More

    ‘ಸಿ’ ಗ್ರೇಡ್​ ಚಿತ್ರಗಳ ವಿಮರ್ಶೆ ಮಾಡುವುದಿಲ್ಲವಂತೆ ಕೆಆರ್​ಕೆ …

    ಮುಂಬೈ: ಬಾಲಿವುಡ್​ನ ಯಾವುದೇ ಸಿನಿಮಾ ಬಿಡುಗಡೆಯಾಗಲಿ, ಸ್ವಯಂಘೋಷಿತ ಜಗತ್ತಿನ ನಂಬರ್​ ಒನ್​ ವಿಮರ್ಶಕ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ ಆ ಚಿತ್ರವನ್ನು ವಿಮರ್ಶೆ ಮಾಡುತ್ತಾರೆ. ಚಿತ್ರದ ಬಗ್ಗೆ ಹಿಗ್ಗಾಮುಗ್ಗಾ ಬಯ್ಯುತ್ತಾರೆ. ಎರಡು ತಿಂಗಳ ಹಿಂದೆ ಬಿಡುಗಡೆಯಾದ ಸಲ್ಮಾನ್​ ಖಾನ್​ ಅಭಿನಯದ ‘ರಾಧೇ’ ಚಿತ್ರವನ್ನು ಬೈದು, ಕೊನೆಗೆ ಅವರ ಮೇಲೆ ಸಲ್ಮಾನ್​ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು.

    ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಮಿಡಿದ ಕಾವ್ಯಾ ಮನ; ನಟಿಯಿಂದ ಕೂದಲು ದಾನ..

    ಈಗ್ಯಾಕೆ ಈ ವಿಷಯವೆಂದರೆ, ‘ರಾಧೇ’ ನಂತರ ಬಾಲಿವುಡ್​ನಲ್ಲಿ ಇನ್ನೂ ಎರಡು ಚಿತ್ರಗಳು ಓಟಿಟಿ ಮೂಲಕ ಬಿಡುಗಡೆಯಾಗಿವೆ. ಒಂದು ವಿದ್ಯಾ ಬಾಲನ್​ ಅಭಿನಯದ ‘ಶೇರ್ನಿ’. ಇನ್ನೊಂದು ತಾಪ್ಸಿ ಪನ್ನು ಅಭಿನಯದ ‘ಹಸೀನ್​ ದಿಲ್​ರುಬಾ’. ಈ ಎರಡೂ ಚಿತ್ರಗಳನ್ನು ಕೆಆರ್​ಕೆ ವಿಮರ್ಶೆ ಮಾಡಿಲ್ಲ. ಸಲ್ಮಾನ್​ ಖಾನ್​ ಹಾಕಿದ ಕೇಸಿನಿಂದ ಹೆದರಿ ಅವರು ಇಂಥದ್ದೊಂದು ನಿರ್ಧಾರ ಮಾಡಿದರಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಆದರೆ, ಆ ಎರಡೂ ಚಿತ್ರಗಳನ್ನು ವಿಮರ್ಶೆ ಮಾಡದಿರುವುದಕ್ಕೆ ಕೆಆರ್​ಕೆಗೆ ತಮ್ಮದೇ ಕಾರಣಗಳಿವೆಯಂತೆ. ಆ ಕಾರಣಗಳನ್ನು ಅವರೇ ಹೇಳಿಕೊಂಡಿದ್ದಾರೆ.

    ‘ಶೇರ್ನಿ’ ವಿಮರ್ಶೆ ಮಾಡದಿರುವ ಬಗ್ಗೆ ಮಾತನಾಡಿರುವ ಅವರು, ‘ಬಹಳಷ್ಟು ಜನ ಆ ಚಿತ್ರವನ್ನು ಯಾಕೆ ವಿಮರ್ಶೆ ಮಾಡಿಲ್ಲ ಅಂತ ಕೇಳುತ್ತಿದ್ದಾರೆ. ನಾನು ಸಣ್ಣ ಚಿತ್ರಗಳನ್ನು ನೋಡುವುದಿಲ್ಲ ಮತ್ತು ಮಾತನಾಡುವುದೂ ಇಲ್ಲ. ಏಕೆಂದರೆ, ನಾನು ಜಗತ್ತಿನ ನಂಬರ್​ ಒನ್​ ವಿಮರ್ಶಕ. ನನ್ನದೇ ಆದ ಒಂದು ಬ್ರಾಂಡ್​ ಇದೆ. ಹೀಗಿರುವಾಗ ಸಣ್ಣಪುಟ್ಟ ಚಿತ್ರಗಳಿಗೆಲ್ಲ ನಾನು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

    ಅದೇ ರೀತಿ ‘ಹಸೀನ್​ ದಿಲ್​ರುಬಾ’ ಕುರಿತು ಮಾತನಾಡಿರುವ ಅವರು, ‘ಮೊದಲಿಗೆ ನನಗೆ ಆ ಸಿನಿಮಾ ಎಲ್ಲಿ ಮತ್ತು ಯಾವಾಗ ಬಿಡುಗಡೆಯಾಯಿತು ಎಂಬ ವಿಷಯವೇ ಗೊತ್ತಿಲ್ಲ. ಎರಡನೆಯದಾಗಿ, ನಾನು ಸಿ ಗ್ರೇಡ್​ ನಟ-ನಟಿಯರ ಸಿ ಗ್ರೇಡ್​ ಸಿನಿಮಾಗಳನ್ನು ನೋಡುವುದಿಲ್ಲ. ಏಕೆಂದರೆ, ನಾನು ಜಗತ್ತಿನ ನಂಬರ್​ ಒನ್​ ವಿಮರ್ಶಕ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನಟ ಕೋಮಲ್​ಗೆ ‘2020’ ಉರುಳು!

    ಕೆಆರ್​ಕೆ ಅವರ ಈ ಮಾತುಗಳು ಹಲವರನ್ನು ಕೆರಳಿಸಿದೆ. ಜಗತ್ತಿನಲ್ಲಿ ಯಾವುದು ದೊಡ್ಡ ಅಥವಾ ಸಣ್ಣ ಚಿತ್ರಗಳು ಅಂತ ಇರುವುದಿಲ್ಲ. ಒಬ್ಬ ವಿಮರ್ಶಕನ ಕೆಲಸ ಎಲ್ಲ ಚಿತ್ರಗಳನ್ನೂ ವಿಮರ್ಶೆ ಮಾಡುವುದು. ಹಾಗಾಗಿ, ನೀವು ವಿಮರ್ಶಕರೇ ಆಗಿದ್ದರೆ, ಈ ರೀತಿ ದೊಡ್ಡದು ಅಥವಾ ಚಿಕ್ಕದು ಎನ್ನುವುದನ್ನು ಬಿಟ್ಟು, ಎಲ್ಲ ಸಿನಿಮಾಗಳನ್ನು ನೋಡಿ ವಿಮರ್ಶೆ ಮಾಡಿ ಎಂದು ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಬಿಗ್​ಬಾಸ್​ನಿಂದ ನಟಿ ನಿಧಿ ಸುಬ್ಬಯ್ಯ ಔಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts