More

    ಐಸಿಸ್​ ನೇಮಕಕ್ಕೆ ನೆರವಾಗುತ್ತಿದ್ದ ಬೆಂಗಳೂರಿನ ಯುವಕ ಸಿರಿಯಾದಲ್ಲಿ ಹತ್ಯೆ; ಶ್ರೀಮಂತ ಕುಟುಂಬದವ 7 ವರ್ಷದಿಂದ ಕಣ್ಮರೆ…!

    ನವದೆಹಲಿ: ಐಸಿಸ್​ಗೆ ಸೇರಿದ್ದನೆನ್ನಲಾದ ಬೆಂಗಳೂರಿನ ಬಿಜಿನೆಸ್​ ಮ್ಯಾನೇಜ್​ಮೆಂಟ್​ ಕಾಲೇಜಿನ ಪದವೀಧರ ಸಿರಿಯಾದಲ್ಲಿ ಹತ್ಯೆಗೀಡಾಗಿದ್ದಾನೆಂದು ಹೇಳಲಾಗಿದೆ.

    ಬೆಂಗಳೂರಿನ ಶ್ರೀಮಂತ ಕುಟುಂಬದ ಸದಸ್ಯನಾಗಿದ್ದ ಫೈಜ್​ ಮಸೂದ್​ ಎಂಬಾತ ಕಳೆದ ಏಳು ವರ್ಷಗಳಿಂದ ನಾಪತ್ತೆಯಾಗಿದ್ದ. ಈತನಿಗೆ ತಂದೆ- ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈತನ ಪಾಲಕರು ನಾಪತ್ತೆ ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ.

    ಐಸಿಸ್​ನೊಂದಿಗೆ ನಂಟು ಹೊಂದಿದ್ದ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ದಳದ ಸಿಬ್ಬಂದಿಯಿಂದ ಇತ್ತೀಚೆಗೆ ಬಂಧಿತನಾದ ಬೆಂಗಳೂರಿನ ಬಸವನಗುಡಿಯ ವೈದ್ಯ ಅಬ್ದುರ್​ ರೆಹಮಾನ್​​ ಕೂಡ ಫೈಜ್​ ಮಸೂದ್​ನ ಸಾವನ್ನು ಖಚಿತಪಡಿಸಿದ್ದಾನೆ ಎಂದು ತಿಳಿದು ಬಂದಿದೆ. ನೇತ್ರವೈದ್ಯನಾಗಿದ್ದ ರೆಹ್ಮಾನ್​ 2013-14ರಲ್ಲಿ ಐಸಿಸ್​ ಸೇರಲು ಸಿರಿಯಾಗೆ ಪ್ರಯಾಣಿಸಿದ್ದ.

    ಇದನ್ನೂ ಓದಿ; ಸಿಕ್ಕಿದ್ದು 30 ಗ್ರಾಂ ಹೆರಾಯಿನ್​; ಕೊಟ್ಟಿದ್ದು ಮರಣದಂಡನೆ; ಕ್ಯಾಸಿನೋಗಳಷ್ಟೇ ಅಲ್ಲ, ಶ್ರೀಲಂಕಾದಲ್ಲಿದೆ ಕಠಿಣ ಕಾನೂನು 

    ಉಗ್ರ ಸಂಘಟನೆ ಇಸ್ಲಾಮಿಕ್​ ಸ್ಟೇಟ್​ನಲ್ಲಿ ಮಸೂದ್​ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಸಿರಿಯಾ ಹಾಗೂ ಇರಾಕ್​ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಜತೆಗೆ, ಬೆಂಗಳೂರಿನಿಂದ ಯುವಕರನ್ನು ಐಸಿಸ್​ಗೆ ಭರ್ತಿ ಮಾಡಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸಿದ್ದ. 2013ರ ಸೆಪ್ಟಂಬರ್​ನಲ್ಲಿ ಕತಾರ್​ಗೆ ತೆರಳಿದ್ದ ಮಸೂದ್​ ಆ ಬಳಿಕ ನಾಪತ್ತೆಯಾಗಿದ್ದಾನೆ. ಸಿರಿಯಾದಲ್ಲಿ ಆತನಿದ್ದ ಕ್ಯಾಂಪ್​ ಮೇಲೆ ನಡೆದ ದಾಳಿಯಲ್ಲಿ ಆತ ಮೃತಪಟ್ಟಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ಈ ಫೋಟೋದಲ್ಲಿ ಹತ್ತು ವ್ಯತ್ಯಾಸ ಗುರುತಿಸಬಲ್ಲಿರಾ? ಅಮೆರಿಕ ಗುಪ್ತಚರ ಸಂಸ್ಥೆ ಹಾಕಿದ ಸವಾಲಿದು….! 

    2014-15ರಲ್ಲಿಯೇ ಈತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಆಗ ಭಾರತದಿಂದ ಐಸಿಸ್​ಗೆ ಭರ್ತಿಯಾದವರ ಬಗ್ಗೆ ತನಿಖೆ ಚುರುಕುಗೊಂಡಿತ್ತು. ಕೊನೆಗೆ ಉತ್ತರ ಬೆಂಗಳೂರಿನ ಶ್ರೀಮಂತ ಮುಸ್ಲಿಂ ಕುಟುಂಬದ ಮಸೂದ್​ ಬಗ್ಗೆ ತಿಳಿದು ಬಂದಿತ್ತು. ಈತ ಧರ್ಮದ ಬಗ್ಗೆ ಚರ್ಚೆ ಮಾಡುತ್ತಿದ್ದ. ಬಳಿಕ ಈತನ ಗುಂಪಿನ ಹಲವರು ಐಸಿಸ್​ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.

    ಎ.ಕೆ. -47 ಗುಂಡನ್ನು ತಡೆಯಬಲ್ಲುದು ಈ ಭಾಭಾ ಕವಚ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts