More

    ಅನ್​ಲಾಕ್ : ನಾಳೆಯಿಂದ ಕೆಎಸ್ಆರ್​ಟಿಸಿ ಬಸ್ ಸಂಚಾರ ಆರಂಭ

    ಬೆಂಗಳೂರು : ಜನಜೀವನವನ್ನು ಸಹಜಸ್ತರಕ್ಕೆ ತರಲು ನಾಳೆಯಿಂದ ರಾಜ್ಯದಲ್ಲಿ ಜನರಿಗೆ ಮತ್ತಷ್ಟು ರಿಲೀಫ್ ಸಿಗಲಿದೆ, ರಾಜ್ಯಾದ್ಯಂತ ನಾಳೆಯಿಂದ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಆರಂಭವಾಗಲಿದೆ. ಮೈಸೂರು ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಸ್ ಸಂಚಾರ ತೆರೆದುಕೊಳ್ಳಲಿದೆ.

    ಅನ್​ಲಾಕ್​ ಪ್ರಕ್ರಿಯೆ ಆರಂಭವಾದಂತೆ, ರಾಜಧಾನಿ ಬೆಂಗಳೂರಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಿದೆ. ಮೆಜೆಸ್ಟಿಕ್ ಮತ್ತು ರೈಲು ನಿಲ್ದಾಣದತ್ತ ಜನರು ಹರಿದು ಬರ್ತಿದ್ದಾರೆ. ಕೂಲಿ ಕಾರ್ಮಿಕರು, ನೌಕರರು, ಕೆಲಸಗಾರರು ಗಂಟುಮೂಟೆ ಸಮೇತ ಸಿಲಿಕಾನ್ ಸಿಟಿಗೆ ಆಗಮಿಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ಇತರ ರಾಜ್ಯಗಳಿಂದ ಕೂಡ ಜನರು ಬರುತ್ತಿರೋ ಈ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಕೆಎಸ್​ಆರ್​ಟಿಸಿ ಬಸ್ ಸೌಲಭ್ಯವನ್ನು ಪುನರಾರಂಭಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

    ಇದನ್ನೂ ಓದಿ: ಬಿಎಂಟಿಸಿ ಪಾಸ್​ದಾರರಿಗೆ ಗುಡ್ ನ್ಯೂಸ್! ಏಪ್ರಿಲ್​ ಪಾಸ್​ ಈಗ ಬಳಸಿ!

    ಪ್ರತಿ ಬಸ್ಸಲ್ಲಿ ಶೇಕಡ 50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿದ್ದು, ಮೊದಲಿಗೆ 3000 ಬಸ್ ಕಾರ್ಯಾಚರಣೆ ಆರಂಭಿಸಲಿದೆ. ನಂತರ ಜನದಟ್ಟಣೆ ಆಧರಿಸಿ ಬಸ್ ಸಂಚಾರ ಏರಿಸಲು ಕ್ರಮ ಕೈಗೊಳ್ಳಲಾಗುವುದು. ಅಂತರರಾಜ್ಯ ಬಸ್ ಸಂಚಾರದ ವಿಚಾರವಾಗಿ ಆಯಾ ರಾಜ್ಯಗಳ ಮಾರ್ಗಸೂಚಿ ಅನ್ವಯ ಮುಂದಿನ ದಿನಗಳಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂದು ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ‘6 ರಿಂದ 8 ವಾರಗಳಲ್ಲಿ ಕರೊನಾ ಮೂರನೇ ಅಲೆ ಸಾಧ್ಯತೆ’

    ಡ್ಯೂಟಿಗೆ ಹಾಜರಾಗಲು ಸರ್ಕಾರಿ ನೌಕರರಿಗೆ ಬುಲಾವ್​; ಗರ್ಭಿಣಿಯರಿಗೆ, ಅಂಗವಿಕಲರಿಗೆ ಮಾತ್ರ ವಿನಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts