More

    ಪಲಾನುಭವಿಗಳಿಗೆ ನಿವೇಶನ ನೀಡಲು ಆಗ್ರಹಿಸಿ ಮನವಿ

    ವಿಜಯವಾಣಿ ಸುದ್ದಿಜಾಲ ಗದಗ
    ತಾಲೂಕಿನ ಲಕ್ಕುಂಡಿಯಲ್ಲಿ ಈಗಾಗಲೇ ಲಾನುಭವಿಗಳಿಗೆ ಗುರುತಿಸಿದ ನಿವೇಶನವನ್ನು ವಿತರಿಸಬೇಕೆಂದು ದಲಿತ ಬಹುಜನ ಚಳುವಳಿ ಕರ್ನಾಟಕ ಸಂಟನೆಯು ಅಪರ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿತು.
    ಮನವಿ ಸಲ್ಲಿಸಿ ಮಾತನಾಡಿದ ಸಂಟನೆಯ ಅಧ್ಯೆ ನಾಗಮ್ಮ ಹಾಲಿನವರ, “ಗ್ರಾಮ ಸಭೆಯಲ್ಲಿ ಆಯ್ಕೆಯಾದ 164 ಪಲಾನುಭವಿಗಳಲ್ಲಿ 93 ಪಲಾನುಭವಿಗಳಿಗೆ ಕಳೆದ ಮಾ. 23 ರಂದು ಹಕ್ಕು ಪತ್ರವನ್ನು ನೀಡಲಾಗಿದೆ. ನಿವೇಶನ ನೀಡುವಂತಹ ನೆಯ ಅನುಮೋದನೆ ಪಡೆದು ಹಕ್ಕು ಪತ್ರ ಒದಗಿಸಲಾಗಿದೆ. ಆದರೆ ಹಕ್ಕು ಪತ್ರ ಪಡೆದವರಿಗೆ ನೆಯ ಸಂಖ್ಯೆ ಅನುಗುಣವಾಗಿ ಪಲಾನುಭವಿಗಳಿಗೆ ನಿವೇಶನವನ್ನು ಗುರುತಿಸಿ ಕೊಡಲು ಪಂಚಾಯತಿ ಅಧಿಕಾರಿಗಳು ವಿಲರಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಲಕ್ಕುಂಡಿಯಲ್ಲಿ ಸಾಮಾನ್ಯ ಸಭೆ ಜರುಗಿಲ್ಲ. ಸಭೆ ಕರೆದರೆ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಅನುದಾನದ ಕೊರೆತೆಯಿದೆ ಎಂದು ಕಾಲ ದೂಡುತ್ತಿದ್ದಾರೆ. ಆದ್ದರಿಂದ ಬಡ ಕುಟುಂಬದ ಪಲಾನುಭವಿಗಳು ದುಬಾರಿ ಭಾಡಿಗೆ ಮನೆಯಲ್ಲಿ ಹತ್ತಾರು ವರ್ಷದಿಂದ ವಾಸವಾಗಿದ್ದಾರೆ. ಆದ್ದರಿಂದ ಬೇಗನೆ ನಿವೇಶನ ಸಂಖ್ಯೆಯನ್ನು ಗುರುತಿಸಿ ಕೊಟ್ಟರೇ ಅಲ್ಲಿ ತಗಡಿನ ಸೆಡ್ಡು ಹಾಕಿಕೊಂಡು ವಾಸ ಮಾಡಲು ಅನುಕೂಲವಾಗುತ್ತದೆ ಎಂದು ಆರೋಪಿಸಿದರು.
    37 ಮನೆ ನಿರ್ಮಾಣದ ಸಹಾಯ ಧನ ವಾಪಸ್​:
    ಲಕ್ಕುಂಡಿ ಗ್ರಾಮಕ್ಕೆ ಮಂಜೂರಿಯಾಗಿದ್ದ ಪ್ರಧಾನ ಮಂತ್ರಿ ಆವಾಸ್​ ಯೋಜನೆಯ 37 ವಸತಿ ರಹಿತ ಕುಟಂಬಗಳಿಗೆ ಸಹಾಯ ಧನ ವಾಪಸ್​ ಪಡೆಯಲಾಗಿದೆ. ಕಳೆದ 4 ತಿಂಗಳ ಹಿಂದೆಯೇ ರಾಜೀವಗಾಂಧಿ ವಸತಿ ನಿಗಮದಿಂದ 37 ವಸತಿ ರಹಿತರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ ಮನೆ ನಿಮಿರ್ಸಲು ಅನುದಾನ ನೀಡಲು ಗ್ರಾಮಸಭೆ ನಿರ್ಧರಿಸಿತ್ತು. ಜೂನ್​ 30, 2023 ರವರೆಗೂ ಸಮಯವನ್ನು ನೀಡಿತ್ತು. ಆದರೆ ಪಿಡಿಒ ಮತ್ತು ಸದಸ್ಯರ ನಡುವಿನ ಗುದ್ದಾಟದಿಂದ ಗ್ರಾಮ ಸಭೆ ಕರೆಯದೇ ಇರವುದರಿಂದ ಜೂ. 30 ರಂದು 37 ಮನೆಗಳ ಅನುದಾನವು ರದ್ದಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಎಂ ವೆಂಕಟೇಶ, ರಮೇಶ ಕೊಳೂರು, ಕಾಳವ್ವ ಸತ್ಯಣ್ಣವರ, ಮಲ್ಲಮ್ಮ ನಾಗಗೊಂಡನಹಳ್ಳಿ ರೇಣುಕಾ ಭಜಂತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts