More

    ವಿಜಯವಾಣಿ ಪತ್ರಿಕೆಯ 7 ಮಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ; ಜ.4ರಂದು ಕಲಬುರಗಿಯಲ್ಲಿ ಪ್ರದಾನ

    ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2019-20ನೇ ಸಾಲಿನಲ್ಲಿ ನೀಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ವಿಜಯವಾಣಿಯ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥ ಜಗದೀಶ್ ಬುರ್ಲಬಡ್ಡಿ, ಸಹಾಯಕ ಸುದ್ದಿ ಸಂಪಾದಕರಾದ ಮಲ್ಲಿಕಾಚರಣ ವಾಡಿ, ರವೀಂದ್ರ ದೇಶಮುಖ್, ರಾಯಚೂರು ಜಿಲ್ಲೆ ಮುದಗಲ್ ವರದಿಗಾರ ಶರಣಯ್ಯ ಒಡೆಯರ್ ಹಾಗೂ ಕೊಪ್ಪಳ ಜಿಲ್ಲೆ ತಾವರಗೇರ ವರದಿಗಾರ ವಿ.ಆರ್. ತಾಳೀಕೋಟಿ, ಮೈಸೂರು ಜಿಲ್ಲೆ ಹುಣಸೂರು ವರದಿಗಾರ ಶಿವು, ಹಾಸನ ಜಿಲ್ಲೆ ಅರಸೀಕೆರೆ ವರದಿಗಾರ ಶೇಖರ ಸಂಕಗೌಡನಹಳ್ಳಿ ಭಾಜನರಾಗಿದ್ದಾರೆ.

    ಉಳಿದಂತೆ ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಹುಣಸವಾಡಿ ರಾಜನ್ ಸೇರಿ ವಿವಿಧ ಪ್ರಶಸ್ತಿಗಳಿಗೆ ಮಾಧ್ಯಮ ಪ್ರತಿನಿಧಿಗಳು ಆಯ್ಕೆಯಾಗಿದ್ದು, ಜ.4ರಂದು ಕಲಬುರಗಿಯಲ್ಲಿ ನಡೆಯಲಿರುವ ಸಂಘದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    ಇದನ್ನೂ ಓದಿ: ಅವನಿಂದ ಅವಳಿಗೆ ಕರಿಮಣಿ ಪ್ರಯೋಗ; ಮಾವನ ಮನೆಯಲ್ಲಿ ಆತನಿಗೇ ಕತ್ತರಿ ಪ್ರಯೋಗ; ತಪ್ಪಿಹೋಯ್ತು ಸಂಸಾರದ ವ್ಯಾಕರಣ!

    ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ಹುಣಸವಾಡಿ ರಾಜನ್(ಡಾ.ಎಂ.ಎಂ.ಕಲ್ಬುರ್ಗಿ), ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರಭಟ್ (ಪಿ.ರಾಮಯ್ಯ), ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್‌ಮಟ್ಟು(ಡಾ.ಬಿ.ಆರ್.ಅಂಬೇಡ್ಕರ್), ಎಂ.ಕೆ.ಭಾಸ್ಕರರಾವ್ (ಮಹಾದೇವಪ್ರಕಾಶ್ ಪ್ರಶಸ್ತಿಗೆ) ಆಯ್ಕೆಯಾಗಿದ್ದಾರೆ. ಈ ಸಂಜೆ ಪತ್ರಿಕೆ ಸಂಪಾದಕ ವೆಂಕಟೇಶ್ ಮತ್ತು ಪತ್ರಕರ್ತ ಅಚ್ಚುತ್ ಚೇವಾರ್‌ಗೆ ಮಾ.ರಾಮಮೂರ್ತಿ ಸ್ಮಾರಕ ಪ್ರಶಸ್ತಿ, ವಿಜಯವಾಣಿ ಪತ್ರಕರ್ತ ಜಗದೀಶ್ ಬುರ್ಲುಬುಡ್ಡಿ, ಹೊಸದಿಗಂತ ಪತ್ರಿಕೆಯ ವಿನಾಯಕ ಭಟ್ ಮುರೂರುಗೆ ಗುಡಿಹಳ್ಳಿ ನಾಗರಾಜ ಪ್ರಶಸ್ತಿ, ಟಿ.ವಿ.ಶಿವಾನಂದನ್, ವಿ.ಎನ್.ತಾಳಿಕೋಟೆಗೆ ಅಭಿಮಾನಿ ಪ್ರಕಾಶನ ಪ್ರಶಸ್ತಿ, ಅಶ್ವಿನಿ ಶ್ರೀಪಾದ್, ಹೃಷಿಕೇಶ ಬಹದ್ದೂರುಗೆ ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ, ವಿಶ್ವನಾಥ ಸುವರ್ಣ, ಅಸ್ಟ್ರೋ ಮೋಹನ್‌ಗೆ ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಸುದ್ದಿ ಛಾಯಚಿತ್ರ), ಸೋಮಶೇಖರ, ಬಾಲಕೃಷ್ಣ ಭೀಮಗುಳಿಗೆ ಆರ್.ಎಲ್.ವಾಸುದೇವರಾವ್ ಪ್ರಶಸ್ತಿ( ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ), ಜೋಸ್ ಡಿಸೋಜ, ಶಿವು ಹುಣಸೂರುಗೆ ಆರ್.ಎಲ್. ವಾಸುದೇವರಾವ್ ಪ್ರಶಸ್ತಿಗೆ(ವನ್ಯಪ್ರಾಣಿಗಳ ಕುರಿತು ಅತ್ಯುತ್ತಮ ಲೇಖನಕ್ಕೆ) ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ: ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ!?; ಕೋಡಿಮಠದ ಶ್ರೀಗಳಿಂದ ಭವಿಷ್ಯ

    ಕೆ.ಎಂ. ಮಂಜುನಾಥ್, ಬಸವರಾಜ್ ಪರಪ್ಪ ದಂಡಿನಗೆ ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಸ್ಥಿತಿಗತಿ ಕುರಿತು), ಶರಣಯ್ಯ ಒಡೆಯರ್, ಎಸ್.ಎ.ಮುರಳೀಧರಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ, ಶೇಖರ ಸಂಕಗೌಡನಹಳ್ಳಿ, ಎಚ್.ಎಸ್.ಹರಿಪ್ರಸಾದ್‌ಗೆ ಯಜಮಾನ್ ಟಿ.ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ), ನರಸಿಂಹ ಹುಲಿಹೈದರ್, ಚಂದ್ರಶೇಖರ ವಡ್ಡುಗೆ ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ(ಹಾಸ್ಯ ಲೇಖನಕ್ಕೆ) ಲಭಿಸಿದೆ. ಡೆಸ್ಕ್ ನಿರ್ವಹಣೆಯಲ್ಲಿ ಅ.ಮ.ಸುರೇಶ್, ಮಲ್ಲಿಕಾ ಚರಣವಾಡಿ, ಚಂದ್ರಕಲಾಗೆ ಸಿಕ್ಕಿದರೆ, ಅತ್ಯುತ್ತಮ ಪುಟ ವಿನ್ಯಾಸಗಾರದಲ್ಲಿ ಮಹೇಶ್, ಎಸ್.ತಿಮ್ಮೇಶ್‌ಗೆ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ರಾಜಕೀಯ ವಿಶ್ಲೇಷಣೆಯಲ್ಲಿ ಪಬ್ಲಿಕ್ ಟಿವಿ ಸುದ್ದಿವಾಹಿನಿಗೆ, ಮಾನವೀಯ ವರದಿಯಲ್ಲಿ ಟಿವಿ9 ಸುದ್ದಿವಾಹಿನಿಯ ಪ್ರಶಾಂತ್, ನಿರೂಪಣೆ ವಿಭಾಗದಲ್ಲಿ ರಾಧ ಹಿರೇಗೌಡರ್‌ಗೆ, ವಿಶೇಷ ಪ್ರಶಸ್ತಿ ವಿಭಾಗದಲ್ಲಿ ಸುಶೀಲೇಂದ್ರ ಸೌಧೇಗರ್, ಅಜಿಜ್ ಮಸ್ಕಿ, ಅನಂತರಾಮು ಸಂಕಲಾಪುರ, ಸುಶೀಲೇಂದ್ರ ನಾಯಕ್, ಹನುಮೇಶ್ ಯಾವಗಲ್, ಆದಿನಾರಾಯಣ, ರವೀಂದ್ರ ಸುರೇಶ್ ದೇಶಮುಖ್ ಆಯ್ಕೆಯಾಗಿದ್ದಾರೆ.

    ಅತ್ಯುತ್ತಮ ವರದಿ

    ಜಿ.ನಾರಾಯಣಸ್ವಾಮಿ ಪ್ರಶಸ್ತಿಗೆ(ಅತ್ಯುತ್ತಮ ಗ್ರಾಮಾಂತರ ವರದಿ) ಈಶ್ವರ ಹೋಟಿ, ಎಂ.ಎಚ್. ನದ್ಾ, ಪಟೇಲ್ ಬೈರಹನುಮಯ್ಯ ಪ್ರಶಸ್ತಿಗೆ(ಅತ್ಯುತ್ತಮ ಮಾನವೀಯ ವರದಿಗೆ) ಎಂ.ಎಸ್. ಸುಭಾಶಚಂದ್ರ, ಕರಿಯಪ್ಪ ಎಚ್.ಚೌಡಕ್ಕನವರ. ಗಿರಿಧರ್ ಪ್ರಶಸ್ತಿಗೆ(ಅತ್ಯುತ್ತಮ ಅಪರಾಧ ವರದಿಗೆ) ಗಿರೀಶ್ ಮಾದೇನಹಳ್ಳಿ, ವಾದಿರಾಜ್, ಬಿ.ಎಸ್.ವೆಂಕಟರಾಂ ಪ್ರಶಸ್ತಿಗೆ (ಅತ್ಯುತ್ತಮ ಸ್ಕೂಪ್ ವರದಿಗೆ) ವಿಜಯ ಕೋಟ್ಯಾನ್, ಕೃಷ್ಣಿ ಶಿರೂರು, ಕೆ.ಎ.ನೆಟ್ಟಕಲಪ್ಪ ಪ್ರಶಸ್ತಿಗೆ(ಅತ್ಯುತ್ತಮ ಕ್ರೀಡಾ ವರದಿಗೆ) ಕೆ.ಕೆ.ಕಾರ್ತಿಕ್, ಟಿ.ಎನ್.ಪದ್ಮನಾಭ ಆಯ್ಕೆಯಾಗಿದ್ದಾರೆ. ಖಾದ್ರಿ ಶಾಮಣ್ಣ ಪ್ರಶಸ್ತಿಗೆ (ಸುದ್ದಿ ವಿಮರ್ಶೆ) ಬಿ.ಎನ್.ಮುರಳಿ ಪ್ರಸಾದ್, ಶಿವಕುಮಾರ್ ಬೆಳ್ಳಿತಟ್ಟೆ, ಮಂಗಳ ಎಂ.ಸಿ.ವರ್ಗೀಸ್ ಪ್ರಶಸ್ತಿಗೆ(ವಾರ ಪತ್ರಿಕೆ ಮೀಸಲು) ಉಮಾವೇಣೂರು, ಎಸ್.ಜಯರಾಂ, ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿಗೆ ಬಿ.ಪಿ.ಮಲ್ಲಪ್ಪ, ಶ್ರೀನಿವಾಸ ಹಳಕಟ್ಟಿ, ಎಂ.ಸಿ.ಶೋಭಾ, ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿಗೆ ಎಂ.ಗುಡಿಪುರ ನಂದೀಶ್, ಡಾ.ಬಾ.ಮ.ಬಸವರಾಜಯ್ಯ, ಬದರಿನಾಥ ಹೊಂಬಾಳೆ ಪ್ರಶಸ್ತಿಗೆ (ಪ್ರತಿಭಾವಂತ ಹಿರಿಯ ಪತ್ರಕರ್ತರಿಗೆ) ಕೌಶಲ್ಯ ದತ್ತಾತ್ರೇಯ ಪಳನಾಕರ್, ಎಸ್.ಬಿ.ಜೋಷಿ, ರಾಜಶೇಖರ ಕೋಟಿ ಪ್ರಶಸ್ತಿಗೆ ನಾಗಣ್ಣ, ಜಿ.ರಾಜೇಂದ್ರ, ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿಗೆ(ಅತ್ಯುತ್ತಮ ಚಲನಚಿತ್ರ ವರದಿಗೆ) ವಿಜಯ ಬರಮಸಾಗರ್, ಕೆ.ಬಿ.ಪಂಕಜಗೆ ಲಭಿಸಿದರೆ ಆರ್.ಶಾಮಣ್ಣ ಪ್ರಶಸ್ತಿಗೆ (ಅತ್ಯುತ್ತಮ ಮುಖಪುಟ) ವಿಜಯ ಕರ್ನಾಟಕ ಪತ್ರಿಕೆ ಭಾಜನವಾಗಿದೆ.

    ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts