More

    ಓಬವ್ವ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

    ಕೂಡ್ಲಿಗಿ: ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ನ.11ರಂದು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಟಿ. ಜಗದೀಶ ತಿಳಿಸಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತಾನಾಡಿದರು. ಅಂದು ಬೆಳಗ್ಗೆ 10ಕ್ಕೆ ತಾಲೂಕು ಆಡಳಿತ ಹಾಗೂ ಛಲವಾದಿ ಸಮಾಜದಿಂದ ಓಬವ್ವ ಭಾವಚಿತ್ರಕ್ಕೆ ಪೂಜೆ ಮಾಡಿ, ಪುಷ್ಪ ನಮನ ಸಲ್ಲಿಸಲಾಗುವುದು ಎಂದರು.

    ಛಲವಾದಿ ಮಹಾಸಭಾದ ರಾಜ್ಯ ನಿರ್ದೇಶಕ ಹಿರೇಕುಂಬಳಗುಂಟೆ ಉಮೇಶ್ ಮಾತಾನಡಿ, ತಾಲೂಕಿನ ಎಲ್ಲ ಶಾಲೆ, ಕಾಲೇಜು ಹಾಗೂ ತಾಲೂಕು ಕಚೇರಿ ಮತ್ತು ಗ್ರಾಪಂಗಳಲ್ಲಿ ಒನಕೆ ಓಬವ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಸಾಹಸಗಾಥೆ ಬಗ್ಗೆ ತಿಳಿಸಬೇಕು. ಛಲವಾದಿ ಸಮುದಾಯದ ಗಣ್ಯರು ಹಾಗೂ ತಾಲೂಕಿನ ಗುಡೇಕೋಟೆ ಗ್ರಾಮದ ಓಬವ್ವ ಮನೆತನದವರನ್ನು ಸನ್ಮಾನಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಪ್ರತಿ ಗ್ರಾಪಂನಲ್ಲಿ ಓಬವ್ವಳ ಭಾವಚಿತ್ರಕ್ಕೆ ಪೂಜೆ ಮಾಡಿ ಬ್ಯಾನರ್ ಅಳವಡಿಸುವಂತೆ ತಾಪಂ ಇಒ ರವಿಕುಮಾರ್‌ಗೆ ಆದೇಶಿಸಿದರು.

    ಕಾರ್ಯಕ್ರಮದಲ್ಲಿ ಐದು ಜನ ಗಣ್ಯರನ್ನು ಸನ್ಮಾನಿಸಲಾಗುವುದು ಹಾಗೂ ಓಬವ್ವ ಕುರಿತು ಮುಖ್ಯಭಾಷಣಕಾರರಾಗಿ ಪಾಲ್ಗೊಳ್ಳಲು ಬಿಸಿಯೂಟ ಯೋಜನಾಧಿಕಾರಿ ಆಂಜನೇಯ ಅವರಿಗೆ ಆಹ್ವಾನ ನೀಡಿದ ತಹಸೀಲ್ದಾರ್, ಜಯಂತ್ಯುತ್ಸವಕ್ಕೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿರುವಂತೆ ಸೂಚಿಸಿದರು.

    ನಿವೃತ್ತ ಪಿಎಸ್‌ಐ ಸಿ.ತಿಪ್ಪೇಸ್ವಾಮಿ, ಹೆಗ್ಡಾಳ ಕೊಟ್ರೇಶ್, ರಾಜಪ್ಪ ಕುದುರೆಡುವು, ನಿವೃತ್ತ ಶಿಕ್ಷಕ ಮಾರಪ್ಪ, ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್.ಸುರೇಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts