More

    ಮಾನಸಿಕ ಅಸ್ವಸ್ಥತೆ ಸುರಕ್ಷತಾ ಬೆಂಬಲದ ಅಭಾವ

    ಅಮೃತಧಾರೆ ಮಾನಸಿಕವಾಗಿ ಅಸ್ವಸ್ಥರಾಗಿರುವುದು ತಮಾಷೆಯಲ್ಲ. ಇದು ಬಹಳ ನೋವಿನ ಸಂಗತಿ. ನಿಮಗೆ ದೈಹಿಕ ಕಾಯಿಲೆಗಳಿದ್ದರೆ ಎಲ್ಲರ ಸಹಾನುಭೂತಿ ದೊರಕುತ್ತದೆ, ಆದರೆ ಮಾನಸಿಕ ಕಾಯಿಲೆ ಇದ್ದಾಗ, ದುರದೃಷ್ಟವಶಾತ್ ನೀವು ನಗೆಗೀಡಾಗುತ್ತೀರಿ. ಏಕೆಂದರೆ, ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದಾರೋ ಅಥವಾ ಅವರು ಮೂರ್ಖರಂತೆ ವರ್ತಿಸುತ್ತಿದ್ದಾರೋ ಎಂದು ತಿಳಿದುಕೊಳ್ಳುವುದು ಬಹಳ ಕಷ್ಟ. ಮಾನಸಿಕವಾಗಿ ತೊಂದರೆಗೀಡಾದವರ ಕುಟುಂಬದವರಿಗೆ ಇದೇ ಬಹು ದೊಡ್ಡ ಸಮಸ್ಯೆ. ಅವರು ಯಾವಾಗ ಕಲ್ಪಿಸಿಕೊಂಡು ಮಾತಾನಾಡುತ್ತಾರೆ ಮತ್ತು ಯಾವಾಗ ನಿಜವಾಗಿಯೂ ಕಷ್ಟಪಡುತ್ತಿದ್ದಾರೆಂಬುದು ನಿಮಗೆ ತಿಳಿಯುವುದಿಲ್ಲ. ಅವರಿಗೆ ಯಾವಾಗ ಸಹಾನೂಭೂತಿಯನ್ನು ತೋರಿಸಬೇಕು, ಅವರೊಂದಿಗೆ ಯಾವಾಗ ನಿಷ್ಠುರವಾಗಿರಬೇಕೆಂದು ನಿಮಗೆ ತಿಳಿಯುವುದಿಲ್ಲ.

    ಮಾನವರ ಬುದ್ಧಿಸ್ವಾಸ್ಥ್ಯವು ಬಹಳ ನಾಜೂಕಾದ ವಿಷಯ. ಬುದ್ಧಿಯ – ಸ್ವಸ್ಥತೆ ಮತ್ತು ಅಸ್ವಸ್ಥತೆಯ ನಡುವಿನ ಗೆರೆ ತುಂಬಾ ತೆಳುವಾಗಿದೆ. ನೀವು ಅದನ್ನು ಪ್ರತಿದಿನ ತಳ್ಳಿದರೆ, ನೀವು ಅದನ್ನು ದಾಟಿಯೇ ಬಿಡುತ್ತೀರ. ನೀವು ಕೋಪಗೊಂಡಾಗ ಹೇಳುವುದೇನು ಹೇಳಿ? ನಾನು ಹುಚ್ಚನಾಗಿದ್ದೇನೆ, ಅಥವಾ ನನಗೆ ಈಗ ಹುಚ್ಚು ಹಿಡಿದ ಹಾಗಿದೆ. ನೀವು ಆ ಹುಚ್ಚುತನವನ್ನು ಆನಂದಿಸಬಹುದು – ನೀವು ಗಡಿ ದಾಟಿದ್ದೀರಿ; ಅದು ಒಂದು ರೀತಿಯ ಸ್ವಾತಂತ್ರ್ಯ ಮತ್ತು ಶಕ್ತಿಯಂತೆ ಇರುತ್ತದೆ. ಆದರೆ ಒಂದು ದಿನ ನಿಮಗೆ ಹಿಂದೆ ಬರಲು ಸಾಧ್ಯವಾಗದಿದ್ದಾಗ, ಯಾತನೆ ಪ್ರಾರಂಭವಾಗುತ್ತದೆ. ಇದು ದೈಹಿಕ ನೋವಿನಂತಲ್ಲ – ಇದು ಅತೀವ ಯಾತನೆ. ಮಾನಸಿಕ ಅಸ್ವಸ್ಥರಾಗಿರುವ ಕೆಲವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತ ನಾನು ಅವರೊಂದಿಗಿದ್ದೆ. ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಆದರೆ ದುರದೃಷ್ಟವಶಾತ್ ಇದು ಜಗತ್ತಿನಲ್ಲಿ ಸಾಂಕ್ರಾಮಿಕವಾಗುತ್ತಿದೆ.

    ಸುರಕ್ಷತಾ ಬಲೆಯನ್ನು ಮೀರುವುದು: ಪಾಶ್ಚಿಮಾತ್ಯ ಸಮಾಜಗಳಲ್ಲಿ ಇದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಭಾರತವೇನೂ ಹೆಚ್ಚು ದಿನ ಹಿಂದುಳಿಯುವುದಿಲ್ಲ. ಭಾರತದಲ್ಲಿನ ನಗರ ಪ್ರದೇಶದ ಸಮಾಜಗಳು ಈ ದಿಕ್ಕಿನಲ್ಲಿಯೇ ಚಲಿಸುತ್ತವೆ, ಏಕೆಂದರೆ ಅನೇಕ ವಿಧಗಳಲ್ಲಿ ಭಾರತದ ನಗರ ಪ್ರದೇಶಗಳು ಪಶ್ಚಿಮಕ್ಕಿಂತ ಪಾಶ್ಚಿಮಾತ್ಯವಾಗಿವೆ. ಅಮೆರಿಕದಲ್ಲಿರುವುದಕ್ಕಿಂತ ಡೆನಿಮ್​ಅನ್ನು ಧರಿಸುವವರು ಇಲ್ಲಿ ಹೆಚ್ಚಿನ ಜನರಿದ್ದಾರೆ.

    ಮಾನಸಿಕ ಕಾಯಿಲೆಗಳು ಹಿಂದೆಂದಿಗಿಂತಲೂ ಹೆಚ್ಚಾಗುತ್ತಿವೆ. ಜನರಿಗೆ ಇರುವ ಎಲ್ಲ ಬೆಂಬಲಗಳನ್ನು ನಾವು ಇಲ್ಲವಾಗಿಸಿ, ಅವಕ್ಕೆ ಯಾವ ಪರ್ಯಾಯವನ್ನೂ ನೀಡದಿರುವುದೇ ಇದಕ್ಕೆ ಕಾರಣ. ಜನರು ತಮ್ಮೊಳಗೆ ತಾವೇ ಪ್ರಜ್ಞಾಪೂರ್ವಕ ಮತ್ತು ಸಮರ್ಥರಾಗಿದ್ದರೆ, ನೀವು ಎಲ್ಲ ಬೆಂಬಲವನ್ನು ಇಲ್ಲವಾಗಿಸಿದಾಗಲೂ ಎಲ್ಲವೂ ಚೆನ್ನಾಗಿರುತ್ತದೆ. ಆದರೆ ಆ ಸಾಮರ್ಥ್ಯವನ್ನು ನೀಡದೆ, ನೀವು ಬೆಂಬಲವನ್ನು ಇಲ್ಲವಾಗಿಸಿದರೆ, ಜನರು ಶಕ್ತಿಗುಂದುತ್ತಾರೆ.

    ಬಹಳ ಕಾಲದಿಂದ, ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಸ್ಥಿರತೆಗಾಗಿ ನಾವು ಕೆಲವು ವಿಷಯಗಳನ್ನು ಅವಲಂಬಿಸಿದ್ದೇವೆ. ಆದರೆ, ಈಗ, ಅದನ್ನೆಲ್ಲಾ ಇಲ್ಲವಾಗಿಸುತ್ತಿದ್ದೇವೆ. ಇವುಗಳಲ್ಲಿ ಒಂದು ಕುಟುಂಬ. ಕುಟುಂಬ – ನಮಗೆ ಏನೇ ಆದರೂ ಒಂದು ರೀತಿಯ ಬೆಂಬಲವನ್ನು ನೀಡುತ್ತದೆ. ನಿಮಗಾಗಿ ಯಾವಾಗಲೂ ಯಾರಾದರೂ ಇರುತ್ತಿದ್ದರು. ನೀವು ಸರಿಯಾದ್ದನ್ನು ಮಾಡುವಾಗ ಎಲ್ಲರೂ ನಿಮ್ಮೊಂದಿಗಿರುತ್ತಾರೆ. ನೀವು ತಪ್ಪಾದ ಕೆಲಸ ಮಾಡಿದರೆ, ಅವರು ನಿಮ್ಮಿಂದ ದೂರ ಹೋಗುತ್ತಾರೆ. ನೀವೇನೇ ಮಾಡಿದರೂ ನಿಮ್ಮನ್ನು ಹಿಡಿಯುವ ಸುರಕ್ಷತಾ ಬಲೆಯಂತೆ ಇರುವ ಒಂದು ಜನರ ಗುಂಪೇ ಕುಟುಂಬ. ನೀವು ಹೇಗೆ ಬಿದ್ದರೂ, ಕೆಲ ಕ್ಷಣಗಳ ಕಾಲ ನಿಮ್ಮನ್ನು ಹಿಡಿಯಲು ಯಾರಾದರೂ ಇರುತ್ತಿದ್ದರು. ಆದರೆ ಈ ದಿನಗಳಲ್ಲಿ ಅನೇಕರಿಗೆ ಆ ಸುರಕ್ಷತೆಯೇ ಇಲ್ಲವಾಗಿದೆ. ಈಗ ಬಿದ್ದರೆ, ನೀವು ನಿಜವಾಗಿಯೂ ಬೀಳುವಿರಿ. ಈ ಕಾರಣಕ್ಕಾಗಿಯೇ ಜನರು ವಿಕಲರಾಗುತ್ತಿರುವುದು.

    ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಶತ 30ರಷ್ಟು ಜನರು ಸನ್ಯಾಸಿಗಳಾಗಿದ್ದ ಕಾಲವೊಂದಿತ್ತು. ಪ್ರಜ್ಞಾಪೂರ್ವಕವಾಗಿ, ಅವರು ಕುಟುಂಬವಿಲ್ಲದೆ, ಬೆಂಬಲವಿಲ್ಲದೆ, ಮನೆಯಿಲ್ಲದೆ ಬದುಕುವ ಆಯ್ಕೆ ಮಾಡಿದರು. ಮನೆಯಿಲ್ಲದಿರುವುದು ಅವರು ಮನೆಕಟ್ಟಿಕೊಳ್ಳಲು ಅಶಕ್ತರು ಎಂಬ ಕಾರಣಕ್ಕಲ್ಲ, ಬದಲಾಗಿ ಸ್ವ-ಆಯ್ಕೆಯಿಂದ. ಸುರಕ್ಷತೆಯ ಅಗತ್ಯವನ್ನು ಮೀರಿದ ಕಾರಣ ಯಾರಿಗೂ ಖಿನ್ನತೆ ಇರಲಿಲ್ಲ.

    ನೀವು ದೊಂಬರಾಟವನ್ನು ಚೆನ್ನಾಗಿ ಕಲಿತಿದ್ದರೆ, ಅದನ್ನು ನೀವು ಕೆಳಗಿರುವ ಸುರಕ್ಷತಾ ಬಲೆಯಿಲ್ಲದೆ ಮಾಡಬಹುದು. ಆದರೆ ನೀವು ಅದರಲ್ಲಿ ಉತ್ತಮವಾಗಿಲ್ಲದಿದ್ದರೆ, ಕೆಳಗೆ ಸುರಕ್ಷತಾ ಬಲೆಯಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ತಲೆ ಒಡೆದುಹೋಗುತ್ತದೆ. ಎಲ್ಲರೊಂದಿಗೆ ಆಗುತ್ತಿರುವುದು ಇದೇ. ನಮ್ಮಲ್ಲಿದ್ದ ಸಾಂಪ್ರದಾಯಿಕ ಬೆಂಬಲ ವ್ಯವಸ್ಥೆಯನ್ನು ನಾವು ಇಲ್ಲವಾಗಿಸುತ್ತಿದ್ದೇವೆ.

    ಇನ್ನೊಂದು ಅಂಶವೆಂದರೆ ಮತಧರ್ಮ. ಮತಧರ್ಮವು ಮಾನವರ ಮಾನಸಿಕ ಸಂತುಲನೆಯನ್ನು ಸಲೀಸಾಗಿ ನಿಭಾಯಿಸುತ್ತದೆ. ದೇವರು ನಿಮ್ಮೊಂದಿಗಿದ್ದಾನೆ, ಚಿಂತಿಸಬೇಡಿ. ಇದು ತುಂಬಾ ಜನರಿಗೆ ನೆಮ್ಮದಿ ನೀಡುತ್ತಿತ್ತು. ಅದರ ಮೌಲ್ಯವನ್ನು ಕೀಳಂದಾಜು ಮಾಡಬೇಡಿ. ಇಂದು ಜನರು ಮನೋವೈದ್ಯರ ಬಳಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ನೂರುಕೋಟಿ ಜನರಿಗೆ ಬೇಕಾಗುವಷ್ಟು ಮನೋವೈದ್ಯರಿಲ್ಲ. ಯಾವುದೇ ದೇಶದಲ್ಲೂ ಇಲ್ಲ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಅವರೆಲ್ಲ ಬಹಳ ಅಕ್ಷಮರು, ಏಕೆಂದರೆ ಒಂದು ಸಮಯದಲ್ಲಿ ಅವರು ಒಬ್ಬರನ್ನು ಮಾತ್ರ ನೋಡಬಹುದು, ಮತ್ತು ಅವರಿಗೆ ಬಹಳಷ್ಟು ಫರ್ನಿಚರ್ ಬೇಕಾಗುತ್ತವೆ! ಮತಧರ್ಮದ ಈ ಅಂಶವನ್ನು ನಾವು ಒಪ್ಪಿಕೊಳ್ಳಲೇ ಬೇಕು. ಇದು ತುಂಬಾ ಅಗ್ಗದ ಸಾಮೂಹಿಕ ಮನೋರೋಗಚಿಕಿತ್ಸೆಯ ವಿಧಾನ.

    ಕೆಮಿಸ್ಟ್ರಿಯ ಆರ್ಕೆಸ್ಟ್ರಾ: ಮಾನವ ಮಾಧುರ್ಯವನ್ನು ಹಲವು ವಿಧಗಳಲ್ಲಿ ನೋಡಬಹುದು. ಅದರಲ್ಲಿ ಒಂದು ಸರಳ ವಿಧಾನವೆಂದರೆ, ಪ್ರತಿ ಮಾನವ ಅನುಭವಕ್ಕೆ ರಾಸಾಯನಿಕ ತಳಹದಿಯಿರುತ್ತದೆ ಎಂದು. ನೀವು ಶಾಂತಿ, ಸಂತೋಷ, ಪ್ರೀತಿ, ಪ್ರಕ್ಷುಬ್ಧತೆ, ನೆಮ್ಮದಿ, ಸಂಕಟ, ಭಾವಪರವಶತೆ ಎಂದು ಏನನ್ನು ಕರೆಯುತ್ತೀರೋ – ಪ್ರತಿಯೊಂದಕ್ಕೂ ರಾಸಾಯನಿಕ ತಳಹದಿಯಿದೆ. ಆರೋಗ್ಯ ಮತ್ತು ಅನಾರೋಗ್ಯವೂ ರಾಸಾಯನಿಕ ತಳಹದಿಯನ್ನು ಹೊಂದಿದೆ. ಇಂದು, ಇಡೀ ಔಷಧ ವಿಜ್ಞಾನದ ಕ್ಷೇತ್ರವು ರಾಸಾಯನಿಕಗಳನ್ನು ಬಳಸುವ ಮೂಲಕ ನಿಮ್ಮ ಆರೋಗ್ಯವನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ. ವೈದ್ಯರ ಕೆಲಸವೇ ರಾಸಾಯನಿಕಗಳ ಆರ್ಕೆಸ್ಟ್ರಾವನ್ನು ನಿರ್ವಹಿಸಲು ಪ್ರಯತ್ನಿಸುವುದು.

    ಮಾನಸಿಕ ಅಸ್ವಸ್ಥತೆಯನ್ನೂ ಸಹ ಹೆಚ್ಚಾಗಿ ಹೊರಗಿನಿಂದ ರಾಸಾಯನಿಕಗಳನ್ನು ನೀಡುವ ಮೂಲಕ ನಿರ್ವಹಿಸಲಾಗುತ್ತಿದೆ. ಆದರೆ ನಿಮಗೆ ಯೋಚಿಸಲು ಸಾಧ್ಯವಾಗುವ ಈ ಎಲ್ಲಾ ರಾಸಾಯನಿಕಗಳು ಈ ದೇಹದಲ್ಲಿ ಈಗಾಗಲೇ ಒಂದು ರೀತಿಯಲ್ಲಿ ಇರುತ್ತವೆ.

    ಸರಿಯಾದ ಅವಕಾಶವನ್ನು ಕಂಡುಹಿಡಿಯುವುದು: ಮೂಲಭೂತವಾಗಿ, ಆರೋಗ್ಯ ಎಂದರೆ ಒಂದು ಮಟ್ಟದ ಹಿತಕರತೆ. ನಿಮ್ಮ ದೇಹವು ಹಿತವಾಗಿದ್ದರೆ, ನಾವು ಅದನ್ನು ಆರೋಗ್ಯವೆನ್ನುತ್ತೇವೆ. ಇದು ತುಂಬಾ ಹಿತವಾಗಿದ್ದಾರೆ, ನಾವು ಅದನ್ನು ಸುಖ ಎನ್ನುತ್ತೇವೆ. ನಿಮ್ಮ ಮನಸ್ಸು ಹಿತವಾಗಿದ್ದರೆ, ನಾವು ಇದನ್ನು ಶಾಂತಿ ಎನ್ನುತ್ತೇವೆ. ಅದು ಹಿತವಾಗಿದ್ದರೆ, ನಾವು ಸಂತೋಷವೆನ್ನುತ್ತೇವೆ. ನಿಮ್ಮ ಭಾವನೆಗಳು ಹಿತವಾಗಿದ್ದರೆ, ನೀವು ಇದನ್ನು ಪ್ರೀತಿಯೆನ್ನುತ್ತೀರಿ. ಅವು ತುಂಬಾ ಹಿತವಾಗಿದ್ದರೆ, ನಾವು ಅದನ್ನು ಕರಣೆ ಎನ್ನುತ್ತೇವೆ. ನಿಮ್ಮ ಪ್ರಾಣಶಕ್ತಿ ಹಿತವಾಗಿದ್ದರೆ, ನಾವು ಇದನ್ನು ಆನಂದವೆನ್ನುತ್ತೇವೆ. ಅದು ತುಂಬಾ ಹಿತವಾಗಿದ್ದರೆ, ನಾವು ಅದನ್ನು ಭಾವಪರವಶತೆ ಎನ್ನುತ್ತೇವೆ. ನಿಮ್ಮ ಸುತ್ತಮುತ್ತಲು ಹಿತವಾಗಿದ್ದರೆ, ನಾವು ಇದನ್ನು ಯಶಸ್ಸು ಎನ್ನುತ್ತೇವೆ.

    ರಾಸಾಯನಿಕಗಳನ್ನು ದೇಹಕ್ಕೆ ನೀಡುವ ಮೂಲಕ ನಾವು ಹಿತಕರತೆಯನ್ನು ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ಅಮೆರಿಕದಲ್ಲಿ, ಪ್ರತಿಶತ 70ರಷ್ಟು ಜನರು ಯಾವುದಾದರೊಂದು ರೀತಿಯ ಪ್ರಿಸ್ಕ್ರಿಪ್ಷನ್ ಮೆಡಿಕೇಶನ್ (ಟ್ಟಛಿಠ್ಚ್ಟಟಠಿಜಿಟ್ಞ ಞಛಿಛಜ್ಚಿಚಠಿಜಿಟ್ಞ) ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಅತ್ಯಂತ ಶ್ರೀಮಂತ ದೇಶದಲ್ಲಿ, ಅಪಾರ ಪೋಷಣೆ ಮತ್ತು ಜೀವನಶೈಲಿಯ ಆಯ್ಕೆ ಇರುವಲ್ಲಿ, ಪ್ರತಿಶತ 70ರಷ್ಟು ಜನರು ಪ್ರಿಸ್ಕ್ರಿಪ್ಷನ್ ಮೆಡಿಕೇಶನ್ ತೆಗೆದುಕೊಳ್ಳುತ್ತಿದ್ದಾರೆ. ಹೊರಗಿನಿಂದ ರಾಸಾಯನಿಕಗಳನ್ನು ದೇಹಕ್ಕೆ ನೀಡುವ ಮೂಲಕ ನಿಮ್ಮ ಬುದ್ಧಿಸ್ವಾಸ್ಥ್ಯ ಮತ್ತು ಆರೋಗ್ಯವನ್ನು ನಿರ್ವಹಿಸಲು ನೀವು ಪ್ರಯತ್ನಿಸುತ್ತಿದ್ದೀರಿ. ಮಾನವ ದೇಹವು ಬಹಳ ಸಂಕೀರ್ಣ ರಾಸಾಯನಿಕ ಕಾರ್ಖಾನೆಯಾಗಿದೆ. ಹೊರಗಿನಿಂದ ಅದನ್ನು ನಿರ್ವಹಿಸುವುದು ತುಂಬಾ ಕಷ್ಟ. ನೀವು ಅದನ್ನು ಒಳಗಿನಿಂದ ನಿರ್ವಹಿಸಬಹುದು, ಆದರೆ ನಿಮ್ಮ ಆಂತರ್ಯವನ್ನು ಪ್ರವೇಶಿಸಲು ನಿಮಗೆ ಸಾಧ್ಯವಾಗಬೇಕು! ನಿಮ್ಮೊಳಗಿನ ಸೃಷ್ಟಿಯ ಮೂಲ ಅರಿಯಲು ಯೋಗವು ಅನುವು ಮಾಡಿಕೊಡುತ್ತದೆ. ನಿಮ್ಮೊಳಗೆ ಅಕ್ಕಿಯ ಒಂದು ಕಾಳು ಅಥವಾ ಬಾಳೆಹಣ್ಣು ಅಥವಾ ಚಪಾತಿಯ ತುಂಡನ್ನು ಮನುಷ್ಯನನ್ನಾಗಿ ಪರಿವರ್ತಿಸುವ ಬುದ್ಧಿವಂತಿಕೆ ಇದೆ. ಒಂದು ಚಪಾತಿಯಿಂದ, ನೀವು ಭೂಮಿಯಲ್ಲಿನ ಅತ್ಯಂತ ಸಂಕೀರ್ಣವಾದ ಜೀವಿಯನ್ನು ತಯಾರಿಸುತ್ತೀರಿ! ಈ ಬುದ್ಧಿವಂತಿಕೆಯ ಒಂದು ಹನಿಯಾದರೂ ನಿಮ್ಮ ದೈನಂದಿನ ಜೀವನದಲ್ಲಿದ್ದರೆ, ನೀವು ಅತ್ಯಮೋಘವಾಗಿ ಜೀವಿಸುತ್ತೀರಿ.

    ಅತ್ಯದ್ಭುತವಾದ ಇಂಜಿನಿಯರ್ ಅಸ್ಥಿತ್ವವೊಂದು ನಿಮ್ಮೊಳಗೇ ಇದೆ. ಈ ಆಧಾರದಿಂದಲೇ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವಿರುವುದು – ಜೀವನದ ಉಸ್ತುವಾರಿ ವಹಿಸಲು ನಿಮ್ಮ ಆಂತರ್ಯವನ್ನು ಇಂಜಿನಿಯರಿಂಗ್ ಮಾಡುವುದು. ನಾವು ಹುಟ್ಟಿದ ರೀತಿ, ನಾವು ಬದುಕುವ ರೀತಿ, ಯೋಚಿಸುವ, ಮತ್ತು ನಮ್ಮ ಜೀವನವನ್ನು ಅನುಭವಿಸುವ ರೀತಿ, ನಾವು ಎಲ್ಲಿಗೆ ತಲುಪುತ್ತೇವೆ ಮತ್ತು ನಾವು ಹೇಗೆ ಸಾಯುತ್ತೇವೆ – ಎಲ್ಲವೂ ನಮ್ಮಿಂದಲೇ ನಿರ್ಧರಿಸಲ್ಪಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts