More

    ಅಂಗನವಾಡಿಗೆ ‘ಬಾಲಸ್ನೇಹಿ’ ಪೇಂಟಿಂಗ್ ಮಾಡಿಸಿ ಮಗಳ ಹುಟ್ಟುಹಬ್ಬ ಆಚರಿಸಿದ ಕುಷ್ಟಗಿ ತಹಸೀಲ್ದಾರ್!

    ಕುಷ್ಟಗಿ(ಕೊಪ್ಪಳ): ನ್ಯಾಯಾಧೀಶರೊಬ್ಬರು ಮಗನನ್ನು ಅಂಗನವಾಡಿಗೆ ಸೇರಿಸುವ ಮೂಲಕ ಕುಷ್ಟಗಿ ಪಟ್ಟಣದಲ್ಲಿ ಗಮನ ಸೆಳೆದಿದ್ದರು. ಇದೀಗ ತಹಸೀಲ್ದಾರ್ ಎಂ.ಸಿದ್ದೇಶ ಅವರು ಅಂಗನವಾಡಿ ಕೇಂದ್ರವೊಂದರ ಕಟ್ಟಡಕ್ಕೆ ‘ಬಾಲಸ್ನೇಹಿ’ ಪೇಂಟಿಂಗ್ ಮಾಡಿಸಿ ಮಗಳ ಹುಟ್ಟುಹಬ್ಬವನ್ನು ಅಲ್ಲಿನ ಮಕ್ಕಳೊಂದಿಗೆ ಆಚರಿಸಿದ್ದಾರೆ.

    ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಅಂಗನವಾಡಿ ಒಂದನೇ ಕೇಂದ್ರದ ಕಟ್ಟಡಕ್ಕೆ ಸ್ವಂತ ಖರ್ಚಿನಲ್ಲಿ ವಿವಿಧ ಚಿತ್ರಗಳು ಹಾಗೂ ನಮ್ಮ ಸಂಕಲ್ಪ ಪೌಷ್ಟಿಕ ಕರ್ನಾಟಕ ಶೀರ್ಷಿಕೆಯನ್ನೊಳಗೊಂಡ ವಿವಿಧ ಗೋಡೆ ಬರಹವನ್ನು ತಹಸೀಲ್ದಾರ್​ ಬರೆಸಿದ್ದಾರೆ. ಪತ್ನಿ ಕಾವ್ಯಾ ಜತೆ ಅಂಗನವಾಡಿಗೆ ತೆರಳಿ ಮಕ್ಕಳೊಂದಿಗೆ ಮಗಳು ಪ್ರಾಚಿಯ ಜನ್ಮದಿನ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ಸರ್ಕಾರಿ ಶಾಲೆಗಳು ಉಳಿಯಬೇಕಿದೆ. ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಮಾತ್ರವಲ್ಲದೆ ಸಮುದಾಯವೂ ಕೈಜೋಡಿಸಬೇಕು. ಜನ್ಮದಿನ ವಿಶೇಷ ಸಂದರ್ಭಗಳಲ್ಲಿ ಶಾಲೆಯ ಅಭಿವೃದ್ಧಿಗೆ ಕೈಲಾದಷ್ಟು ನೆರವು ನೀಡಬೇಕು. ಅದೇ ಉದ್ದೇಶದಿಂದ ಮಗಳ ಜನ್ಮದಿನದ ನೆನಪಿಗೆ ಅಂಗನವಾಡಿ ಕೇಂದ್ರಕ್ಕೆ ಪೇಂಟಿಂಗ್ ಮಾಡಿಸಿ ಮಗಳ ಜನ್ಮದಿನವನ್ನೂ ಅಲ್ಲಿಯೇ ಆಚರಿಸಿದ್ದೇವೆ ಎಂದು ಕುಷ್ಟಗಿ ತಹಸೀಲ್ದಾರ್ ಎಂ.ಸಿದ್ದೇಶ ಖುಷಿಯಿಂದ ಹೇಳಿದರು.

    ಕಳೆದ ವರ್ಷ ಅಂದರೆ 2021ರ ಡಿಸೆಂಬರ್​ನಲ್ಲಿ ಕುಷ್ಟಗಿ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ತಳವಾರ ಅವರು ತನ್ನ ಮಗ ಶ್ರೀನಿವಾಸನನ್ನು ಪಟ್ಟಣದ ಇಂದಿರಾ ಕಾಲನಿಯ ಅಂಗನವಾಡಿ ಕೇಂದ್ರಕ್ಕೆ ದಾಖಲಿಸಿ ಸ್ಥಳೀಯರ ಉಬ್ಬೇರುವಂತೆ ಮಾಡಿದ್ದರು. ಬೇಬಿ ಸಿಟ್ಟಿಂಗ್ಸ್, ಕಿಂಡರ್​ ಗಾರ್ಡನ್​ಗಳ ವ್ಯಾಮೋಹಕ್ಕೆ ಸಿಲುಕಿರುವ ಜನರ ನಡುವೆ ಈ ನ್ಯಾಯಾಧೀಶರು ಮತ್ತು ತಹಸೀಲ್ದಾರ್​ ವಿಭಿನ್ನವಾಗಿ ನಿಲ್ಲುತ್ತಾರೆ.

    ಮಗನನ್ನು ಅಂಗನವಾಡಿಗೆ ಸೇರಿಸಿದ ಕೊಪ್ಪಳದ ಕುಷ್ಟಗಿ ಜಡ್ಜ್! ಕಾರಣ ಕೇಳಿದ್ರೆ ಮೆಚ್ಚಿಕೊಳ್ತೀರಿ…

    ‘ಫ್ಯಾಟ್’ ಸರ್ಜರಿಗೆ ಕನ್ನಡ ಕಿರುತೆರೆ ನಟಿ ಬಲಿ! ಆಪರೇಷನ್​ ವೇಳೆ ನಡೆಯಿತು ದುರಂತ, ಸತ್ತ ಮೇಲೂ ಬಿಲ್​ ಕೇಳಿದ ಆಸ್ಪತ್ರೆ

    ನಾಲ್ವರನ್ನು ಮದ್ವೆ ಆಗಿದ್ದಾನೆ, ಹಲವರ ಜತೆ ಅಕ್ರಮ ಸಂಬಂಧವಿದೆ, ನನ್ನನ್ನು ಕಾಪಾಡಿ… ಬೆಂಗ್ಳೂರಲ್ಲಿ ಪೇದೆ ಪತ್ನಿ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts