More

    ಆಂಬ್ಯುಲೆನ್ಸ್​ ರೀತಿಯಲ್ಲಿ ಬಸ್​ ಚಲಾಯಿಸಿ ಪ್ರಯಾಣಿಕನ ಪ್ರಾಣ ಉಳಿಸಿದ ಕೆಎಸ್​ಆರ್​ಟಿಸಿ ಡ್ರೈವರ್!​​

    ತುಮಕೂರು: ಕೆಎಸ್​ಆರ್​ಟಿಸಿ ಚಾಲಕರೊಬ್ಬರು ಆಂಬ್ಯುಲೆನ್ಸ್​ ರೀತಿಯಲ್ಲಿ ಬಸ್​ ಚಲಾಯಿಸಿ, ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪುವ ಮೂಲಕ ಮೂರ್ಛೆ ಹೋದ ಪ್ರಯಾಣಿಕರೊಬ್ಬರ ಪ್ರಾಣ ಉಳಿಸಿರುವ ಮಾನವೀಯ ಘಟನೆ ತಿಪಟೂರು ಪಟ್ಟಣದಲ್ಲಿ ನಡೆದಿದೆ.

    ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಈಶ್ವರ್ ರೆಡ್ಡಿ ಎಂಬಾತ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಬಸ್ ತಿಪಟೂರು ನಿಲ್ದಾಣ ತಲುಪಿದಾಗ ಉಸಿರಾಡಲು ಸಾಧ್ಯವಾಗದೆ ಈಶ್ವರ್​ ರೆಡ್ಡಿ ಮೂರ್ಛೆ ತಪ್ಪಿ ಕೆಳಗೆಬಿದ್ದರು. ಬಿದ್ದ ರಭಸಕ್ಕೆ ಮೂಗಿಗೆ ಪೆಟ್ಟಾಗಿ ರಕ್ತಸ್ರಾವವಾಯಿತು. ಕೂಡಲೇ ಇದನ್ನು ಗಮನಿಸಿದ ನಿರ್ವಾಹಕ ಓಂಕಾರ್, ಚಾಲಕನಿಗೆ ತಿಳಿಸಿದರು.

    ಇದನ್ನೂ ಓದಿ: ರಾಜ್ಯ ಬಜೆಟ್​ನಲ್ಲಿ ಮದ್ಯದ ದರ ಪರಿಷ್ಕರಣೆ; ಇಂದಿನಿಂದ ಮದ್ಯ ಪ್ರಿಯರಿಗೆ ತಟ್ಟುತ್ತೆ ಬೆಲೆ ಏರಿಕೆ ಬಿಸಿ!

    ತಕ್ಷಣ ಎಚ್ಚೆತ್ತ ಚಾಲಕ ಪ್ರಕಾಶ್, ಬಸ್ ಅನ್ನು ತಿಪಟೂರು ತಾಲ್ಲೂಕು ಆಸ್ಪತ್ರೆಗೆ ಚಲಾಯಿಸಿದ್ದಾರೆ. ಪ್ರಯಾಣಿಕರ ಸಮೇತ ಆಂಬ್ಯುಲೆನ್ಸ್ ರೀತಿ ಬಸ್ ಚಲಾಯಿಸಿ, ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಈಶ್ವರ್ ರೆಡ್ಡಿ ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾರೆ.

    ಚಾಲಕ ಮತ್ತು ನಿರ್ವಾಹಕನ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯತೆಯನ್ನು ಸಾರ್ವಜನಿಕರು ಪ್ರಶಂಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕುಡಿದ ಮತ್ತಿನಲ್ಲಿ ರಸ್ತೆ ಅಂದುಕೊಂಡು ರೈಲ್ವೆ ಹಳಿಯ ಮೇಲೆ ಕಾರು ಚಲಾಯಿಸಿದವನಿಗೆ ಕಾದಿತ್ತು ಶಾಕ್​!

    ಆರ್ಥಿಕ ಬಿಕ್ಕಟ್ಟು: 1 ಕೆಜಿ ಗೋಧಿ ಹಿಟ್ಟಿಗೆ 320 ರೂಪಾಯಿ, ಟೊಮ್ಯಾಟೋ 200 ರೂ.!

    ಪ್ರಾಜೆಕ್ಟ್​ ಕೆ ಇದೀಗ ‘ಕಲ್ಕಿ 2898 AD’; ರಿಲೀಸ್​​ ದಿನಾಂಕದಲ್ಲಿ ಬದಲಾವಣೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts