More

    ಭೂ ಸುಧಾರಣೆ ಕಾಯ್ದೆಗೆ ವಿರೋಧಿಸಿ ದೇವದುರ್ಗದಲ್ಲಿ ರೈತ ಸಂಘದಿಂದ ರಸ್ತೆ ಸಂಚಾರ ತಡೆ

    ದೇವದುರ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ ಕಾಯ್ದೆ ವಿರೋಧಿಸಿ ಹಾಗೂ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಬೆಂಬಲಿಸಿ ಇಲ್ಲಿನ ಸಿರವಾರ ಕ್ರಾಸ್ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಮುಖಂಡರು ಗುರುವಾರ ಸಂಚಾರ ತಡೆ ನಡೆಸಿದರು.

    ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ವಿರೋಧಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಗೆ ತೆರಳಿದ್ದಾರೆ. ಸರ್ಕಾರ ಹೋರಾಟ ಹತ್ತಿಕ್ಕಲು ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ ಗಡಿಯಲ್ಲಿ ರೈತರನ್ನು ತಡೆದು ದೌರ್ಜನ್ಯ ನಡೆಸಿದೆ. ರೈತರ ಮೇಲೆ ಲಾಠಿಚಾರ್ಜ್, ಜಲಫಿರಂಗಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾಧ್ಯಕ್ಷ ರೂಪಾ ಶ್ರೀನಿವಾಸ್ ನಾಯಕ, ರಾಜ್ಯ ಮಹಿಳಾ ಸಂಚಾಲಕಿ ಉಮಾದೇವಿ, ತಾಲೂಕು ಅಧ್ಯಕ್ಷ ರಂಗಪ್ಪ, ರವಿಕುಮಾರ, ಮಲ್ಲಿಕಾರ್ಜುನ, ಶರಣಗೌಡ, ಮರಿಲಿಂಗ ಮಾಪಾ, ತಿಮ್ಮನಗೌಡ, ರಮೇಶ ನಾಯಕ, ಭೀಮನಗೌಡ, ಕಾಶಿಂ ಗೌರಂಪೇಟೆ, ಶಿವನಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts