More

    ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಪರಿಹಾರ ನೀಡಿ

    ರಾಣೆಬೆನ್ನೂರ: ನಗರದ ದೇವರಗುಡ್ಡ ರಸ್ತೆಯ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಇಂದಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿ ವತಿಯಿಂದ ಗುರುವಾರ ತಹಸೀಲ್ದಾರ್ ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.
    ನೇತೃತ್ವ ವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ದೇವರಗುಡ್ಡ ರಸ್ತೆಯ ಗೇಟ್ ನಂ. 219ರ ಹತ್ತಿರ ನಿರ್ಮಾಣವಾಗುತ್ತಿರುವ ರೈಲ್ವೆ ಮೇಲ್ಸೇತುವೆಗೆ ಈಗಾಗಲೇ ಬಹಳಷ್ಟು ರೈತರು ಭೂಮಿ ನೀಡಿದ್ದಾರೆ. ಅವರಿಗೆ ಇಂದಿನ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕು.
    ಮೇಲ್ಸೇತುವೆ ಕಾಮಗಾರಿಯಲ್ಲಿ ಕಳಪೆ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದ್ದು, ಈ ಕುರಿತು ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜ. 17ರಂದು ರೈಲು ರೋಖೋ ನಡೆಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
    ಪ್ರಮುಖರಾದ ಪ್ರಭುಸ್ವಾಮಿ ಕರ್ಜಗಿಮಠ, ಉಮೇಶ ಹೊನ್ನಾಳಿ, ಪ್ರಕಾಶ ಪೂಜಾರ, ಎನ್.ಬಿ. ಪಾಟೀಲ ರಾಜಣ್ಣ, ನಿತ್ಯಾನಂದ ಕುಂದಾಪುರ, ಚಂದ್ರಣ್ಣ ಬೇಡರ, ಎಸ್.ಡಿ. ಹಿರೇಮಠ, ಈರಣ್ಣ ಹಲಗೇರಿ, ಗದಿಗೆಪ್ಪ ಹೊಟ್ಟೆಗೌಡರ, ಇಸ್ಮಾಯಿಲ್‌ಸಾಬ್ ರಾಣೆಬೆನ್ನೂರ, ತುಕ್ಕಪ್ಪ ಲಮಾಣಿ, ಧರ್ಮಣ್ಣ ಕುಪ್ಪೇಲೂರ, ರೇಣುಕಾ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts