More

    ಹೊಸ ಶಿಕ್ಷಣ ನೀತಿ ಜಾರಿಗೆ ವಿರೋಧ

    ಕುಷ್ಟಗಿ: ಹೊಸ ಶಿಕ್ಷಣ ನೀತಿ ಜಾರಿ ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ)ನ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ವಿಜಯಾ ಮುಂಡರಗಿಗೆ ಗುರುವಾರ ಸಲ್ಲಿಸಿದರು.

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಸಂವಿಧಾನಿಕವಾಗಿದೆ. ಸಾರ್ವಜನಿಕವಾಗಿಯಾಗಲಿ, ಕೇಂದ್ರ ಹಾಗೂ ರಾಜ್ಯಗಳ ಶಾಸನ ಸಭೆಗಳಲ್ಲಿ ಚರ್ಚಿಸದೆ, ಸಾಧಕ ಬಾಧಕ ಅರಿಯದೆ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಜನಾಭಿಪ್ರಾಯ ಸಂಗ್ರಹಿಸದೆ ಶಿಕ್ಷಣ ನೀತಿ ಜಾರಿ ಮಾಡಲು ಹೊರಟಿರುವುದನ್ನು ಎಸ್‌ಎಫ್‌ಐ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಎಫ್‌ಐನ ತಾಲೂಕು ಸಂಚಾಲಕ ಬಸವರಾಜ ಸಾರಥಿ, ಸಹ ಸಂಚಾಲಕರಾದ ವೀರೇಶ ಹಿರೇಮಠ, ಎಚ್.ಹನುಮಂತ, ಹುಸೇನಸಾಬ, ಅಮರೇಶ ಗುರಿಕಾರ, ಮಾರುತಿ ಸಿದ್ದಾಪುರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts