More

    ಪಾಕಿಸ್ತಾನದಲ್ಲೂ ಕರೊನಾ ವೈರಸ್​ ಸೋಂಕು ಹರಡಿದ ತಬ್ಲಿಘಿಗಳು: ಜಮಾತ್​ನಲ್ಲಿ ಪಾಲ್ಗೊಂಡಿದ್ದ 20 ಸಾವಿರ ಮಂದಿ ಕ್ವಾರಂಟೈನ್​ನಲ್ಲಿ

    ಲಾಹೋರ್​: ಪಾಕ್​ನ ರಾಜಧಾನಿ ಲಾಹೋರ್​ ನಗರದಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರಿಗೆ ಕರೊನಾ ವೈರಸ್​ ಸೋಂಕು ಹರಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಲ್ಲಿ ಭಾಗವಹಿಸಿದ್ದವರ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ.

    ಮಾರ್ಚ್​ 10 ರಿಂದ 12ರವರೆಗೆ ಲಾಹೋರ್​ನಲ್ಲಿ ತಬ್ಲಿಘಿ ಜಮಾತ್​ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಈ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಇವರಿಗೆ ಸೋಂಕು ಹರಿಡಿರುವುದರಿಂದ ಎಲ್ಲರನ್ನೂ ಪತ್ತೆ ಮಾಡಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿರುವವರು ಪಾಕಿಸ್ತಾನ ಹಾಗೂ ಇತರ ದೇಶಗಳಲ್ಲಿ ಸೋಂಕು ಹರಡುತ್ತಿದ್ದಾರೆ. ವಾಯುವ್ಯ ಖಬೈರ್ ಪಕ್ತುನ್ವ ಪ್ರದೇಶದಲ್ಲಿದ್ದ 5,300 ಮಂದಿ ತಬ್ಲಿಘಿಗಳನ್ನು ಪತ್ತೆ ಮಾಡಿ ಅವರು ಹೊರಗೆ ತೆರಳದಂತೆ ಸೂಚಿಸಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ.

    ಅದೇ ರೀತಿ ಲಾಹೋರ್‌ನಲ್ಲಿ 7,000 ಮಂದಿ , ದಕ್ಷಿಣ ಸಿಂಧ್ ಪ್ರಾಂತ್ಯದ 8,000 ತಬ್ಲಿಘಿಗಳನ್ನು ಪತ್ತೆ ಮಾಡಿ ಕ್ವಾರಂಟೈನ್​ನಲ್ಲಿ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜು 20 ಸಾವಿರ ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಸಭೆಯಲ್ಲಿ ಪಾಲ್ಗೊಂಡವರನ್ನು ಪ್ರಯಾಣ ಮಾಡದಂತೆ ಸೂಚಿಸಲಾಗಿದೆ ಎಂದು ಖಬೈರ್ ಪಕ್ತುನ್ವ ಪ್ರಾಂತ್ಯದ ವಕ್ತಾರ ಅಜ್ಮಲ್ ವಾಜೀರ್ ತಿಳಿಸಿದ್ದಾರೆ.

    ತಬ್ಲಿಘಿ ಜಮಾತ್‌ಗೆ ಹೋಗಿದ್ದ 154 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪಾಕಿಸ್ತಾನದಲ್ಲಿ ಸೋಂಕಿಗೆ 45 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ಲಾಕ್​ಡೌನ್​ ಪಾಸು ದುರುಪಯೋಗ: ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ದೂರು ದಾಖಲಿಸುವಂತೆ ಕೋರಿ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts