More

    ಕುವೆಂಪು ಸಾಹಿತ್ಯ ಗೀತ ಗಾಯನ

    ಆಲ್ದೂರು: ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕವು ಪಟ್ಟಣದ ಅಬ್ಬಾಸಿಯ ರಂಗ ಮಂದಿರದಲ್ಲಿ ಶಾಲಾ ಮಕ್ಕಳು, ಸಾರ್ವಜಕನಿಕರಿಗೆ ಕುವೆಂಪು ಸಾಹಿತ್ಯ ಆಧಾರಿತ ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಕನ್ನಡ ನಿವೃತ್ತ ಉಪನ್ಯಾಸಕಿ ಚಾಂದನಿ ಕುವೆಂಪು ಸಾಹಿತ್ಯದ ಕುರಿತು ಮಾತನಾಡಿದರು. ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಲ್ದೂರು ಗ್ರಾಪಂ ಅಧ್ಯಕ್ಷೆ ಜಯಶೀಲಾ ಚಿದಂಬರ್, ಕಸಾಪ ಹೋಬಳಿ ಅಧ್ಯಕ್ಷ ನೂರ್ ಮಹಮದ್, ಸದಸ್ಯ ನವರಾಜ್, ಕಾಫಿ ಬೆಳೆಗಾರರಾದ ತೌಸಿಫ್ ಅಲಿ, ನದೀಮ್ ಅಹಮದ್, ನಾಸಿರ್ ಹುಸೇನ್, ದೊಡ್ಡಮಾಗರವಳ್ಳಿ ಗ್ರಾಪಂ ಅಧ್ಯಕ್ಷೆ ಪದ್ಮಾವತಿ, ಮಾಜಿ ಅಧ್ಯಕ್ಷೆ ನಂದಿನಿ, ಗ್ರಂಥಪಾಲಕ ಕೆಂಚಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts