More

    ಕನ್ನಡ ಭಾಷೆ ಮಹತ್ವ ತಿಳಿಸಿ- ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಲಹೆ

    ಕುಕನೂರು: ಪ್ರತಿಯೊಬ್ಬರೂ ಕನ್ನಡ ಭಾಷೆ ಉಳಿಸಿ, ಬೆಳೆಸಲು ಶ್ರಮಿಸಬೇಕು ಎಂದು ರಾಜೂರು-ಆಡ್ನೂರು ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ಹೇಳಿದರು.

    ರಾಜೂರು ಗ್ರಾಮದ ಶ್ರೀಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ರಾಜೂರು ಗ್ರಾಮದಲ್ಲಿ ಸಮ್ಮೇಳನ ಆಯೋಜಿಸಿರುವುದು ಖುಷಿಯಾಗಿದೆ. ಇಂತಹ ಅರ್ಥಪೂರ್ಣ ಸಾಹಿತ್ಯ ಜಾತ್ರೆಗೆ ತಾಲೂಕಿನ ಎಲ್ಲ ಗ್ರಾಮಸ್ಥರು ಆಗಮಿಸಿ ಯಶಸ್ವಿಗೊಳಿಸಬೇಕು. ತಾಲೂಕಿನ ಪ್ರಮುಖ ದೇವಸ್ಥಾನಗಳ ಚಿತ್ರಗಳನ್ನು ಒಳಗೊಂಡು ರಚಿಸಿರುವ ಲಾಂಛನ ಅರ್ಥಪೂರ್ಣವಾಗಿದೆ ಎಂದ ಅವರು, ಮಾತೃಭಾಷೆ ಕನ್ನಡದ ಮಹತ್ವ ಕುರಿತು ಮಕ್ಕಳಿಗೆ ತಿಳಿಹೇಳಬೇಕು ಎಂದರು.

    ಪ್ರಮುಖರಾದ ಚಂದ್ರಪ್ಪ ರಾಜೂರು, ಶ್ರೀಕಾಂತ ಪೂಜಾರ, ಫಕೀರ್‌ಸಾಬ್ ರಾಜೂರು, ಎಸ್.ಎಂ.ಕಿಂದರಿ, ದಯಾನಂದ ಪಾಟೀಲ್, ಜಗದೀಶಪ್ಪ ಸೋಂಪುರ, ಜಗದೀಶ ತೊಂಡಿಹಾಳ, ಶಿವಪ್ಪ ದಳವಾಯಿ, ಸತ್ಯಪ್ಪ ಸೊಂಪುರ, ಶರಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts