More

    ಭಾರಿ ಮಳೆಗೆ ಗುಡ್ಡ ಕುಸಿತ; 12 ಜನರ ಸಾವು; 21 ಜನರು ನಾಪತ್ತೆ

    ಕಠ್ಮಂಡು: ಭಾರಿ ಮಳೆಯಿಂದ ಎರಡು ಹಳ್ಳಿಗಳಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ ಕನಿಷ್ಠ 12 ಜನರು ಮೃತಪಟ್ಟಿದ್ದು, ಕನಿಷ್ಠ 21 ಜನರು ನಾಪತ್ತೆಯಾಗಿದ್ದಾರೆ.

    ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಉತ್ತರಕ್ಕೆ ಅಂದಾಜು 100 ಕಿ.ಮೀ. ದೂರದಲ್ಲಿರುವ ಬಾರಹ್​ಬಿಸೆ ಎಂಬ ಹಳ್ಳಿಯಲ್ಲಿ ಗುಡ್ಡಕುಸಿತ ಸಂಭವಿಸಿದೆ. ಇದು ಚೀನಾದ ಟಿಬೆಟ್​ ಪ್ರಾಂತ್ಯದ ಗಡಿಗೆ ಹೊಂದಿಕೊಂಡಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ, ಬಾಗ್ಲಂಗ್​ ಗ್ರಾಮದಲ್ಲಿ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ; ಐಸಿಸ್​ ನೇಮಕಕ್ಕೆ ನೆರವಾಗುತ್ತಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ; ಶ್ರೀಮಂತ ಕುಟುಂಬದವ 7 ವರ್ಷದಿಂದ ಕಣ್ಮರೆ…! 

    ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಭಾರಿ ತೊಂದರೆ ಉಂಟಾಗಿದೆ. ಗುಡ್ಡ ಕುಸಿದಿದ್ದರಿಂದ ಮನೆಗಳು ಮಣ್ಣಿನಡಿಗೆ ಸೇರಿವೆ. ನಾಪತ್ತೆಯಾದವರಿಗಾಗಿ ರಕ್ಷಣಾ ಕಾರ್ಯದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

    ಈ ಎರಡೂ ದುರಂತಗಳಿಂದ ನೇಪಾಳದಲ್ಲಿ ಈವರೆಗೆ ಪ್ರವಾಹ ಹಾಗೂ ಗುಡ್ಡ ಕುಸಿತದಿಂದಾಗಿ ಈವರಗೆ ಮೃತಪಟ್ಟವರ ಸಂಖ್ಯೆ 314ಕ್ಕೆ ಏರಿದೆ. ಜತೆಗೆ, 111 ಜನರು ಕಣ್ಮರೆಯಾಗಿದ್ದಾರೆ. ಒಟ್ಟು 160 ಮಂದಿ ಗಾಯಗೊಂಡಿದ್ದಾರೆ.

    ಈ ಫೋಟೋದಲ್ಲಿ ಹತ್ತು ವ್ಯತ್ಯಾಸ ಗುರುತಿಸಬಲ್ಲಿರಾ? ಅಮೆರಿಕ ಗುಪ್ತಚರ ಸಂಸ್ಥೆ ಹಾಕಿದ ಸವಾಲಿದು….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts