More

    ಈ ಕಾಲನಿಗೆ ಮತಯಾಚನೆಗೂ ಬರಲ್ವಂತೆ!

    ಕುಷ್ಟಗಿ: ಪಟ್ಟಣದ 1ನೇ ವಾರ್ಡ್‌ನ ಲಿಯೋ ಕಾಲನಿ ಪುರಸಭೆಯ ನಿರ್ಲಕ್ಷ್ಯಕ್ಕೊಳಗಾಗಿದೆ. ಚುನಾವಣೆ ವೇಳೆ ಮತಯಾಚಿಸಲು ಯಾರೂ ಬರುವುದಿಲ್ಲ. ಆದರೂ ಮತದಾನದ ಹಕ್ಕು ಚಲಾಯಿಸುತ್ತಿದ್ದೇವೆಂದು ನಿವಾಸಿಗಳು ಅಲವತ್ತುಕೊಳ್ಳುತ್ತಿದ್ದಾರೆ.

    ಕಾಲನಿಗೆ ಸಂಪರ್ಕಿಸುವ ರಸ್ತೆಯಲ್ಲಿ ಹಾದು ಹೋಗಿರುವ ಚರಂಡಿ ತೆರೆದುಕೊಂಡಿದೆ. ಕಿತ್ತು ಹೋಗಿರುವ ಸ್ಲ್ಯಾಬ್ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ದ್ವಿಚಕ್ರ ವಾಹನ ಓಡಾಡುವಷ್ಟು ಮಾತ್ರ ಸ್ಲ್ಯಾಬ್ ಇದ್ದು, ಬೈಕ್ ಸವಾರರು ಆತಂಕದಲ್ಲಿ ಓಡಾಡುತ್ತಿದ್ದಾರೆ. ಆಯ ತಪ್ಪಿ ಚರಂಡಿ ಕಾಲುವೆಯಲ್ಲಿ ಬೀಳುವುದು ಸಾಮಾನ್ಯವಾಗಿದೆ. ಚರಂಡಿ ಕಾಲುವೆಯ ಹೂಳು ತಗೆಯದ ಕಾರಣ ಕಾಲುವೆಯಲ್ಲಿ ಕಸ ಸಂಗ್ರಹಗೊಂಡು ದ್ರವತ್ಯಾಜ್ಯ ಸಾಗಲು ಮಾರ್ಗವಿಲ್ಲದಂತಾಗಿದೆ. ಕಾಲನಿಯಲ್ಲಿ ಸಂಗ್ರಹಗೊಳ್ಳುವ ಕಸ ವಿಲೇವಾರಿಯೂ ಆಗುತ್ತಿಲ್ಲ. ಬೀದಿದೀಪಗಳೂ ಅಷ್ಟಕ್ಕಷ್ಟೆ ಇವೆ ಎಂದು ನಿವಾಸಿಗಳು ದೂರಿದ್ದಾರೆ. 1ನೇ ವಾರ್ಡ್‌ನ ಶರೀಫ್ ನಗರದಲ್ಲಿ ಹಾವಾಡಿಗರು ಸೇರಿ ಬುಡಕಟ್ಟು ಜನಾಂಗ ವಾಸಿಸುತ್ತಿದ್ದಾರೆ. ವಾರ್ಡ್‌ನ ಬಹುತೇಕ ಮತದಾರರು ಇಲ್ಲಿಯೇ ಇದ್ದಾರೆ. ಹೀಗಾಗಿ ಕುಷ್ಟಗಿ-ಸಿಂಧನೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಲಿಯೋ ಕಾಲನಿ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದು ನಿವಾಸಿಗಳ ಅಭಿಪ್ರಾಯ.

    ಲಿಯೋ ಕಾಲನಿಯಲ್ಲಿನ ಚರಂಡಿ ಕಾಲುವೆಗಳಿಗೆ ಸ್ಲ್ಯಾಬ್ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು. ಕಾಲನಿಯಲ್ಲಿನ ಸ್ವಚ್ಛತೆ ಹಾಗೂ ಇತರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು.
    | ಜಿ.ಕೆ.ಹಿರೇಮಠ, ಪುರಸಭೆ ಅಧ್ಯಕ್ಷ, ಕುಷ್ಟಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts