More

    ಕಾರ್ಮಿಕ ಕಾರ್ಡ್ ಹಗರಣ ನ್ಯಾಯಾಂಗ ತನಿಖೆ ನಡೆಸಿ: ಕೆ.ದೇವೇಂದ್ರಪ್ಪ ಒತ್ತಾಯ

    ಶಿವಮೊಗ್ಗ: ಬೋಗಸ್ ಕಾರ್ಮಿಕ ಕಾರ್ಡ್ ನೋಂದಣಿ ಬಿಜೆಪಿ ಸರ್ಕಾರದ ಬಹುದೊಡ್ಡ ಹಗರಣವಾಗಿದ್ದು, ನ್ಯಾಯಾಂಗ ತನಿಖೆಗೊಳಪಡಿಸಿ ತಪ್ಪಿಸ್ಥರ ಮೇಲೆ ಸೂಕ್ತ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಒತ್ತಾಯಿಸಿದರು.
    ಬಿಜೆಪಿ ಸರ್ಕಾರದಿಂದ ಕಾರ್ಮಿಕರಿಗೆ ಭಾರೀ ಅನ್ಯಾಯವಾಗಿದೆ. ಇಲಾಖೆಯಿಂದಲೇ ಕಾರ್ಮಿಕ ನೋಂದಾಯಿತ ಕಾರ್ಡ್ ವಿತರಣೆ ಆಗಿದ್ದರೂ ನಕಲಿ ಫಲಾನುಭವಿಗಳ ಪತ್ತೆಗೆ ಮುಂದಾಗಿರುವುದು ನಗೆಪಾಟಲಿಗೀಡಾಗುವಂತೆ ಮಾಡಿದೆ. ಇದಕ್ಕೆ ಇಲಾಖೆ ಸಚಿವರು ಮತ್ತು ಜಿಲ್ಲೆಯ ಎಲ್ಲ ಶಾಸಕರೇ ಹೊಣೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಕಾರ್ಮಿಕ ಇಲಾಖೆಯಲ್ಲಿದ್ದ ನೂರಾರು ಕೋಟಿ ರೂ. ಖರ್ಚು ಮಾಡಲು ಸಚಿವರು, ಶಾಸಕರು ಹಾಗೂ ಬಿಜೆಪಿ ಮುಖಂಡರು ಕಾರ್ಮಿಕರಿಗೆ ಕಿಟ್ ಕೊಡುವ ನಾಟಕವಾಡಿದ್ದಾರೆ. ತರಾತುರಿಯಲ್ಲಿ ತಮಗೆ ಬೇಕಾದವರಿಗೆ ಕಾರ್ಡ್ ವಿತರಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಇದರಿಂದ ನೈಜ ಕಾರ್ಮಿಕರಿಗೆ ಅನ್ಯಾಯವಾಗಿದೆ. ಸಚಿವರು, ಶಾಸಕರಿಗೆ ಮಾನವೀಯತೆ ಇದ್ದರೆ ಅನರ್ಹರಿಗೆ ವಿತರಿಸಿದ ಕಾರ್ಡ್ ಮತ್ತು ಕಿಟ್‌ಗಳನ್ನು ಹಿಂಪಡೆದು ಪ್ರಾಮಾಣಿಕತೆ ಪ್ರದರ್ಶಿಸಬೇಕಿದೆ ಎಂದು ಆಗ್ರಹಿಸಿದರು.
    ನಕಲಿ ನೋಂದಾಯಿತ ಕಾರ್ಡ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ನೈಜ ಫಲಾನುಭವಿಗಳಿಗೆ ಕಿಟ್ ಕೊಡಬೇಕೆಂದು ಒತ್ತಾಯಿಸಿದ ಅವರು, ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಮತ್ತು ಕಾರ್ಮಿಕ ಕಾರ್ಡ್ ನೀಡಬೇಕು. ಇಲ್ಲವಾದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ನೂತನ ಅಧ್ಯಕ್ಷ ಮಧುಕುಮಾರ್, ಶರತ್‌ಕುಮಾರ್, ವಿನಯ್ ತಾಂಡ್ಲೆ, ಬಾಲಾಜಿ, ಕವಿತಾ ರಾಘವೇಂದ್ರ, ಗಿರೀಶ್, ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts