More

    ಹುತ್ರಿದುರ್ಗ ಬೆಟ್ಟದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಯುವಕ-ಯುವತಿಯ ಬಟ್ಟೆ ಬಿಚ್ಚಿ ಕಿರುಕುಳ, ಚಾರಣಿಗರಿಗೆ ಬೆದರಿಕೆ ಹಾಕಿ ದರೋಡೆ…

    ಹುಲಿಯೂರುದುರ್ಗ(ಕುಣಿಗಲ್​): ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಹುತ್ರಿದುರ್ಗ ಬೆಟ್ಟದಲ್ಲಿ ಚಾರಣಕ್ಕೆ ಬಂದ ಪ್ರವಾಸಿಗರನ್ನು ದುಷ್ಕರ್ಮಿಗಳು ಬೆದರಿಸಿ ಹಣ, ಚಿನ್ನಾಭರಣ, ಮೊಬೈಲ್​ ಸುಲಿಗೆ ಮಾಡಿರುವ ಹಾಗೂ ಯುವಕ-ಯುವತಿಯ ಬಟ್ಟೆ ಬಿಚ್ಚಿ ನಗ್ನ ವಿಡಿಯೋ ಮಾಡಿ ಕಿರುಕುಳ ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಸೆ.10ರಂದು ಚಾರಣಕ್ಕೆ ಬಂದ ಯುವಕ ಹಾಗೂ ಯುವತಿಯನ್ನು ಬಿಸಿಲು ಬಸವಣ್ಣ ದೇವಾಲಯದ ಬಳಿ ಬೆದರಿಸಿ ಬಟ್ಟೆ ಬಿಚ್ಚಿಸಿದ ಕಿಡಿಗೇಡಿಗಳು ತಮ್ಮ ಮೊಬೈಲ್​ನಲ್ಲಿ ನಗ್ನ ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಯುವಕ- ಯುವತಿ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದು, ಹಣವಿಲ್ಲ ಎಂದಾಗ ಮೊಬೈಲ್​ ಕಸಿದುಕೊಂಡಿದ್ದಾರೆ. ಅಲ್ಲದೆ ಬೆಟ್ಟದ ಮೇಲಕ್ಕೆ ಹೋಗಿ ಬರುವ ಒಳಗೆ ಮೂವತ್ತು ಸಾವಿರ ಹಣ ಒದಗಿಸಬೇಕು. ಇಲ್ಲವಾದಲ್ಲಿ ವಿಡಿಯೋ ವೈರಲ್​ ಮಾಡುವುದಾಗಿಯೂ ಬೆದರಿಸಿದ್ದಾರೆ. ಈ ವಿಷಯ ಗೊತ್ತಾಗಿ ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಂತೆ ಬೈಕ್​ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ಇದಕ್ಕೂ ಮುನ್ನಾ ದಿನವಾದ ಸೆ.9ರಂದೂ ಇಂತಹದ್ದೇ ಪ್ರಕರಣ ನಡೆದಿದೆ. ಚಾರಣಕ್ಕೆ ಬಂದಿದ್ದ ಯುವಕ ಮತ್ತು ಮಹಿಳೆಗೆ ಚಾಕು ತೋರಿಸಿ ಅವರಿಂದ ಮೊಬೈಲ್​, ಒಡವೆ ದೋಚಿ ದರೋಡೆಕೋರರು ಪರಾರಿಯಾಗಿದ್ದರು. ಕದ್ದ ಮೊಬೈಲ್​ ಬಳಸಿಕೊಂಡು ಕೆಂಪನಹಳ್ಳಿ ಪೆಟ್ರೋಲ್​ ಬಂಕ್​ನಲ್ಲಿ ಫೋನ್​ ಪೇ ಮೂಲಕ 13 ಸಾವಿರ ರೂಪಾಯಿ ಪಡೆದಿರುವುದು ಪೆಟ್ರೋಲ್​ ಬಂಕ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಹುತ್ರಿದುರ್ಗ ಬೆಟ್ಟದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಎರಡು ದಿನಗಳ ಬಳಿಕ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಹುತ್ರಿದುರ್ಗ ಬೆಟ್ಟವು 3712 ಅಡಿಗಳ ಎತ್ತರದಲ್ಲಿದ್ದು, ನಾಡಪ್ರಭು ಕೆಂಪೇಗೌಡರು ಕಟ್ಟಿಸಿದ ಕೋಟೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಐತಿಹಾಸಿಕ ಸ್ಥಳದಲ್ಲಿ ಬಸವಣ್ಣ ದೇವಸ್ಥಾನವೂ ಇದೆ. ಬೆಟ್ಟದ ಮಧ್ಯೆ ಹುತ್ರಿ ಗ್ರಾಮವೂ ಇದೆ. ಪ್ರವಾಸಿಗರು, ಚಾರಣಿಗರಿಗೆ ಆಕರ್ಷಕ ಸ್ಥಳ ಇದಾಗಿದೆ. ಇಂತಹ ಸ್ಥಳದಲ್ಲಿ ದರೋಡೆ, ಬೆದರಿಕೆ ಪ್ರಕರಣ ನಡೆದಿರುವುದು ಸ್ಥಳೀಯರು ಮತ್ತು ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ.

    ಬೆಟ್ಟದಲ್ಲಿಲ್ಲ ಭದ್ರತೆ: ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಿಂದ ವಾರಾಂತ್ಯದಲ್ಲಿ ಒಬ್ಬರು ಗೃಹರಕ್ಷಕ ಸಿಬ್ಬಂದಿ ನೇಮಿಸಲಾಗಿತ್ತು. ಆದರೆ ಕರೊನಾ ಬಳಿಕ ಗಸ್ತು ವಾಪಸ್​ ಪಡೆಯಲಾಗಿದ್ದು, ಬೆಟ್ಟಕ್ಕೆ ಬಂದು ಹೋಗುವ ಪ್ರವಾಸಿಗರಿಗೆ ಭದ್ರತೆ ಇಲ್ಲದಂತಾಗಿದೆ. 3 ವರ್ಷಗಳ ಹಿಂದೆ ಬಿಸಿಲು ಬಸವಣ್ಣ ವಿಗ್ರಹ ಕಳವು ಮಾಡಲಾಗಿತ್ತು. ಇದುವರೆಗೂ ವಿಗ್ರಹ ಪತ್ತೆಯಾಗಿಲ್ಲ. ಅಲ್ಲದೆ ಬೆಟ್ಟದಲ್ಲಿ ನಿಧಿಗಳ್ಳರ ಹಾವಳಿಯೂ ಇದ್ದು, ಪೊಲೀಸರು ಭದ್ರತೆ ಒದಗಿಸಿದರೆ ದರೋಡೆ ಸೇರಿ ಇನ್ನಿತರ ಅಕ್ರಮ ತಡೆಗಟ್ಟಬಹುದು.

    ಎಲ್ಲೆಲ್ಲೂ ಒಕ್ಕಲಿಗ ವಧು-ವರರ ಸಮಾವೇಶದ್ದೇ ಮಾತು! ಬಾಳಸಂಗಾತಿ ಹುಡುಕಾಟಕ್ಕೆ ಬಂದ 13 ಸಾವಿರ ಮಂದಿಗೆ ಭಾರೀ ನಿರಾಸೆ…

    ಕಾಡಾನೆಯನ್ನೇ ಹಿಮ್ಮೆಟ್ಟಿಸಿದ ಶ್ವಾನ! ಕನಕಪುರದಲ್ಲಿ ಘಟನೆ, ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

    ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts