More

    ಸಿದ್ದರಾಮಯ್ಯ V/s ಸೋಮಣ್ಣ, ಡಿಕೆಶಿ V/s ಆರ್​.ಅಶೋಕ್​ ಟಕ್ಕರ್

    ಸಚಿವರಿಬ್ಬರಿಗೆ ಡಬಲ್​ ಧಮಾಕಾ, ಸೋಮಣ್ಣ ಕ್ಷೇತ್ರ ಬದಲು

    52 ಹೊಸ ಮುಖಗಳಿಗೆ ಮಣೆ, ಎಂಟು ಮಹಿಳೆಯರಿಗೆ ಅವಕಾಶ

    ಬೆಂಗಳೂರು: ಕಾಂಗ್ರೆಸ್​ನ ಘಟಾನುಟಿಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್​ಗೆ ಟಕ್ಕರ್​ ಕೊಡಲು ಹಿರಿಯ ಸಚಿವರಾದ ವಿ. ಸೋಮಣ್ಣ ಹಾಗೂ ಆರ್​. ಅಶೋಕ್​ ಅವರನ್ನು ಬಿಜೆಪಿ ಅಖಾಡಕ್ಕೆ ಇಳಿಸಿದೆ. ಪಕ್ಷ ರಾಜಕಾರಣದ ಗೆರೆ ಎಳೆದು ಚುನಾವಣೆ ಸಮರದಲ್ಲಿ ಸೆಣೆಸಬೇಕೆಂಬ ಕೇಂದ್ರ ಗೃಹ ಸಚಿವ ಅಮಿತ್​ ಷಾ ಸೂಚನೆಯನ್ನು ಈ ಮೂಲಕ ಪುನರುಚ್ಚರಿಸಲಾಗಿದೆ.
    ತಾಕತ್ತು ಒರೆಗೆ ಹಚ್ಚಲೆಂದು ವಿ. ಸೋಮಣ್ಣ ಹಾಗೂ ಆರ್​. ಅಶೋಕ್​ಗೆ ಡಬಲ್​ ಕ್ಷೇತ್ರಗಳ ಧಮಾಕಾ ನೀಡಲಾಗಿದೆ. ಅಶೋಕ್​ ಪದ್ಮನಾಭನಗರ ಜತೆಗೆ ಕನಕಪುರಕ್ಕೂ ಅಭ್ಯರ್ಥಿ. ಸಚಿವ ವಿ. ಸೋಮಣ್ಣ ಪ್ರತಿನಿಧಿಸುತ್ತಿದ್ದ ಗೋವಿಂದರಾಜನಗರ ಬದಲಿಗೆ ಚಾಮರಾಜನಗರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
    ಆದರೆ, ಅಥಣಿ ಟಿಕೆಟ್​ ನಿರೀೆಯಲ್ಲಿದ್ದ ಮಾಜಿ ಡಿಸಿಎಂ ಲಕ್ಷ$್ಮಣ ಸವದಿಗೆ ನಿರಾಸೆಯಾಗಿದೆ. ಎಸ್​ಟಿ ಸಮುದಾಯದ ಪ್ರಬಲ ನಾಯಕ, ಸಚಿವ ಬಿ. ಶ್ರೀರಾಮುಲು ಕೋರಿಕೆಯಂತೆ ಮೊಳಕಾಲ್ಮೂರು ಬದಲಿಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಟಿಕೆಟ್​ ನೀಡಲಾಗಿದೆ.

    ಬಿಎಸ್​ವೈ ಮೇಲುಗೈ

    ವಿಧಾನಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ “ಫೇಸ್​ ವಾಲ್ಯು’ ಎಂಬುದನ್ನು ವರಿಷ್ಠರು ಮತ್ತೊಮ್ಮೆ ದೃಢಪಡಿಸಿದ್ದಾರೆ. ಬಿಎಸ್​ವೈ ನೀಡಿದ್ದರು ಎನ್ನಲಾಗಿದ್ದ 42 ಹೆಸರಿನ ಪೈಕಿ 30 ಜನರಿಗೆ ಟಿಕೆಟ್​ ನೀಡಲಾಗಿದೆ. ಈ ಪೈಕಿ ಹೊಸದುರ್ಗದಲ್ಲಿ ಲಿಂಗಮೂರ್ತಿ, ಬೆಂಗಳೂರಿನ ಜಯನಗರದಲ್ಲಿ ರಾಮಮೂರ್ತಿ ಮತ್ತು ಬ್ಯಾಟರಾಯನಪುರಕ್ಕೆ ತಮ್ಮೇಶ್​ಗೌಡ ಅವರಿಗೆ ದೆಹಲಿ ನಾಯಕರು ಅಸ್ತು ಎಂದಿದ್ದಾರೆ.

    ಈಗ ಪ್ರಕಟಿತ ಮೊದಲ ಪಟ್ಟಿ ಪ್ರಕಾರ ಪಕ್ಷ ಅಧಿಕಾರಕ್ಕೆ ಬರಲು ಆಸರೆಯಾದ 17 ವಲಸಿಗರಿಗೆ ಮತ್ತೆ ಅದೃಷ್ಟ ಖುಲಾಯಿಸಿದೆ. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮೇಲುಗೈ ಸಾಧಿಸಿದ್ದಾರೆ.

    ಅಥಣಿಗೆ ಮಹೇಶ್​ ಕುಮಟಳ್ಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್​, ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್​ ಸೇರಿ ಬೆಳಗಾವಿ ಜಿಲ್ಲೆಯ ಕೆಲ ಕ್ಷೇತ್ರಗಳ ಬದಲಾವಣೆ ಬೇಡಿಕೆಯನ್ನೂ ವರಿಷ್ಠರು ಈಡೇರಿಸಿದ್ದಾರೆ.

    ಲಕ್ಷ್ಮಣ ಸವದಿ ಪಕ್ಷಾಂತರ?

    ಅಥಣಿಯ ಟಿಕೆಟ್​ ಆಕಾಂಯಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ$್ಮಣ ಸವದಿಗೆ ಟಿಕೆಟ್​ ಕೈ ತಪ್ಪಿದೆ. ಅವರು ಪಾಂತರ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.

    ಹೊಸತನದ ಮಂತ್ರ

    ದೇಶದ ಆರ್ಥಿಕ ಶಕ್ತಿಗೆ ಕರ್ನಾಟಕ ಪ್ರಮುಖ ಕೊಂಡಿ. ನಾವೀನ್ಯತೆ, ಆವಿಷ್ಕಾರ, ನವೋದ್ಯಮದಲ್ಲಿ ಮುಂದಿರುವ ಕರ್ನಾಟಕದ ರಾಜಕೀಯ ನಾಯಕತ್ವದಲ್ಲೂ ಹೊಸತನದ ಮಂತ್ರವನ್ನು ಪಠಿಸಿದೆ.
    ವಿಧಾನಸಭೆಗೆ ಹೊಸ ಮುಖದ ಮೂಲಕ ಹೊಸ ತಲೆಮಾರಿನ ನಾಯಕತ್ವವನ್ನು ಬೆಳೆಸಲು ಕಮಲಪಡೆ ಉತ್ಸುಕವಾಗಿದ್ದು, ರಾಜ್ಯದ ಜನರು ಯಾವ ರೀತಿ ಸ್ಪಂದಿಸುತ್ತಾರೆ ಎಂಬ ಕುತೂಹಲಕ್ಕೆ ವೇದಿಕೆ ಸಿದ್ಧವಾಗಿದೆ.

    ಗುಜರಾತ್​ ಮಾದರಿ ಅನುಕರಣೆ

    ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಯಾವುದೇ ಮಾದರಿಯಿಲ್ಲ. ಕರ್ನಾಟಕಕ್ಕೆ ಕರ್ನಾಟಕದ್ದೇ ಮಾದರಿ ಎಂದು ವರಿಷ್ಠರೂ ಮೇಲುಮಾತಿಗೆ ಹೇಳಿದ್ದರೂ ಮೊದಲ ಕಂತಿನಲ್ಲಿ ಗುಜರಾತ್​ ಮಾದರಿ ಅನುಸರಿಸಿರುವುದು ಸ್ಪಷ್ಟ. ಗುಜರಾತ್​ನಲ್ಲಿ ಒಬ್ಬ ಡಿಸಿಎಂ, ಐದು ಸಚಿವರು ಹಾಗೂ 32 ಶಾಸಕರನ್ನು ಕೈಬಿಟ್ಟು 45 ಹೊಸ ಮುಖಗಳಿಗೆ ಮಣೆ ಹಾಕಿತ್ತು. ರಾಜ್ಯದ ವಿಧಾನಸಭೆ ಚುನಾವಣೆಗೆ ಪ್ರಕಟಿತ ಪಟ್ಟಿ ಪ್ರಕಾರ ಒಬ್ಬ ಸಚಿವ, ಏಳು ಶಾಸಕರನ್ನು ಕೈಬಿಟ್ಟು, 52 ಹೊಸಮುಖಗಳಿಗೆ ಅವಕಾಶ ನೀಡಿದೆ.

    ಕರಾವಳಿಯಲ್ಲಿ ಹೊಸ ಪ್ರಯೋಗ

    ಬಿಜೆಪಿಯ ಭದ್ರಕೋಟೆಯಾದ ಕರಾವಳಿಯಲ್ಲಿ ಮೂವರು ಹಾಲಿ ಶಾಸಕರಿಗೆ ಟಿಕೆಟ್​ ತಪ್ಪಿಸಲಾಗಿದೆ. ಸುಳ್ಯದಲ್ಲಿ ಸಚಿವ ಎಸ್​. ಅಂಗಾರ, ಉಡುಪಿಯಲ್ಲಿ ರುಪತಿ ಭಟ್​, ಪುತ್ತೂರಿನಲ್ಲಿ ಸಂಜೀವ್​ ಮಠಂದೂರು, ಕಾಪುವಿನಲ್ಲಿ ಲಾಲಾಜಿ ಮೆಂಡನ್​ ಅವರನ್ನು ಕೈ ಬಿಡಲಾಗಿದೆ.

    ಮೊದಲ ಪಟ್ಟಿಯಲ್ಲಿ ಎಂಟು ಮಹಿಳೆಯರು

    ಮೊದಲ ಪಟ್ಟಿಯಲ್ಲಿ ಎಂಟು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿರುವ ಬಿಜೆಪಿ, ಯುವಜನರು ಹಾಗೂ ಮಹಿಳೆಯರಿಗೆ ಅವಕಾಶ ನೀಡಬೇಕೆಂಬ ಕೂಗಿಗೆ ಭಾಗಶಃ ಓಗೊಟ್ಟಿದೆ. ಜತೆಗೆ ಎಂಟು ಸಾಮಾಜಿಕ ಕಾರ್ಯಕರ್ತರನ್ನೂ ಸ್ಪರ್ಧಾ ಕಣಕ್ಕೆ ಇಳಿಸಿದೆ.

    ಪಕ್ಷ ಪುರಸ್ಕಾರ

    ಬಿಜೆಪಿಗೆ ಬೆಂಬಲ ಘೋಷಿಸಿದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್​ ಕಟ್ಟಾ ಬೆಂಬಲಿಗ ಸಚ್ಚಿದಾನಂದ ಅವರಿಗೆ ಶ್ರೀರಂಗಪಟ್ಟಣ, ಬಿಎಸ್​ಪಿ ತೊರೆದು ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದ ಕೊಳ್ಳೇಗಾಲ ಶಾಸಕ ಎನ್​. ಮಹೇಶ್​ ಅವರಿಗೆ ಟಿಕೆಟ್​ ನೀಡಿ ಪಕ್ಷ ಪುರಸ್ಕರಿಸಿದೆ.

    ಪರಾಜಿತರಿಗೆ ಕೊಕ್​

    ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಭೇಟಿಯ ಸಂದರ್ಭದಲ್ಲಿ ಭಾರಿ ಚರ್ಚೆ ಹುಟ್ಟಿಹಾಕಿದ್ದ ಫೈಟರ್​ ರವಿಗೆ ಕೊಕ್​ ನೀಡಲಾಗಿದೆ. ಕುಣಿಗಲ್​ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಪರಾಜಿತ ಅಭ್ಯರ್ಥಿಗಳು ಮತ್ತೊಮ್ಮೆ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಲರಾಗಿದ್ದಾರೆ.

    ಅನುಕಂಪದ ಲಾಭ

    ಮಾಜಿ ಸಚಿವ ದಿವಂಗತ ಉಮೇಶ್​ ಕತ್ತಿ ಪುತ್ರ ನಿಖಿಲ್​ ಕತ್ತಿ, ಸೋದರ ರಮೇಶ್​ ಕತ್ತಿ, ವಿಧಾನಸಭೆ ಮಾಜಿ ಉಪಾಧ್ಯಕ್ಷ ದಿವಂಗತ ಆನಂದ ಮಾಮನಿ ಪತ್ನಿ ರತ್ನಾ ಮಾಮನಿಗೆ ಅವಕಾಶ ಕಲ್ಪಿಸಿ ಅನುಕಂಪದ ಲಾಭ ಪಡೆಯಲು ಬಿಜೆಪಿ ಹವಣಿಸಿದೆ.

    ಪರಾಜಿತರಿಗೆ ಅರ್ಧಚಂದ್ರ

    ಸಚಿವ ಎಸ್​. ಅಂಗಾರ, ಶಾಸಕರಾದ ಅನಿಲ್​ ಬೆನಕೆ, ಮಹಾದೇವಪ್ಪ ಯಾದವಾಡ್​, ರುಪತಿ ಭಟ್​, ಲಾಲಾಜಿ ಮೆಂಡನ್​, ಗೂಳಿಹಟ್ಟಿ ಶೇಖರ್​, ಸಂಜೀವ ಮಠಂದೂರು, ರಾಮಣ್ಣ ಲಮಾಣಿಗೆ ಕೊಕ್​ ನೀಡಲಾಗಿದೆ.

    ಅದಲು ಬದಲು

    ಮಾಜಿ ಸಿಎಂ ಬಿಎಸ್​ವೈ ಬದಲು ಅವರ ಪುತ್ರ ಬಿ.ವೈ.ವಿಜಯೇಂದ್ರ, ಸಚಿವ ಆನಂದ್​ ಸಿಂಗ್​ ಬದಲು ಅವರ ಪುತ್ರ ಸಿದ್ಧಾರ್ಥ್​ ಸಿಂಗ್​ಗೆ ಟಿಕೆಟ್​ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts