More

    ಬಹುತೇಕ ತುಂಬಿರುವ ಕೆಆರ್​ಎಸ್​ ಡ್ಯಾಂ… ತಡವಾಗಿ ಹೆಚ್ಚಿದ ನೀರಿನ ಮಟ್ಟ

    ಮಂಡ್ಯ: ಹಳೇ ಮೈಸೂರು ಭಾಗದ ಜೀವನಾಡಿಯಾದ ಕೆಆರ್​ಎಸ್​ ಡ್ಯಾಂ ಬಹುತೇಕ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತಿದ್ದ ಕೆಆರ್​ಎಸ್​ ಜಲಾಶಯ, 11 ವರ್ಷಗಳ ಬಳಿಕ ಈ ಬಾರಿ ಅಕ್ಟೋಬರ್ ಅಂತ್ಯದಲ್ಲಿ ತುಂಬುತ್ತಿದೆ. 2009ರಲ್ಲಿ ಹೀಗೇ ಅಕ್ಟೋಬರ್ 28 ರಂದು ತುಂಬಿತ್ತು.

    ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಈ ವರ್ಷ ಕನ್ನಂಬಾಡಿ ಕಟ್ಟೆ ಭರ್ತಿಯಾಗಿರಲಿಲ್ಲ. ಇದರಿಂದ ರೈತರು ಆತಂಕದಲ್ಲಿದ್ದರೆ, ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಶುರುವಾಗಿತ್ತು. ಆದರೆ, ಮುಂಗಾರು ಅಂತ್ಯದಲ್ಲಿ ಮಳೆ ಬಿರುಸು ಪಡೆದುಕೊಂಡ ಪರಿಣಾಮ ನೀರಿನ ಒಳ ಹರಿವು ಹೆಚ್ಚಳವಾಯಿತು. ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಇಂದು ನೀರಿನ ಮಟ್ಟ 124.04 ಅಡಿ ತಲುಪಿದೆ. ಸಂಪೂರ್ಣ ಭರ್ತಿಗೆ ಕೇವಲ 0.76 ಅಡಿ ಅಷ್ಟೇ ಬಾಕಿ ಉಳಿದಿದೆ.

    ಇದನ್ನೂ ಓದಿ: ಆರು ತಿಂಗಳ ಹಿಂದೆಯೇ ಸತ್ತ ವ್ಯಕ್ತಿಗೆ ಇದೀಗ ಕರೊನಾ ಲಸಿಕೆಯ 2ನೇ ಡೋಸ್​ ಕೊಟ್ಟರು!

    ಸಿಎಂ ಬೊಮ್ಮಾಯಿ ಪೂಜೆ ಫಲ: ಜಲಾಶಯ ಭರ್ತಿಯಾಗದ ಹಿನ್ನೆಲೆಯಲ್ಲಿ ಅಕ್ಟೋಬರ್ 7 ರಂದು ವಿಶೇಷ ಪೂಜೆ ನಡೆದಿತ್ತು. ಖ್ಯಾತ ಜ್ಯೋತಿಷಿ ಡಾ.ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಪರ್ಜನ್ಯ ಹೋಮ ನಡೆಸಿದ್ದು, ಪೂಜೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ನಾರಾಯಣಗೌಡ ಮತ್ತಿತರರು ಪಾಲ್ಗೊಂಡಿದ್ದರು. ವಿಶೇಷ ಪೂಜೆ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಈಗ ಜಲಾಶಯ ಭರ್ತಿಯಾಗಲು ಕೇವಲ ಮುಕ್ಕಾಲು ಅಡಿ ಬಾಕಿ ಇದೆ.

    ಸದ್ಯ ಡ್ಯಾಂಗೆ 13,984 ಕ್ಯೂಸೆಕ್ ನೀರು ಒಳಹರಿವು ಇದ್ದು, ಡ್ಯಾಂನಿಂದ 3544 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 48.391 ನೀರಿನ ಶೇಖರಣೆಯಾಗಿದ್ದು, 49.452 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯವನ್ನು ಡ್ಯಾಂ ಹೊಂದಿದೆ. ಡ್ಯಾಂ ಶೀಘ್ರವೇ ತುಂಬಿಹರಿಯುವ ನಿರೀಕ್ಷೆ ಇದ್ದು, ಸಂಪ್ರದಾಯದಂತೆ ಮುಂದಿನ ವಾರ ಸಿಎಂ ಬೊಮ್ಮಾಯಿ ಅವರು ಬಾಗಿನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬಹುದು ಎನ್ನಲಾಗಿದೆ.

    ನ.1 ರಿಂದ ರೈತರಿಗೆ ಬೆಳೆ ಸಾಲದ ಪ್ರಕ್ರಿಯೆ ಸರಳ; ಸುಲಭ ಆನ್​ಲೈನ್​ ಸಲ್ಲಿಕೆಗೆ FRUITS ತಂತ್ರಾಂಶ!

    ಗೃಹ ಸಚಿವ ಅಮಿತ್​ ಷಾ ಭೇಟಿ ಸಂದರ್ಭದಲ್ಲೇ ಪಾಕ್​ ವಿಜಯೋತ್ಸವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts