More

    ಕುಡತಿನಿ ತಾಲೂಕು ಕೇಂದ್ರ ಮಾಡಿ: ವಿವಿಧ ಸಂಘಟನೆಗಳ ಮುಖಂಡರ ಆಗ್ರಹ

    ಕುರುಗೋಡು: ಕುಡತಿನಿಯನ್ನು ತಾಲೂಕು ಕೇಂದ್ರ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಪಪಂ ಅಧ್ಯಕ್ಷ ವಿ.ರಾಜಶೇಖರ ಹಾಗೂ ಮುಖ್ಯಾಧಿಕಾರಿ ಸತ್ಯನಾರಾಯಣ ರಾವ್‌ಗೆ ಮನವಿ ಸಲ್ಲಿಸಿದರು.

    ಮುಖಂಡರಾದ ಬಿ.ಸಂಪನ್ನ, ಬಾವಿ ಶಿವಕುಮಾರ ಮಾತನಾಡಿ, ಕುಡಿತಿನಿ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, 28 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಅಲ್ಲದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15ಕ್ಕೂ ಹೆಚು ಗ್ರಾಮಗಳು ಒಳಪಡುತ್ತವೆ. ಹಳ್ಳಿ ಜನರಿಗೆ ವ್ಯಾಪಾರ, ವ್ಯವಹಾರ ನಡೆಸಲು ಅನುಕೂಲವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ 11 ಕೈಗಾರಿಕೆಗಳು, ಹುಬ್ಬಳ್ಳಿ-ಗುಂತಕಲ್ ರೈಲ್ವೆ ಜಂಕ್ಷನ್, 6 ರಾಷ್ಟ್ರೀಕೃತ ಬ್ಯಾಂಕ್‌ಗಳು, ಎರಡು ಪದವಿ ಕಾಲೇಜು, ಮೂರು ಪದವಿ ಪೂರ್ವ ಕಾಲೇಜು, ಎರಡು ಐಟಿಐ ಕಾಲೇಜು, 50 ಕ್ಕೂ ದೇವಸ್ಥಾನಗಳಿವೆ. ಪಟ್ಟಣದ ಮಧ್ಯಭಾಗದಲ್ಲಿ ಎನ್‌ಎಚ್-63 ಚತುಷ್ಪಥ ರಸ್ತೆ ಹಾದು ಹೋಗಿದೆ. ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದ್ದು, ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಮಂಜುನಾಥ, ಕೆ.ಹುಚ್ಚಯ್ಯ, ಕೆ.ಭೀಮಯ್ಯ, ವಿನೋದ್, ಎಂ.ರೆಡೆಪ್ಪ, ಯಡವಲಿ ಮರಿಸ್ವಾಮಿ, ಬುಡಗ ಜಂಗಮ ಶ್ರೀನಿವಾಸ್, ಕೆ.ಸೀನ, ಎಂ.ಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts