More

    ಆರ್ಥಿಕ ಬಿಕ್ಕಟ್ಟು: 1 ಕೆಜಿ ಗೋಧಿ ಹಿಟ್ಟಿಗೆ 320 ರೂಪಾಯಿ, ಟೊಮ್ಯಾಟೋ 200 ರೂ.!

    ಅತ್ಯಂತ ದುಬಾರಿ ಬೆಲೆಯ ಗೋಧಿ ಹಿಟ್ಟು ಪಾಕಿಸ್ತಾನದಲ್ಲಿ ಸಿಗುತ್ತಿದೆ!

    ಕರಾಚಿ: ಪಾಕಿಸ್ತಾನದಲ್ಲಿ ಹಣದುಬ್ಬರ ಹೇಗಿದೆ ಎಂದರೆ, ಅಲ್ಲಿನ ಜನ ಒಂದು ತುತ್ತು ತಿನ್ನೋದಕ್ಕೂ ಯೋಚಿಸುವಂತಾಗಿದೆ. ಪಾತಾಳಕ್ಕೆ ಕುಸಿಯುತ್ತಿರುವ ಜಿಡಿಪಿ, ಮುಗಿಲೆತ್ತರ ಚಾಚಿದ ಸಾಲ, ಇಷ್ಟು ಸಾಲದು ಎಂಬಂತೆ ಕೈಗೆ ಸಿಗದ ಹಣದುಬ್ಬರದಿಂದ ಪಾಕಿಸ್ತಾನ ದುಃಸ್ಥಿತಿ ತಲುಪುತ್ತಿದೆ.

    ಇದನ್ನೂ ಓದಿ: ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು

    ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದ್ದು, ಹಸಿವಿನಿಂದ ಸಾಯುವ ಪರಿಸ್ಥಿತಿ ಎದುರಾಗಿದೆ. ಪಾಕಿಸ್ತಾನದ ಗ್ರಾಹಕ ಬೆಲೆ ಸೂಚ್ಯಂಕ ಕೂಡ ಮಿತಿ ಮೀರಿದ್ದು ಜನ ಅಸಹಾಯಕರಾಗಿದ್ದಾರೆ. ಗೋಧಿ ದಾಸ್ತಾನು ಇನ್ನೇನು ಮುಗಿಯುವ ಹಂತದಲ್ಲಿದ್ದು, ಖೈಬರ್‌, ಸಿಂಧ್‌, ಬಲೂಚಿಸ್ತಾನ್‌ ಪ್ರಾಂತ್ಯಗಳಲ್ಲಿ ಗೋಧಿ ಹಿಟ್ಟಿಗಾಗಿ ರಣರಂಗ ಏರ್ಪಟ್ಟು ಹತ್ತಾರು ಜನ ಜೀವ ಬಿಟ್ಟಾಗಲೇ ಮತ್ತೊಂದು ಶಾಕ್ ಸಿಕ್ಕಿದೆ.

     ಇದನ್ನೂ ಓದಿ: ವಿಶ್ವದಾಖಲೆಗಾಗಿ 7 ದಿನಗಳ ಕಾಲ ಎಡೆಬಿಡದೆ ಕಣ್ಣೀರಿಟ್ಟ

    ಪಾಕಿಸ್ತಾನದ ಪ್ರಮುಖ ನಗರ ಕರಾಚಿಯಲ್ಲಿ 1 ಕೆಜಿ ಗೋಧಿ ಹಿಟ್ಟಿಗೆ 320 ರೂಪಾಯಿ ಹಾಗೂ 1 ಕೆಜಿ ಟೊಮ್ಯಾಟೋಗೆ 200 ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬಂದಿದೆ. ಗೋಧಿ ಹಿಟ್ಟಿಗೆ  ಕೆಜಿಗೆ 320 ರೂ. ಅಥವಾ 20 ಕೆಜಿಗೆ 6,400 ರೂ.ಗಳಾಗಿವೆ. ಕೇವಲ 1 ಕೆಜಿಗೆ ಹಿಟ್ಟಿಗೆ ಈಗ 320 ರೂ.ಗಳ ಬೆಲೆ ಇದೆ, ಇದು 58 ವರ್ಷಗಳಲ್ಲೇ ಅತ್ಯಕ ಬೆಲೆಯ ಹೊರೆಯಾಗಿದೆ.

    ಇದನ್ನೂ ಓದಿ: ಹಲ್ಲುಜ್ಜುವಾಗ ಟೂತ್ ಬ್ರಶ್‌ನ್ನೇ ನುಂಗಿಬಿಟ್ಟ!; ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮುಂದೇನಾಯ್ತು?

    ಗಗನಕ್ಕೇರುತ್ತಿರುವ ಸಕ್ಕರೆ ಬೆಲೆಯಿಂದ ಪಾಕಿಸ್ತಾನಿಗಳ ಪರಿಸ್ಥಿತಿ ಇನ್ನಷ್ಟು ಜಟಿಲವಾಗಿದೆ. ಪಾಕಿಸ್ತಾನದಾದ್ಯಂತ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕಿಲೋಗ್ರಾಂಗೆ 160 ರೂ.ಗೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಹಣದುಬ್ಬರದ ಉಲ್ಬಣವು ರಾಷ್ಟ್ರವ್ಯಾಪಿ ಹಲವಾರು ನಗರಗಳ ಮೇಲೆ ಪರಿಣಾಮ ಬೀರಿದೆ, ಈಗಾಗಲೇ ನಿರ್ಣಾಯಕ ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ.

    VIDEO | ಆಹಾ ಚಿನ್ನದ ಇಡ್ಲಿ…; ನಾಲಿಗೆಗೆ ರುಚಿ..ಜೇಬಿಗೆ ಕತ್ತರಿ ಬೀಳುವುದು ಪಕ್ಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts