More

    ಧಾನ್ಯದ ದಾನವೂ ಒಂದು ಆಚಾರ – ಶಾಸಕ ಹಾಲಪ್ಪ ಆಚಾರ್ ಅಭಿಮತ

    ಕುಕನೂರು: ಧಾನ್ಯದ ದಾನ ಕೂಡ ಒಂದು ಆಚಾರವಾಗಿದೆ. ಬಡವರ ಒಡಲು ತಣಿದಾಗಲೇ ಧಾನ್ಯ ಅಮೃತ ಆಗುತ್ತದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ವಿತರಣೆಗಾಗಿ ಬುಧವಾರ ಐದು ಸಾವಿರ ಆಹಾರ ಸಾಮಗ್ರಿ ಕಿಟ್‌ಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದರು. ಆಹಾರ ಸಾಮಗ್ರಿ ವಿತರಣೆಯಲ್ಲಿ ರಾಜಕೀಯವಾಗಲಿ, ಪ್ರಚಾರದ ದುರಾಸೆಯಾಗಲಿ ಇಲ್ಲ. ತಾರತಮ್ಯ ಮಾಡದೆ ಬಡವರಿಗಾಗಿ ಆಹಾರ ಕಿಟ್ ನೀಡಿದ್ದೇನೆ ಎಂದರು.

    2014ರವರೆಗೆ ದೇಶದಲ್ಲಿ ಪೊಲಿಯೋ ಸೇರಿ ಪ್ರಮುಖ ಲಸಿಕೆಗಳು ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪಿದ್ದಿಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇಂಧ್ರ ಧನುಷ್ ಯೋಜನೆಯಡಿ ಲಸಿಕಾ ಅಭಿಯಾನ ಸಾಫಲ್ಯ ಕಂಡಿದೆ. ಈಗಾಗಲೇ 25 ಕೋಟಿ ಜನರಿಗೆ ಕರೊನಾ ಲಸಿಕೆ ನೀಡಿದ್ದು, ಇನ್ನೂ 80 ಕೋಟಿ ಮಂದಿಗೆ ವ್ಯಾಕ್ಸಿನೇಷನ್ ಗುರಿ ಹೊಂದಲಾಗಿದೆ. ಲಾಕ್‌ಡೌನ್ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಡವರಿಗಾಗಿ ಹಲವು ಪ್ಯಾಕೇಜ್ ಘೋಷಿಸಿದ್ದಾರೆ. ಕೇಂದ್ರದ ಗರೀಬ್ ಕಲ್ಯಾಣ ಯೋಜನೆಯಡಿ ಅನ್ನಭಾಗ್ಯ ಸೇವೆಯೂ ಲಭ್ಯವಾಗುತ್ತಿದೆ ಎಂದು ಶಾಸಕ ಹಾಲಪ್ಪ ಆಚಾರ್ ತಿಳಿಸಿದರು.

    ತಹಸೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಪಿಡಿಒ ಮತು ಗ್ರಾಮಲೆಕ್ಕಿಗರ ಸಹಯೋಗದೊಂದಿಗೆ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಆಹಾರದ ಕಿಟ್ ವಿತರಿಸಲಾಗುವುದು ಎಂದರು. ತಾಪಂ ಇಒ ಸೋಮಶೇಖರ ಬಿರಾದಾರ, ಪಪಂ ಅಧ್ಯಕ್ಷ ಶಂಭು ಜೋಳದ, ತಾಪಂ ಮಾಜಿ ಉಪಾಧ್ಯಕ್ಷರಾದ ಶಿವಕುಮಾರ ನಾಗಲಾಪೂರ ಮಠ, ಕಳಕಪ್ಪ ಕಂಬಳಿ, ಪ್ರಮುಖರಾದ ಬಸವನಗೌಡ ತೊಂಡಿಹಾಳ, ಸಿ.ಎಚ್.ಪಾಟೀಲ್, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಶಿವಪ್ಪ ವಾದಿ, ಶಿವಣ್ಣ ವಾಲಿ, ಶಿವಲೀಲಾ ದಳವಾಯಿ, ಸುಜಾತಾ ಗೊರ್ಲೆಕೊಪ್ಪ, ಮಹೇಶ್ವರಿ, ಕರಿಬಸಯ್ಯ ಬಿನ್ನಾಳ, ಬಸವರಾಜ ಹಾಳಕೇರಿ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts