More

    ಚಂಡೂರು ವೃಕ್ಷ ಕ್ಷೇತ್ರ ಪ್ರವಾಸಿ ತಾಣವಾಗಲಿ- ಶಾಸಕ ಹಾಲಪ್ಪ ಆಚಾರ್ ಸಲಹೆ

    ಕುಕನೂರು: ಚಂಡೂರು ಗ್ರಾಮದ ವೃಕ್ಷ ಕ್ಷೇತ್ರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಬೇಕು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ತಾಲೂಕಿನ ಚಂಡೂರು ವೃಕ್ಷ ಕ್ಷೇತ್ರದಲ್ಲಿ ಶನಿವಾರ 10 ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಪರಿಸರ ದಿನಾಚರಣೆ ಒಂದೆರಡು ಗಿಡ ನೆಡಲು ಸೀಮಿತವಾಗದೆ ಸರ್ಕಾರಿ ಜಾಗದಲ್ಲಿ ಹೆಚ್ಚು ಸಸಿ ನೆಟ್ಟು ಹಸಿರೀಕರಣಕ್ಕೆ ಅರಣ್ಯ ಇಲಾಖೆ ಮುಂದಾಗಬೇಕು. ಯಲಬುರ್ಗಾ ಹಾಗೂ ಕುಕನೂರು ತಾಲೂಕು ಬಯಲುಸೀಮೆ ಪ್ರದೇಶವಾಗಿವೆ. ಚಂಡೂರು ವೃಕ್ಷ ಕ್ಷೇತ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ ಪ್ರವಾಸಿ ತಾಣವಾಗಿಸಲು ಅನುದಾನ ಒದಗಿಸುತ್ತೇನೆ ಎಂದರು.

    ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣವರ್, ತಾಪಂ ಅಧ್ಯಕ್ಷ ಜಗನ್ನಾಥಗೌಡ ಪಾಟೀಲ, ಎಸಿಎಫ್ ಶಿವಕುಮಾರ, ಆರ್‌ಎಫ್‌ಒ ನಾಗರಾಜ, ಯಲಬುರ್ಗಾ ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪ್ರಮುಖರಾದ ಬಸವನಗೌಡ ತೊಂಡಿಹಾಳ, ಕರಬಸಯ್ಯ ಬಿನ್ನಾಳ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts