More

    ಪಿಯುಸಿ ಪಾಸಾಗಿದ್ದೀರಾ.. 1080 ಎಸ್​ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಇಂದಿನಿಂದಲೇ ಆರಂಭ ನೋಡಿ..

    ಬೆಂಗಳೂರು: ನೀವು ಪಿಯುಸಿ ಪಾಸಾಗಿದ್ದೀರಾ.. ಸರ್ಕಾರಿ ಕೆಲಸ ಬೇಕು ಅಂತ ಹುಡುಕುತ್ತಿದ್ದರೆ ಇಲ್ಲಿದೆ ಒಂದು ಅವಕಾಶ. ಕರ್ನಾಟಕ ಲೋಕಸೇವಾ ಆಯೋಗವು ಮತ್ತೊಂದು ಸುತ್ತಿನ ಭಾರಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 1,080 ಉಳಿಕೆ ಮೂಲ ವೃಂದದ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಭರ್ತಿ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಿದ್ದು, ಇಂದಿನಿಂದ ಏಪ್ರಿಲ್ 9 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಅರ್ಜಿ ಶುಲ್ಕ ಸಲ್ಲಿಸಲು ಏಪ್ರಿಲ್ 13ರ ವರೆಗೂ ಅವಕಾಶವಿದೆ.

    ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ, ಕಾರಾಗೃಹ ಇಲಾಖೆ, ಸಾರಿಗೆ ಇಲಾಖೆ, ರಾಜ್ಯ ಪತ್ರ್ರಾಗಾರ ನಿರ್ದೇಶನಾಲಯ ಇತ್ಯಾದಿ ಇಲಾಖೆ ಹಾಗೂ ಕಾರ್ಯಾಲಯಗಳಲ್ಲಿ ಇರುವ ಖಾಲಿ ಹುದ್ದೆಗಳ ನೇಮಕಾತಿ ನಡೆಯಲಿದೆ. ಪಿಯುಸಿ/ ತತ್ಸಮಾನ ಪರೀಕ್ಷೆ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ -38 ವರ್ಷ, ಎಸ್​ಸಿ, ಎಸ್​ಟಿ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವೇತನ ಶ್ರೇಣಿ: 21,400 ರೂಪಾಯಿದಿಂದ 42,000 ರೂಪಾಯಿ ಇರುತ್ತದೆ. ಅರ್ಜಿ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 300 ರೂಪಾಯಿ ಮಾಜಿ ಸೈನಿಕ ಅಭ್ಯರ್ಥಿಗಳಿಗೆ (ಸಾಮಾನ್ಯ ಅರ್ಹತೆ ಹಾಗೂ ಪ್ರವರ್ಗ 2ಎ,2ಬಿ, 3ಎ,3ಬಿ) 50 ರೂಪಾಯಿ ಇರುತ್ತದೆ. ಎಲ್ಲ ಹುದ್ದೆಗಳಿಗೂ ಅನ್ವಯಿಸುವಂತೆ ಅರ್ಜಿಶುಲ್ಕದೊಂದಿಗೆ 35 ರೂಪಾಯಿ ಸಂಸ್ಕರಣಾ ಶುಲ್ಕವಿರುತ್ತದೆ. ಎಸ್​ಸಿ, ಎಸ್​ಟಿ, ಪ್ರವರ್ಗ1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಆದರೆ, ಸಂಸ್ಕರಣಾ ಶುಲ್ಕ 35 ರೂಪಾಯಿ ಪಾವತಿಸಬೇಕು.

    ಆಯ್ಕೆ ವಿಧಾನ ಹೀಗಿರುತ್ತದೆ- ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಮೆರಿಟ್ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನ್ವಯ ಹಾಗೂ ನೀಡಿರುವ ಆದ್ಯತೆ ಅನ್ವಯ ಪ್ರಕಟಿಸಿರುವ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.
    ಸ್ಪರ್ಧಾತ್ಮಕ ಪರೀಕ್ಷೆ ಸ್ವರೂಪ: ಪತ್ರಿಕೆ 1-ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಾಗಿದೆ. ಇದು ವಿವರಣಾತ್ಮಕವಾಗಿದ್ದು, 150 ಅಂಕಗಳದ್ದಾಗಿರುತ್ತದೆ. ಪತ್ರಿಕೆ 2-ಸಾಮಾನ್ಯ ಕನ್ನಡ/ಸಾಮಾನ್ಯ ಇಂಗ್ಲಿಷ್ ವಸ್ತುನಿಷ್ಠ ಬಹುಆಯ್ಕೆ ಮಾದರಿಯದ್ದಾಗಿದ್ದು, 100 ಅಂಕಗಳದ್ದಾಗಿರುತ್ತದೆ. ಪತ್ರಿಕೆ 3 ಸಾಮಾನ್ಯ ಜ್ಞಾನ, ವಸ್ತುನಿಷ್ಠ ಬಹು ಆಯ್ಕೆ ಮಾದರಿಯ 100 ಅಂಕಗಳ ಪತ್ರಿಕೆಯಾಗಿದೆ. ಪ್ರತಿ ಪತ್ರಿಕೆಗೂ ಪರೀಕ್ಷಾ ಅವಧಿ ಪ್ರತ್ಯೇಕ 1 ಗಂಟೆ 30 ನಿಮಿಷ. ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ- ಜೂನ್ 6ರಂದೂ, ಸ್ಪರ್ಧಾತ್ಮಕ ಪರೀಕ್ಷೆ ಜೂನ್ 7ರಂದೂ ನಡೆಯಲಿದೆ.

    ಓದಿದ್ದು ನೆನಪಾಗುತ್ತಿಲ್ಲವೇ? – ಒಂದೆಲಗ ಬಳಸಿ ನೋಡಿ..

    ಹೆಚ್ಚಿನ ಮಾಹಿತಿಗೆ http://kpsc.kar.nic.in ಅಥವಾ ದೂರವಾಣಿ ಸಂಖ್ಯೆ- 74060 86807, 74060 86801 ಸಂಪರ್ಕಿಸಿ.

    ಕೂದಲು ಉದುರುತ್ತಿದೆಯೇ? – ಕರಿಬೇವು ಟ್ರೈ ಮಾಡಿ ನೋಡಿದ್ದೀರಾ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts