More

  ಹೊನ್ನಟಗಿಯಲ್ಲಿ ಜೀವಜಲಕ್ಕೆ ತತ್ವಾರ

  ದೇವದುರ್ಗ: ಹೇಮನಾಳ ಗ್ರಾಪಂ ವ್ಯಾಪ್ತಿಯ ಹೊನ್ನಟಗಿ ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ ಶುರುವಾಗಿದೆ. ಹಳೆಯ ಎರಡು ನೀರಿನ ಮೂಲಗಳೇ ಗ್ರಾಮಸ್ಥರಿಗೆ ಆಸರೆಯಾಗಿದ್ದು, ಶುದ್ಧ ಕುಡಿವ ನೀರು ಮರೀಚಿಕೆಯಾಗಿದೆ.

  ಗ್ರಾಮ ಕೃಷ್ಣಾ ನದಿಯಿಂದ ಕೆಲ ಕಿಮೀ ದೂರದಲ್ಲಿದ್ದು, 1500 ಜನ ವಾಸವಾಗಿದ್ದಾರೆ. ನಾರಾಯಣಪುರ ಬಲದಂಡೆ ನಾಲೆ ಮೂಲಕ ಹರಿಸುವ ನೀರು ಗ್ರಾಮಸ್ಥರಿಗೆ ಆಸರೆಯಾಗಿದೆ. ಬೇಸಿಗೆಯಲ್ಲಿ ಜೀವಜಲಕ್ಕಾಗಿ ಗ್ರಾಮಸ್ಥರು ಪರದಾಡಬೇಕಿದೆ. ಗ್ರಾಮದ ಪುರಾತನ ಬಾವಿ ಹಾಗೂ ಕೈಪಂಪ್ ಮಾತ್ರ ಆಸರೆಯಾಗಿವೆ.

  ಖಾನಾಪುರ ರಸ್ತೆ ಪಕ್ಕದಲ್ಲಿರುವ ಕೈಪಂಪ್ ನೀರು ಬಳಕೆಗೆ ಆಸರೆಯಾಗಿದೆ. ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಿದ್ದರೂ ಆರಂಭ ಮಾಡಿಲ್ಲ. ಬೈಕ್ ಇದ್ದವರು ಅಕ್ಕಪಕ್ಕದ ಊರಿನಿಂದ ನೀರು ತರುತ್ತಿದ್ದು, ಬಡವರಿಗೆ ಶುದ್ಧ ನೀರು ಕನಸಿನ ಮಾತಾಗಿದೆ. ಕೃಷಿ ಜಮೀನಿನಲ್ಲಿರುವ ಬೋರ್‌ವೆಲ್, ಬಾವಿ, ಕೆರೆ ಮೂಲಕ ದಾಹ ನೀಗಿಸಿಕೊಳ್ಳುತ್ತಿದ್ದಾರೆ.

  ಆದರ್ಶ ಗ್ರಾಮ ಯೋಜನೆಯಡಿ ಕೊರೆದ ಬೋರ್‌ವೆಲ್ ಮೂಲಕ ಶುದ್ಧ ಕುಡಿವ ನೀರಿನ ಘಟಕಕ್ಕೆ ಸಂಪರ್ಕ ಕೊಟ್ಟಿದ್ದರೂ ಆರ್‌ಒ ಪ್ಲಾಂಟ್‌ಗೆ ಚಾಲನೆ ನೀಡಿಲ್ಲ. ಜನರು ಸಮಸ್ಯೆ ಹೇಳಿಕೊಳ್ಳಲು ಗ್ರಾಪಂ ಆಡಳಿತವಿಲ್ಲ. ಹತ್ತು ವರ್ಷಗಳ ಹಿಂದೆ ಸರ್ಕಾರ ಗ್ರಾಪಂ ಪುನರ್ವಿಂಗಡಣೆ ಮಾಡಿ ಹೊಸ ಗ್ರಾಪಂ ರಚಿಸಿದ್ದನ್ನು ಪ್ರಶ್ನಿಸಿ ಸ್ಥಳೀಯರು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ದಾವೆ ಹೂಡಿದ್ದಾರೆ. ಇದರಿಂದಾಗಿ ಶಾವಂತಗೇರಾ ಹಾಗೂ ಹೇಮನಾಳ ಗ್ರಾಪಂಗೆ ಚುನಾವಣೆ ನಡೆದಿಲ್ಲ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts