More

    ನೆಲಜೇರಿ ಶರಣಬಸವೇಶ್ವರ ತೇರು ಸಂಪನ್ನ

    ಕುಕನೂರು: ತಾಲೂಕಿನ ನೆಲಜೇರಿ ಗ್ರಾಮದ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವ ನಿಮಿತ್ತ ಸಾಮೂಹಿಕ ವಿವಾಹ ಹಾಗೂ ಮಹಾರಥೋತ್ಸವ ಶನಿವಾರ ಜರುಗಿತು.

    ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನ ನೆರವೇರಿದವು. ಭಕ್ತರು ಪೂಜೆ ಸಲ್ಲಿಸಿ, ನೈವೆದ್ಯ ಸಮರ್ಪಿಸಿ ಹರಕೆ ತೀರಿಸಿದರು. ಅನ್ನಸಂತರ್ಪಣೆ ಸೇವೆ ನಡೆಯಿತು.

    ರಥೋತ್ಸವಕ್ಕೆ ಮೈನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕುಕನೂರಿನ ಶ್ರೀ ಮಹಾದೇವ ಸ್ವಾಮೀಜಿ, ಮಂಗಳೂರಿನ ಅರಳೇಲೆ ಹಿರೇಮಠದ ಸ್ವಾಮೀಜಿ ಚಾಲನೆ ನೀಡಿದರು. ರಥ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು. ಶರಣಬಸವೇಶ್ವರ ಜಯಘೋಷ ಮುಗಿಲು ಮುಟ್ಟಿತ್ತು. ಗ್ರಾಮ ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

    ಮೈನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬದುಕಿನ ಕ್ಷಣಗಳನ್ನು ಪ್ರತಿಯೊಬ್ಬರು ಸವಿಯಬೇಕು. ರುಚಿಯಾದ ಹಣ್ಣನ್ನು ಸವಿಯುವಂತೆ ಜೀವನದ ಪ್ರತಿ ಕ್ಷಣಗಳನ್ನು ಅನುಭವಿಸಬೇಕು. ಸತ್ಯದ ಹಾದಿಯಲ್ಲಿ ನಡೆಯುವುದನ್ನು ರೂಢಿಸಿಕೊಳ್ಳಬೇಕು. ಕೆಟ್ಟತನ ಅನ್ನುವುದು ಕೆಟ್ಟ ಹಣ್ಣಿದ್ದಂತೆ. ಮನುಷ್ಯದಲ್ಲಿ ಕೆಟ್ಟ ಗುಣ ಇರಬಾರದು. ಇದ್ದರೆ ಅವುಗಳನ್ನು ಕೆಟ್ಟ ಹಣ್ಣಿನಂತೆ ದೂರ ಎಸೆಯಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts