More

    ದುಶ್ಚಟಮುಕ್ತ ಜೀವನಕ್ಕೆ ಟಿಎಚ್‌ಒ ಸಲಹೆ

    ಕೂಡ್ಲಿಗಿ: ದೇಶದ ಭವಿಷ್ಯ ರೂಪಿಸಬೇಕಿರುವ ಯುವಕರು ದುಶ್ಚಟಗಳ ದಾಸರಾಗುತ್ತಿರುವುದು ದುರದೃಷ್ಟಕರ ಎಂದು ಟಿಎಚ್‌ಒ ಎಸ್.ಪಿ. ಪ್ರದೀಪ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

    ಪಟ್ಟಣದ ಮದಕರಿ ವೃತ್ತದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದಿಂದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಜನ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಇಂದಿನ ಯುವ ಸಮೂಹ ಸಿಗರೇಟ್, ತಂಬಾಕು ಸೇವನೆ ಚಟಗಳಿಗೆ ದಾಸರಾಗಿ ಹರೆಯ ಹಾಗೂ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಬಾಯಿ ಮತ್ತು ಕರುಳು ಕ್ಯಾನ್ಸರ್‌ನಂತಹ ಮಾರಾಕ ಖಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಹೀಗಾಗಿ ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿದ್ದು ಸುಂದರ ಬದುಕು ಕಟ್ಟಿಕೊಳ್ಳಬೇಕು. ತಂಬಾಕು ರಹಿತ ವಿಶ್ವ ಸೃಷ್ಟಿ ಮಾಡಬೇಕು ಎಂದರು.

    ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು 2008ರಲ್ಲಿ ಸರ್ಕಾರ ನಿಷೇಧಿಸಿ ಕಾನೂನು ಜಾರಿಗೊಳಿಸಿದರೂ ಬೀಡಿ, ಸಿಗರೇಟ್ ಸೇದುವವರ ಸಂಖ್ಯೆ ಕಡಿಮೆಯಾಗಿಲ್ಲ. ಅಂತವರಿಗೆ ತಂಬಾಕು ಸೇವಿಸದವರು ತಿಳಿವಳಿಕೆ ಹೇಳಬೇಕು ಎಂದು ಸಲಹೆ ನೀಡಿದರು.

    ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ವಿ.ನಾಗೇಶ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಹೊನ್ನೂರಪ್ಪ, ವಕೀಲ ಸಿ.ವಿರೂಪಾಕ್ಷಪ್ಪ, ಐಸಿಟಿಸಿ ಆಪ್ತ ಸಹಾಯಕರಾದ ಕೆ.ಪ್ರಶಾಂತ, ಓಬಣ್ಣ, ಹಿರಿಯ ಆರೋಗ್ಯ ಸಹಾಯಕಿರಾದ ಕೆ. ಸುನಿತಾ, ಪಿ.ಬಿ. ಗಿರಿಜಾ, ಭವ್ಯಾ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts