ಕುಕನೂರು: ಗ್ರಾಮೀಣ ಭಾಗದ ಕೃಷಿ ಕೂಲಿಕಾರರಿಗೆ ನರೇಗಾ ಯೋಜನೆ ವರದಾನವಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಶರಣಪ್ಪ ಕೆಳಗಿನಮನಿ ಹೇಳಿದರು.
ಇದನ್ನೂ ಓದಿ: ಕಾಲೇಜುಗಳಿಗೆ ಮೂಲಸೌಕರ್ಯ, ಉಪನ್ಯಾಸಕರ ಸಮಸ್ಯೆ ನೀಗಿಸಲು ಕ್ರಮ
ತಾಲೂಕಿನ ಇಟಗಿ ಗ್ರಾಪಂ ಆವರಣದಲ್ಲಿ ನರೇಗಾ ಯೋಜನೆಯ 18 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಕೂಲಿಕಾರರಿಗೆ ಜಾಬ್ ಕಾರ್ಡ್ ವಿತರಿಸಿ ಮಾತನಾಡಿದರು.
ನರೇಗಾ ಯೋಜನೆಯಿಂದ ಕೂಲಿಕಾರರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 4,07,399 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ವಿಶೇಷವೆಂದರೆ 180 ಅಂಗವಿಕಲರು ಕೆಲಸ ಮಾಡಿದ್ದಾರೆ. ಕೆಲಸ ಮಾಡಿದ 8 ದಿನದೊಳಗಾಗಿ ಕೂಲಿ ಪಾವತಿಸಲಾಗಿದೆ ಎಂದರು.
ಗ್ರಾಮ ಪಂಚಾಯಿತಿಯಲ್ಲಿ ಪ್ರಸಕ್ತ ವರ್ಷ ನರೇಗಾದಡಿ 100 ದಿನ ಕೆಲಸ ಮಾಡಿದ ಶಾಂತವ್ವ ವೆಂಕಪ್ಪ ಹಿರೇನಿಂಗಣ್ಣವರ್ ಅವರಿಗೆ ಕಾಯಕ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಸುವರ್ಣಾ ಹೊನ್ನಪ್ಪ ಕುರಿ, ಸದಸ್ಯರಾದ ಗವಿಸಿದ್ದಪ್ಪ ಮುದ್ದಾಬಳ್ಳಿ, ಲಕ್ಷ್ಮಣ ಮ್ಯಾಗೇರಿ, ದೇವಪ್ಪ ಹರಿಜನ, ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಇತರರಿದ್ದರು.