ಸಂಡೂರು: ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವರ ಉತ್ಸವದಲ್ಲಿ ಭಾಗವಹಿಸುವವರಿಗೆ ಒಳಿತಾಗಲಿದೆ ಎಂದು ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಪ್ರಾಣೇಶ್ ಆಚಾರ್ ಹೇಳಿದರು.
ಸಂಡೂರಿನ ಧರ್ಮಾಪುರದ ಹೊರವಲಯದಲ್ಲಿರುವ ಶ್ರೀ ನರಸಿಂಹಸ್ವಾಮಿ ಜಯಂತಿ ಉದ್ದೇಶಿಸಿ ಮಂಗಳವಾರ ಮಾತನಾಡಿದರು. ಬೆಳಗ್ಗೆ 6ಕ್ಕೆ ಪಂಚಾಮೃತಾಭಿಷೇಕ ನಂತರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ಕಲ್ಯಾಣೋತ್ಸವ, ಸಂಜೆ 5ಕ್ಕೆ ಶ್ರೀಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಿತು.
ಇದನ್ನು ಓದಿ: ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ
ಬೆಳಗ್ಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಕಲ್ಯಾಣ ಉತ್ಸವವನ್ನು ರಾಜವಂಶಸ್ಥೆ ಸೂರ್ಯಪ್ರಭಾ ಅಜಯ್ ಘೋರ್ಪಡೆ ನೆರವೇರಿಸಿದರು.
ಪೂಜಾರಿ ಸೂರ್ಯನಾರಾಯಣ ಭಟ್, ಪ್ರಮುಖರಾದ ಆಶಾಲತಾ ಸೋಮಪ್ಪ, ಸ್ವರೂಪ ಎಂಎಲ್‌ಕೆ ನಾಯ್ಡು, ಕಾರ್ತಿಕ್ ಕಾಳೆ, ದೇವೇಂದ್ರಪ್ಪ ಇತರರಿದ್ದರು.