More

    ಕರೊನಾ ಭಯದಿಂದ ಬಸ್ ಬಿಟ್ಟರೂ ಪ್ರಯಾಣಿಕರು ಬರುತ್ತಿಲ್ಲ

    ಕಡೂರು: ಲಾಕ್​ಡೌನ್ ಸಡಿಲಿಕೆ ನಂತರ ಕೆಎಸ್​ಆರ್​ಟಿಸಿ ಬಸ್​ಗಳು ಸಂಚರಿಸುತ್ತಿವೆಯಾದರೂ ಪ್ರಯಾಣಿಕರ ಕೊರತೆ, ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಮಾತ್ರ ಸಂಚಾರ ಸೀಮಿತ ಆಗಿರುವುದರಿಂದ ಇಲಾಖೆಗೆ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ.

    ಬೆಂಗಳೂರು ಸೇರಿ ಜಿಲ್ಲೆಯ ಎಲ್ಲ ತಾಲೂಕಿಗೂ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಆಪರೇಟ್ ಮಾಡಲಾಗುತ್ತಿದೆ. ಆದರೆ ಕರೊನಾ ಭೀತಿಯಿಂದಾಗಿ ಜನರು ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಗ್ರಾಮಾಂತರ ಪ್ರದೇಶಕ್ಕೆ ಸಾರಿಗೆ ಸಂಪರ್ಕಕ್ಕೆ ಅವಕಾಶ ನೀಡದಿದ್ದರಿಂದ ಆದಾಯಕ್ಕೆ ಕತ್ತರಿ ಬಿದ್ದಿದೆ.

    ಜಿಲ್ಲೆ ವ್ಯಾಪ್ತಿಯೊಳಗೆ ಕೆಎಸ್​ಆರ್​ಟಿಸಿ ಬಸ್ ಸಂಚಾರದಿಂದ ಪ್ರತಿದಿನ ಅಂದಾಜು 2 ಲಕ್ಷ ರೂ. ಸಂಗ್ರಹವಾಗುತ್ತಿತ್ತು. ಆದರೆ ಈಗ ಅಷ್ಟೊಂದು ಆದಾಯ ಕ್ರೋಡೀಕರಣ ಆಗುತ್ತಿಲ್ಲ. ತಾಲೂಕಿನಿಂದ ತಾಲೂಕಿಗೆ, ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ, ಜಿಲ್ಲಾ ಕೇಂದ್ರದಿಂದ ಬೆಂಗಳೂರು, ಶಿವಮೊಗ್ಗ, ಹಾಸನ ಕಡೆಗಳಿಗೆ ತೆರಳಲು ಬಸ್​ಗಳು ಆರಂಭವಾಗಿವೆ. ಆದರೆ ಸೀಮಿತ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸಬೇಕೆಂದ ನಿಯಮದಿಂದ ವೆಚ್ಚ ಮತ್ತು ಆದಾಯ ಸರಿದೂಗಿಸುವುದು ಕಷ್ಟವಾಗುತ್ತಿದೆ.

    ಚಿಕ್ಕಮಗಳೂರು ಮತ್ತು ಹಾಸನ ಡಿಪೋದಲ್ಲಿ ಒಟ್ಟು 336 ಬಸ್​ಗಳಿವೆ. ಆದರೆ ಲಾಕ್​ಡೌನ್ ಎಫೆಕ್ಟ್​ನಿಂದ ಶೇ.10ರಷ್ಟು ಬಸ್​ಗಳು ಓಡಾಡುತ್ತಿದ್ದು, ಉಳಿದ ಬಸ್​ಗಳು ಡಿಪೋಗಳಲ್ಲೇ ನಿಂತಿವೆ. ಪ್ರತಿದಿನ 120 ಬಸ್​ಗಳು ಮಾತ್ರ ಸಂಚರಿಸುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts