More

    ಕೆಪಿಟಿ, ನಂತೂರಲ್ಲಿ ಫ್ಲೈಓವರ್ ಶೀಘ್ರ ಕಾರ್ಯಾನುಷ್ಠಾನ

    ಮಂಗಳೂರು: ತೀವ್ರ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕೆಪಿಟಿ ಜಂಕ್ಷನ್ ಹಾಗೂ ನಂತೂರು ಜಂಕ್ಷನ್ ರಾಷ್ಟೀಯ ಹೆದ್ದಾರಿ 66ರಲ್ಲಿ ಮೇಲ್ಸೇತುವೆ (ವೆಹಿಕಲ್ ಓವರ್‌ಪಾಸ್-ವಿಒಪಿ) ನಿರ್ಮಾಣವಾಗಲಿದ್ದು, ಶೀಘ್ರ ಯೋಜನೆ ಕಾರ್ಯಾನುಷ್ಠಾನಕ್ಕೆ ಬರಲಿದೆ.

    ದಕ್ಷಿಣ ಕನ್ನಡ ಸಂಸದರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಪಂ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಈ ಮಾಹಿತಿ ನೀಡಿದರು.

    ಕೆಪಿಟಿಯಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ವಿಒಪಿ ನಿರ್ಮಾಣಗೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆ ಆಗಿದೆ. ಮಳೆಗಾಲದ ಬಳಿಕ ಕಾಮಗಾರಿ ಪ್ರಾರಂಭ. ರಾಷ್ಟ್ರೀಯ ಹೆದ್ದಾರಿ ಕೆಳಗಡೆ ಸಾಗಲಿದ್ದು ಸರ್ಕೀಟ್ ಹೌಸ್‌ನಿಂದ ವಿಮಾನ ನಿಲ್ದಾಣ ರಸ್ತೆಗೆ ವಿಒಪಿ ನಿರ್ಮಾಣಗೊಳ್ಳಲಿದೆ. ನಂತೂರಿನಲ್ಲಿ 22 ಕೋಟಿ ರೂ.ವೆಚ್ಚದಲ್ಲಿ ವಿಒಪಿ ನಿರ್ಮಾಣ ಯೋಜನೆ ಸಿದ್ಧಗೊಂಡಿದ್ದು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts