More

    ಸಂಗಮನಾಥನಿಗೆ ವಿಶೇಷ ಪೂಜೆ

    ಕೂಡಲಸಂಗಮ: ಸುಕ್ಷೇತ್ರ ಕೂಡಲಸಂಗಮಕ್ಕೆ ಶಿವರಾತ್ರಿಯ ನಿಮಿತ್ತ ಗುರುವಾರ ರಾಜ್ಯದ ವಿವಿಧ ಭಾಗಗಳಿಂದ 5 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಕೃಷ್ಣಾ, ಮಲಪ್ರಭೆಯ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಂಡರು. ನದಿಯ ದಡದಲ್ಲಿ ಶಿವಸ್ಮರಣೆ ಮಾಡುತ್ತ ಸಂಜೆ 4ಕ್ಕೆ ಪುನಃ ಸ್ನಾನ ಮಾಡಿ ಸಂಗಮನಾಥನ ದರ್ಶನ ಪಡೆದು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಿಹಿ ತಿಂಡಿ, ಹಣ್ಣು ಹಂಪಲು ಸವಿದರು.

    ಭಕ್ತರಿಗಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ದಾಸೋಹ ಭವನದಲ್ಲಿ ಬೆಳಗ್ಗೆಯಿಂದಲೇ ನಿರಂತರ ದಾಸೋಹ ಏರ್ಪಾಡು ಮಾಟ್ಟಿತ್ತು. ಮುಜರಾಯಿ ಇಲಾಖೆಯಿಂದ ಬಂದ ಗಂಗಾಜಲವನ್ನು ಸಂಗಮನಾಥನಿಗೆ ಅರ್ಪಿಸಿ ಭಕ್ತರಿಗೆ ವಿತರಿಸಲಾಯಿತು.

    ಗುರುವಾರ ಬೆಳಗ್ಗೆ 6 ರಿಂದ ಸಂಜೆ 5ರವರೆಗೆ ಸಂಗಮನಾಥ ದೇಗುಲದಲ್ಲಿ ಭಕ್ತರು 87 ರುದ್ರಾಭಿಷೇಕ, 61 ಪಂಚಾಮೃತ ಅಭಿಷೇಕ, 6 ದೀರ್ಘದಂಡ ನಮಸ್ಕಾರ, 3 ಜವಳದ ಕಾರ್ಯಗಳನ್ನು ನಡೆಸಿದ್ದಾರೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ರಘು ಎ.ಇ ತಿಳಿಸಿದರು.



    ಸಂಗಮನಾಥನಿಗೆ ವಿಶೇಷ ಪೂಜೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts