More

    ಶಿವರಾತ್ರಿ ಮಹೋತ್ಸವದ ಅಂಗವಾಗಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶೋಭಾಯಾತ್ರೆ

    ಹಾವೇರಿ: ಇಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 88ನೇ ಶಿವರಾತ್ರಿ ಮಹೋತ್ಸವದ ಅಂಗವಾಗಿ ನಗರದಲ್ಲಿ 12 ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ಜರುಗಿತು.
    ಜಯದೇವ ನಗರದ ಶಿವಾಲಯದಿಂದ ಆರಂಭವಾದ ಯಾತ್ರೆ ಎಂಜಿ ರಸ್ತೆ, ಹುಕ್ಕೇರಿ ಮಠ, ಸುಭಾಸ ರಸ್ತೆ, ಪುರದ ಓಣಿ, ಬಸವೇಶ್ವರ ನಗರ, ಮತ್ತಿತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಹೊಸಳ್ಳಿ, ಆಲದಕಟ್ಟಿ, ತರ ಗ್ರಾಮಗಳಲ್ಲೂ ಯಾತ್ರೆ ಸಂಚರಿಸಿತು.
    ಜಯದೇವ ನಗರದ ಶಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಶಿವರಾತ್ರಿ ಅಧ್ಯಾತ್ಮಿಕ ರಹಸ್ಯ ಕುರಿತು ಹಾವೇರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿಯವರು ವಿವರಿಸಿದರು.
    ಶಿವಾಲಯದಲ್ಲಿನ 58 ಅಡಿ ಎತ್ತರದ ಶಿವಲಿಂಗ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಸಂಜೆ ಪರಮಾತ್ಮನ ದರ್ಶನ, ರಾಜಯೋಗ ಶಿಬಿರ ಕಾರ್ಯಕ್ರಮ ಜರುಗಿತು.
    ಅಗಡಿ ಮಠದ ಶ್ರೀ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖೇಶ ಮುಂದಿನಮನಿ, ವಿಶ್ವನಾಥ ಹಂದ್ರಾಳ, ಚನ್ನಬಸಣ್ಣ ಹಾವೇರಿ, ಮಲ್ಲಪ್ಪ ಕುಂಬಾರಗೇರಿ, ಶಿವಯೋಗಿ ದೇವಿಹೊಸೂರ, ಸದಾಶಿವ, ಮಹೇಂದ್ರ, ಶೇಖಪ್ಪ ಚಕ್ರಸಾಲಿ, ವೈಶಾಲಿ, ಅನ್ನಪೂರ್ಣ, ಕಲಾವತಿ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts