More

    ಇಮ್ರಾನ್ ಖಾನ್ ನಿವಾಸದಲ್ಲಿ 40 ಉಗ್ರರಿಗೆ ಆಶ್ರಯ; ಮಾಹಿತಿ ಖಚಿತ ಪಡಿಸಿದ ಗುಪ್ತಚರ ಇಲಾಖೆ!

    ಪಾಕಿಸ್ತಾನ: ಲಾಹೋರ್‌ನಲ್ಲಿರುವ ಪಾಕ್​ನ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಜಮಾನ್ ಪಾರ್ಕ್ ನಿವಾಸದಲ್ಲಿ ಕನಿಷ್ಠ 30-40 ಭಯೋತ್ಪಾದಕರು ಆಶ್ರಯ ಪಡೆದಿದ್ದಾರೆ ಎಂದು ಪಾಕಿಸ್ತಾನದ ಪಂಜಾಬ್ ಸರ್ಕಾರ ಆರೋಪಿಸಿರುವುದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಮ್ರಾನ್ ಖಾನ್ ಅವರ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ)ನೊಂದಿಗೆ ಸಂಪರ್ಕದಲ್ಲಿರುವ ಭಯೋತ್ಪಾದಕರನ್ನು 24 ಗಂಟೆಯೊಳಗೆ ಒಪ್ಪಿಸುವಂತೆ ಪಾಕ್​​​​ ಪೊಲೀಸರು ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: ಮದುವೆ ಮನೆಯಲ್ಲಿ ಹರಿಯಿತು ನೆತ್ತರು; ಹೆಂಡಿತಿಯೊಂದಿಗೆ ನೃತ್ಯ ಮಾಡಿದ್ದಕ್ಕೆ ಇಬ್ಬರು ಸಹೋದರರ ಜೀವ ತೆಗೆದ ಅಣ್ಣ!

    ನಮ್ಮ ಸೇನೆಯ ಕಟ್ಟಡಗಳ ಮೇಲೆ ದಾಳಿ ನಡೆಸುತ್ತಿದ್ದ ಸುಮಾರು 30 ರಿಂದ 40 ಭಯೋತ್ಪಾದಕರು ಜಮಾನ್ ಪಾರ್ಕ್‌ನಲ್ಲಿ ಅಡಗಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಭಯೋತ್ಪಾದಕರನ್ನು ಪೊಲೀಸರಿಗೆ ಒಪ್ಪಿಸಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಅಮೀರ್ ಮಿರ್ ಹೇಳಿದ್ದಾರೆ.

    ಇದನ್ನೂ ಓದಿ: ಭಗವದ್ಗೀತೆ ಓದಿದ ಕಳ್ಳನಿಗೆ ಪಶ್ಚಾತ್ತಾಪ; 9 ವರ್ಷಗಳ ಹಿಂದೆ ದರೋಡೆ ಮಾಡಿದ್ದ ಆಭರಣ ಮರಳಿ ತಂದಿಟ್ಟ!

    ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಕಳೆದ ಒಂದು ವರ್ಷದಿಂದ ಸೇನೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಮೊದಲ ಬಾರಿಗೆ, ಇಮ್ರಾನ್ ಖಾನ್ ಬೆಂಬಲಿಗರು ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಛೇರಿಯ ಮೇಲೆ ದಾಳಿ ಮಾಡಿದ್ದಾರೆ. ಇದೀಗ ಅವರ ಬಂಧನದ ಪ್ರತೀಕಾರವಾಗಿ ಲಾಹೋರ್‌ನಲ್ಲಿರುವ ಐತಿಹಾಸಿಕ ಕಾರ್ಪ್ಸ್ ಕಮಾಂಡರ್ ಹೌಸ್​ನ್ನು ಸುಟ್ಟು ಹಾಕಿದ್ದಾರೆ ಎಂದು ಸಚಿವ ಅಮೀರ್ ಮಿರ್ ಆರೋಪಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts