More

    “ಅವರಿಗೆ ಒಳ್ಳೆ ಭವಿಷ್ಯ ಇದೆ” ಎಂದ ಸಿಎಂ, ಲಕ್ಷ್ಮಣ್ ಸವದಿ ರಾಜೀನಾಮೆ ಬಗ್ಗೆ ಹೇಳಿದ್ದೇನು?

    ಬೆಂಗಳೂರು: ಇದೀಗ ಬಿಜೆಪಿ, ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ದಿನ ಬೆಳಗಾಗುವಷ್ಟರಲ್ಲಿ ಚುನಾವಣಾ ಕಣ ರಂಗೇರಿದೆ. ಈ ನಡುವೆ ಅಲ್ಲಲ್ಲಿ ಬಂಡಾಯದ ಹೊಗೆ ಕಾಣಿಸಿಕೊಳ್ಳುತ್ತಿದ್ದು ಅನೇಕ ನಾಯಕರಂತೆಯೇ ಅಸಮಾಧಾನಿತರಾದ ಲಕ್ಷ್ಮಣ್ ಸವದಿ ಬಾಯಲ್ಲಿ ರಾಜೀನಾಮೆ ಪದ ಕೇಳಿಬಂದಿದೆ.

    “ಅವರಿಗೆ ಒಳ್ಳೆಯ ಭವಿಷ್ಯ ಇದೆ”

    ಈ ಬಗ್ಗೆ ಮಾತನಾಡಿರುವ ಸಿಎಂ ಬೊಮ್ಮಾಯಿ, “ಈಗ 189 ಅಭ್ಯರ್ಥಿಗಳ ಹೆಸರು ಡಿಕ್ಲೇರ್ ಆಗಿದೆ. ಲಕ್ಷ್ಮಣ ಸವದಿ ಜತೆ ಪ್ರೀತಿ, ವಿಶ್ವಾಸ, ಭಾವನಾತ್ಮಕ‌ ಸಂಭಂದ ಇದೆ. ಅವರು ನೋವಿನಲ್ಲಿ ಹಾಗೆ ಹೇಳಿರಬಹುದು. ನಮ್ಮ ಪಕ್ಷದಲ್ಲಿ ಲಕ್ಣ್ಮಣ್ ಸವದಿ ಅವರಿಗೆ ಒಳ್ಳೆಯ ಭವಿಷ್ಯ ಇದೆ. ಹೈಕಮಾಂಡ್ ಜೊತೆಯೂ ಮಾತನಾಡಿದ್ದೇನೆ” ಎಂದಿದ್ದಾರೆ.

    ಇದನ್ನೂ ಓದಿ: ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಕಾರ್ಯಕರ್ತರು ಹೇಳ್ತಿದ್ದಾರೆ: ಲಕ್ಷ್ಮಣ್​ ಸವದಿ

    “ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಒಮ್ಮತದ ಸ್ವಾಗತ ಆಗಿದೆ. ಕೆಲವು ಅಸಮಧಾನಿತರರ ಜೊತೆ ಮಾತಾಡುವ ಕೆಲಸ ಆಗ್ತಿದೆನಾನು ಲಕ್ಷ್ಮಣ್ ಸವದಿ ಜೊತೆ ಮಾತಾಡಿದ್ದೇನೆ. ನಾನು ಅವರ ಜೊತೆ ನಿರಂತರವಾಗಿ ಸಂಪರ್ಕ ದಲ್ಲಿದ್ದೇನೆ. ಅವರು ಕಷ್ಟದಲ್ಲಿದ್ಸಾಗ ಪಕ್ಷ ಕೈ ಹಿಡಿದಿದೆ. ಹಾಗೇ ಮುಂದೆ ಅವರ ಕೈ ಹಿಡಿಯುತ್ತದೆ. ಅವರ ಗೌರವ ಕಾಪಾಡಲು ಒಳ್ಳೆಯ ನಿರ್ಧಾರ ಮಾಡುತ್ತದೆ. ಅವರಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ” ಎಂದು ಲಕ್ಷ್ಮಣ ಸವದಿಯನ್ನು ಸಮಾಧಾನಿಸುವ ವಿಚಾರವಾಗಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.

    ಸಿಎಂ ಬೊಮ್ಮಾಯಿ ಕಾಂಗ್ರೆಸ್​ಗೆ ಹೋಗಿದ್ರು ಹೇಳಿಕೆ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು:

    ಇನ್ನು ಸಿಎಂ ಬೊಮ್ಮಾಯಿ ಕಾಂಗ್ರೆಸ್ ಗೆ ಹೋಗಿದ್ರು ಎಂಬ ಸವದಿ ಹೇಳಿಕೆ ವಿಚಾರವಾಗಿ ಪ್ರಶ್ನಿಸಿದಾಗ ಮುಖ್ಯಮಂತ್ರಿಗಳು “ಇದೆಲ್ಲ ಅಪ್ರಸ್ತುತ. ನಾನು ನನ್ನ ಮನೆಯಲ್ಲಿ ಮಾತ್ರ ಕೂತಿದ್ದೆ. ನಾನು ಯಾವ ಪಕ್ಷಕ್ಕೂ ಹೋಗಿರಲಿಲ್ಲ. ಅವಾಗ ಯಡಿಯೂರಪ್ಪ, ಅನಂತ್ ಕುಮಾರ್, ಸಿಸಿ ಪಾಟೀಲ್, ಸವದಿ ಬಂದಿದ್ದು ನಿಜ.. ಆದರೆ ಕಾಂಗ್ರೆಸ್ ಗೆ ನಾನು ಹೋಗ್ತಾ ಇರಲಿಲ್ಲ. ಜೊತೆಗೆ ಅವಾಗ ನನಗೆ ಆ ರೀತಿ ದೊಡ್ಡ ಮಹತ್ವಾಕಾಂಕ್ಷೆಯ ಆಸೆಯೂ ಇರಲಿಲ್ಲ. ಈ ಪಟ್ಟಿಯಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ” ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

    ಈ ನಡುವೆ ಆರ್ ಶಂಕರ್ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರವಾಗಿಯೂ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದ್ದು “ಆರ್ ಶಂಕರ್‌ರವರ ಬಳಿ ಕೂಡ ಮಾತನಾಡ್ತೀನಿ” ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts