More

    ದೇವಾಲಯಗಳು ಗ್ರಾಮದ ಸಂಸ್ಕೃತಿಯ ಪ್ರತಿಬಿಂಬ

    ಕಡೂರು: ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸಿ ಧರ್ಮ ಮಾರ್ಗದೆಡೆ ಕೊಂಡೊಯ್ಯುವ ದೇವಸ್ಥಾನಗಳು ಗ್ರಾಮದ ಸಂಸ್ಕೃತಿಯ ಪ್ರತಿಬಿಂಬ ಎಂದು ಉಪ್ಪಾರ ಭಗೀರಥ ಗುರುಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.
    ತಾಲೂಕಿನ ಮಚ್ಚೇರಿ ಗ್ರಾಮದಲ್ಲಿ ಸೋಮವಾರ ಮೈಲಾರಲಿಂಗೇಶ್ವರ ಸ್ವಾಮಿ ಮಹಾದ್ವಾರ ಉದ್ಘಾಟನೆ ಮತ್ತು ಕಳಶಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತೀಯ ಸನಾತನ ಪರಂಪರೆಯಲ್ಲಿ ದೇವಸ್ಥಾನಗಳಿಗೆ ವಿಶಿಷ್ಟ ಸ್ಥಾನವಿದೆ. ಧರ್ಮ ಮಾರ್ಗ ತೋರುವ ದೇವಸ್ಥಾನಕ್ಕೆ ಭವ್ಯ ಮಹಾದ್ವಾರ ನಿರ್ಮಾಣ ಮಾಡಿರುವುದು ಶ್ಲಾಘನೀಯ ಕಾರ್ಯ. ನಾಡಿನೆಲ್ಲೆಡೆ ಮಳೆ ಬೆಳೆ ಸಮೃದ್ಧವಾಗಲಿ. ರೈತರ ಬದುಕು ಹಸನಾಗಲಿ ಎಂದು ಹಾರೈಸಿದರು.
    ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಹೊಳೆಪೂಜೆ ನೆರವೇರಿಸಿದ ನಂತರ 101 ಕುಂಭಗಳಲ್ಲಿ ಗಂಗೆಯನ್ನು ಹೊತ್ತ ಮಹಿಳೆಯರು, ಸೂಜಿಗಲ್ಲು ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿ, ದೊಡ್ಡಬಿಲ್ಲು ಚೌಡೇಶ್ವರಿ ಮತ್ತು ಗೌಡನಕಟ್ಟೆಹಳ್ಳಿ ಆಂಜನೇಯ ಸ್ವಾಮಿ ಹಾಗೂ ನಾಗವಂಗಲದ ಬನಶಂಕರಿ ದೇವರುಗಳನ್ನು ಜಾನಪದ ಕಲಾ ತಂಡಗಳೊಡನೆ ಸಕಲ ವಾದ್ಯಗಳ ಸಮೇತ ಮಹಾದ್ವಾರದ ಬಳಿ ಕರೆತರಲಾಯಿತು. ನಂತರ ಸ್ವಾಮೀಜಿ ಮಹಾದ್ವಾರದ ಕಳಶಗಳಿಗೆ ಪೂಜೆ ನೆರವೇರಿಸಿ ಕಳಶ ಸ್ಥಾಪನೆ ಮಾಡಿದರು.ಮಹಾದ್ವಾರಕ್ಕೆ ಕುಂಭಾಭಿಷೇಕ ನೆರವೇರಿಸಲಾಯಿತು. ಸಂಜೆ ಗ್ರಾಮದಲ್ಲಿ ದೇವರುಗಳ ಉತ್ಸವ ನಡೆಯಿತು. ದೇವಸ್ಥಾನದ ಸಮಿತಿ ಅಧ್ಯಕ್ಷ ಎಂ.ಕೆ.ಮಹೇಶ್ವರಪ್ಪ, ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts