More

    ಸರ್ವರ್ ಸಮಸ್ಯೆಯಿಂದ ಬಿತ್ತನೆ ಬೀಜ ಖರೀದಿಗೆ ರೈತರ ಪರದಾಟ

    ದಿನಪೂರ್ತಿ ಸರ್ವರ್ ಸಮಸ್ಯೆ

    ಕುಷ್ಟಗಿ: ಬಿತ್ತನೆ ಬೀಜ ಖರೀದಿಗೆ ರೈತರ ಮಧ್ಯೆ ನೂಕು ನುಗ್ಗಲು ಉಂಟಾಗುತ್ತಿದ್ದು, ಕೆಲವರು ಭೂ ದಾಖಲೆಗಳನ್ನು ಸರದಿಗೆ ಇಟ್ಟು ಕಾಯುತ್ತ ನಿಲ್ಲುತ್ತಿದ್ದಾರೆ.

    ಹಸ್ತಾ ಮಳೆಗೆ ಭೂಮಿ ಹಸಿಯಾಗಿದ್ದು, ಕಪ್ಪು(ಯರಿ) ಜಮೀನು ಹೊಂದಿರುವ ರೈತರೆಲ್ಲ ಕಡಲೆ ಹಾಗೂ ಜೋಳದ ಬಿತ್ತನೆ ಕೈಗೊಳ್ಳುತ್ತಿದ್ದಾರೆ. ಎಲ್ಲ ರೈತರು ಏಕಕಾಲದಲ್ಲಿ ಬೀಜ ಖರೀದಿಸುತ್ತಿರುವುದರಿಂದ ರೈತ ಸಂಪರ್ಕ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ.

    ಸರ್ವರ್ ಸಮಸ್ಯೆ: ರೈತರ ಭೂದಾಖಲೆ, ಬ್ಯಾಂಕ್ ವಿವರಗಳನ್ನೊಳಗೊಂಡ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಎಂಟ್ರಿ ಮಾಡಿದ ನಂತರವಷ್ಟೆ ರಶೀದಿ ಮುದ್ರಣವಾಗುತ್ತದೆ. ಸರ್ವರ್ ಸಮಸ್ಯೆಯಿಂದಾಗಿ ರೈತರೊಬ್ಬರ ಮಾಹಿತಿ ಅಪ್‌ಲೋಡ್ ಮಾಡಲು 15-20ನಿಮಿಷ ತಗೆದುಕೊಳ್ಳುತ್ತಿದ್ದು, ಮಾಹಿತಿ ಅಪ್‌ಲೋಡ್ ಮಾಡುವ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ರೈತರೂ ಸಹ ಸುಮಾರು ಹೊತ್ತು ಕಾಯುವಂತಾಗುತ್ತಿದೆ.

    ಸರ್ವರ್ ಸಮಸ್ಯೆಯಿಂದ ಬಿತ್ತನೆ ಬೀಜ ಖರೀದಿಗೆ ರೈತರ ಪರದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts