More

    ಕ್ವಾರಿ ಮಾಲೀಕರ ವಿರುದ್ಧ ಪ್ರಕರಣ ದಾಖಲು, ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು

    ಕುಷ್ಟಗಿ: ಕಲ್ಲು ಗಣಿಗಾರಿಕೆಯಿಂದ ನಿರ್ಮಾಣಗೊಂಡ ಹೊಂಡದಲ್ಲಿ ಬಿದ್ದು ಮೃತಪಟ್ಟ ತಾಲೂಕಿನ ಬಿಸನಾಳ ಗ್ರಾಮದ ಮಂಜುನಾಥ ಶರಣಪ್ಪ ವದೆಗೋಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಿ ಮಾಲೀಕರಾದ ಬಾಗಲಕೋಟೆ ಜಿಲ್ಲೆ ಇಳಕಲ್‌ನ ಹನುಮಂತಮ್ಮ ಹನುಮಗೌಡ ಪೊಪಾ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಸ್ಥಳ ಪರಿಶೀಲನೆ ನಡೆಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೂ ಸಹ ಹನುಮಂತಮ್ಮ ಸೇರಿ 8 ಜನರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು(ಪಿಸಿಆರ್) ದಾಖಲಿಸಿದ್ದಾರೆ. ಅನಧಿಕೃತ ಕಲ್ಲು ಗಣಿಕಾರಿಯಿಂದ ನಿರ್ಮಾಣಗೊಂಡ ಹೊಂಡವನ್ನು ಮುಚ್ಚದೆಯೇ ಸುತ್ತಲೂ ತಂತಿ ಬೇಲಿಯನ್ನೂ ಹಾಕದೆ ನಿರ್ಲಕ್ಷ್ಯ ವಹಿಸಿದ್ದರಿಂದ ಮಗನನ್ನು ಕಳೆದುಕೊಳ್ಳಬೇಕಾಯಿತು. ನಿರ್ಲಕ್ಷ್ಯ ವಹಿಸಿರುವ ಕ್ವಾರಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತ ಬಾಲಕನ ತಾಯಿ ಹುಲಿಗೆಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ದಿಲೀಪ್‌ಕುಮಾರ್ ಇಳಕಲ್‌ನ ಹನುಮಂತಮ್ಮ ಪೊಪಾ, ಚಿನ್ನಮ್ಮ ಸುರಪುರ, ಕಲಾಲಬಂಡಿ ಗ್ರಾಮದ ಪರಮೇಶ್ವರಪ್ಪ ಕೊಟಗಿ, ಬಿಸನಾಳ ಗ್ರಾಮದ ಲಕ್ಷ್ಮಣ ವಡ್ಡರ್, ಮುತ್ತಪ್ಪ ವಡ್ಡರ್, ರಾಮಪ್ಪ ವಡ್ಡರ್, ಹನುಮಪ್ಪ ಚಿಕ್ಕಗಡ ಹಾಗೂ ದುರುಗವ್ವ ಚಿಕ್ಕಗಡ ವಿರುದ್ಧ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 31ಪುಟಗಳ ದೂರು ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts