇಕು. ಇಂದಿನ ಸ್ವರ್ಧಾತ್ಮಕ ಜಗತ್ತಿನಲ್ಲಿ ಡಿಜಿಟಲ್ ಶಿಕ್ಷಣದ ಅವಶ್ಯಕತೆ ಇದ್ದು, ಈ ಎಲ್ಲ ಪರಿಕರಗಳ ಉಪಯೋಗ ಪಡೆದುಕೊಳ್ಳಲು ಎಲ್ಲ ವಿದ್ಯಾರ್ಥಿಗಳಲ್ಲಿ ಮನವಿ ವಾಡಿದರು.
    ಕನ್ನಡ ಮಿತ್ರರು ಸಂಟನೆಯ ವಾಧ್ಯಮ ಸಂಚಾಲಕ ಎ.ಎನ್.ಬಾನುಕುವಾರ್ ಮಾತನಾಡಿ, ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಡಿಜಿಟಲ್ ಶಿಕ್ಷಣ ಸಿಗುವುದರ ಜತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
    ಮುಖ್ಯ ಶಿಕ್ಷಕ ಶಂಕರ್, ಎಸ್‌ಡಿಎಂಸಿ ಅಧ್ಯಕ್ಷ ದೇವರಾಜು ಇತರರಿದ್ದರು.
    ಇದೇ ವೇಳೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್‌ಗಳನ್ನು ವಿತರಣೆ ವಾಡಲಾಯಿತು. ವಾಧ್ಯಮ ಸಂಚಾಲಕ ಎ.ಎನ್.ಬಾನುಕುವಾರ್ ಅವರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts