More

    ಮುಂದುವರಿದ ಕೃಷ್ಣೆ ಅಬ್ಬರ

    ಕೂಡಲಸಂಗಮ: ಕೃಷ್ಣಾ ನದಿ ಅಬ್ಬರದಿಂದಾಗಿ ನಾರಾಯಣಪುರ ಜಲಾಶಯ ಹಿನ್ನೀರು ಶುಕ್ರವಾರ ಅಧಿಕಗೊಂಡಿದೆ. ನದಿ ದಡದ ಗ್ರಾಮದ ಜನರು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ.

    ಗುರುವಾರಕ್ಕಿಂತಲೂ ಅಧಿಕ ನೀರು ಕೃಷ್ಣಾ ನದಿಯಲ್ಲಿ ಶುಕ್ರವಾರ ಹರಿಯುತ್ತಿದೆ. ಮಲಪ್ರಭಾ ನದಿ ಶಾಂತವಾಗಿದ್ದು, ಕೃಷ್ಣಾ-ಮಲಪ್ರಭಾ ನದಿಯ ಸಂಗಮ ಸಂಪೂರ್ಣ ಜಲರಾಶಿಯಿಂದ ಆವೃತವಾಗಿದೆ.

    ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ದೇವಾಲಯ ಪ್ರವೇಶ ದ್ವಾರದಿಂದ 400 ಮೀಟರ್ ಅಂತರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರವೇಶವನ್ನು ಸಂಪೂರ್ಣ ನಿಷೇಧಿಸಿದ್ದಾರೆ. ಧ್ವನಿವರ್ಧಕ ಮೂಲಕ ನದಿಯ ದಡಕ್ಕೆ ಯಾರೂ ಹೋಗಬಾರದು, ವ್ಯಾಪಾರಿಗಳು ಅಂಗಡಿ ಸಾಮಗ್ರಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ತಿಳಿಸಲಾಗಿದೆ.

    ಕೂಡಲಸಂಗಮದ ಭಜಂತ್ರಿ, ಅಂಬೇಡ್ಕರ್, ಕುಂಬಾರ ಕಾಲನಿ ಹಾಗೂ ಕೆಂಗಲ್ಲ, ಕಜಗಲ್ಲ, ವರಗೋಡದಿನ್ನಿ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಜನರು ಮನೆಯ ಸಾಮಗ್ರಿ, ದವಸ ಧಾನ್ಯಗಳನ್ನು ಬಾಡಿಗೆ ಮನೆಗೆ ಸ್ಥಳಾಂತರಿಸಿದ್ದಾರೆ. ಇನ್ನೂ ಕೆಲವರು ಹೊಲಗಳಲ್ಲಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಕೆಲವರು ನದಿ ದಡದಲ್ಲಿಯೇ ವಾಸವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts