More

    ಮಕ್ಕಳಲ್ಲಿ ವಚನ ಸಾಹಿತ್ಯದ ಅಭಿರುಚಿ ಹೆಚ್ಚಿಸಿ: ಬಿಇಒ ಸುರೇಂದ್ರ ಕಾಂಬ್ಳೆ ಸಲಹೆ

    ಕುಷ್ಟಗಿ: ವಚನಗಳ ಸಾರ ಅರಿತರೆ ವ್ಯಕ್ತಿತ್ವ ವಿಕಸನದ ಜತೆಗೆ ಮೌಲ್ಯಯುತ ಜೀವನ ನಡೆಸಲು ಸಾಧ್ಯ ಎಂದು ಬಿಇಒ ಸುರೇಂದ್ರ ಕಾಂಬ್ಳೆ ಹೇಳಿದರು.

    ಪಟ್ಟಣದ ಶಿಕ್ಷಕ ವೆಂಕಪ್ಪ ಗಂಜಿಹಾಳ ನಿವಾಸದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಬುಧವಾರ ಸಂಜೆ ಏರ್ಪಡಿಸಿದ್ದ ವಚನ ಸಾಹಿತ್ಯ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದ ಒಳಿತು ಬಯಸಿ ರಚಿಸಿರುವ ವಚನಗಳ ಚಿಂತನ-ಮಂಥನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಅಧ್ಯಯನ ಮಾಡುವ ಮೂಲಕ ಮಕ್ಕಳಲ್ಲಿ ವಚನ ಸಾಹಿತ್ಯ ಓದುವ ಅಭಿರುಚಿ ಹೆಚ್ಚಿಸಬೇಕಿದೆ. ಕಾಯಕ ದಾಸೋಹ, ಪ್ರಸಾದ ಪರಿಕಲ್ಪನೆ ಶರಣರ ದೂರದೃಷ್ಟಿಯ ಫಲವಾಗಿದೆ ಎಂದರು.

    ಪರಿಷತ್ ಜಿಲ್ಲಾಧ್ಯಕ್ಷ ಜಿ.ಎಸ್.ಗೋನಾಳ ಮಾತನಾಡಿ, ಶರಣರ ವಚನ ಸಾಹಿತ್ಯ ಸಾರ್ವಕಾಲಿವಾದದ್ದು, ವಚನಗಳ ಅಧ್ಯಯನದ ಜತೆ ಶರಣರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತಾಲೂಕು ಅಧ್ಯಕ್ಷ ನಟರಾಜ ಸೋನಾರ ಮಾತನಾಡಿ, ವಾಸ್ತವಿಕ ಬದುಕಿಗೆ ಶರಣರ ವಚನಗಳು ದಾರಿದೀಪವಾಗಿವೆ ಎಂದರು. ಸಾಹಿತಿ ಡಾ.ನಾಗರಾಜ ಹೀರಾ ವಿಶೇಷ ಉಪನ್ಯಾಸ ನೀಡಿದರು. ಶಸಾಪ ಜಿಲ್ಲಾ ಕಾರ್ಯದರ್ಶಿ ಉಮೇಶ ಸುರ್ವೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುದರಿ, ನಿರ್ದೇಶಕ ಅಲ್ತಾಫ್ ಹುಸೇನ್, ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ಎಚ್.ಮಹೇಶ್, ಪ್ರಮುಖರಾದ ವಿದ್ಯಾ ಕಂಪಾಪುರಮಠ, ಕುಮಾರಸ್ವಾಮಿ ಹಿರೇಮಠ, ವೆಂಕಪ್ಪ ಗಂಜಿಹಾಳ, ಅನಿಲ್ ಅಲಮೇಲ್, ಶಾಂತರಾಜ್ ಜೈನ್, ಮಲ್ಲಪ್ಪ ಕಂಚಿ, ಮೌನೇಶ ಬಡಿಗೇರ, ಸುಜಾತಾ ಗಂಜಿಹಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts