More

    ಕೂಡ್ಲಿಗಿ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳ ಭೇಟಿ, ನಿರ್ಗತಿಕರ ಆರೋಗ್ಯ ತಪಾಸಣೆ

    ಕೂಡ್ಲಿಗಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಪಟ್ಟಣದ ಪುನಶ್ಚೇತನ ವೃದ್ಧಾಶ್ರಮ ಹಾಗೂ ವಸತಿ ನಿಲಯದಲ್ಲಿನ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ವೃದ್ಧರು ಹಾಗೂ ನಿರಾಶ್ರಿತರ ಆರೋಗ್ಯ ತಪಾಸಣೆ ಮಾಡಿದರು.

    ಜಿಲ್ಲಾ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪ ಮಾತನಾಡಿ, ಹಿರಿಯರ ಆರೋಗ್ಯ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡುತ್ತಿದ್ದೇವೆ. ವಿಶ್ವವನ್ನು ತಲ್ಲಣಗೊಳಿಸಿರುವ ಕರೊನಾ ತಡೆಯಲು ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಚೆನ್ನಾಗಿ ಕೈತೊಳೆದು ಕೆಲಸ ಪ್ರಾರಂಭ ಮಾಡಬೇಕು. ಹೊರಗಿನಿಂದ ಯಾರನ್ನು ಇಲ್ಲಿ ಸೇರಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.

    ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿ ಕೆ.ಮಹಾಂತೇಶ್, ಡಾ.ಎಸ್.ಪಿ.ಪ್ರದೀಪ್, ಡಾ.ನೇತ್ರಾವತಿ, ಡಾ.ವಿದ್ಯಾವತಿ, ಡಾ.ಯಶೋದಾ, ಕೆ.ಜಿ.ಕೋಟಿಲಿಂಗನ ಗೌಡ, ಕೃಷ್ಣವೇಣಿ, ಶ್ರುತಿ. ಮಾಲಾಶ್ರೀ, ಆಪ್ತ ಸಮಾಲೋಚಕ ಪ್ರಶಾಂತ ಕುಮಾರ್, ನಿರಾಶ್ರಿತರ ಕೇಂದ್ರದ ಅಧಿಕಾರಿ ಪಂಪಾಪತಿ, ಅಂಜಿನಪ್ಪ, ಸ್ನೇಹಾ ಕ್ಲಿನಿಕ್ ಆಪ್ತ ಸಮಾಲೋಚಕ ಡಿ.ಓಬಣ್ಣ, ಸಿಬ್ಬಂದಿಯಾದ ಮಹೇಶ್, ಈರಣ್ಣ ಇದ್ದರು. ಈ ಸಂದರ್ಭ ವೃದ್ಧರಿಗೆ ಹಾಗೂ ನಿರಾಶ್ರಿತರಿಗೆ ಸ್ಕ್ರೀನಿಂಗ್ ಹಾಗೂ ಬಿಪಿ ತಪಾಸಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts