More

    ಆರ್ಥಿಕ ಇಲಾಖೆ ಸಾಂಖ್ಯಿಕ ನಿರೀಕ್ಷಕ ಹುದ್ದೆ: ಪರೀಕ್ಷೆ ನಡೆದು ವರ್ಷವಾದ್ರೂ ಇನ್ನೂ ಪ್ರಕಟವಾಗಿಲ್ಲ ಫಲಿತಾಂಶ

    ಬೆಂಗಳೂರು ಕರ್ನಾಟಕ ಲೋಕಸೇವಾ ಆಯೋಗವು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಾಂಖ್ಯಿಕ ನಿರೀಕ್ಷಕ ಹುದ್ದೆಗೆ ಪರೀಕ್ಷೆ ನಡೆಸಿ ಒಂದು ವರ್ಷವಾಗಿದ್ದು, ಕೂಡಲೇ ತಾತ್ಕಾಲಿಕ ಆಯ್ಕೆಯನ್ನು ಪ್ರಕಟ ಮಾಡುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

    2023ರ ಏ.1 ಮತ್ತು 2ರಂದು ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆ ಜತೆ ನಡೆಸಿದ ದಿನದಂದೇ ನಡೆಸಿದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ, ಸಾಂಖ್ಯಿಕ ನಿರೀಕ್ಷಕ, ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕ ಹುದ್ದೆ ಸೇರಿ ಇತರೆ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.

    ಸಾಂಖ್ಯಿಕ ನಿರೀಕ್ಷಕ ಹುದ್ದೆಯ ದಾಖಲಾತಿ ಪರಿಶೀಲನೆಯನ್ನು 2023ರ ಆಗಸ್ಟ್‌ನಲ್ಲಿ ನಡೆಸಲಾಗಿದೆ. ಆದರೆ, ತಾತ್ಕಾಳಿಕ ಆಯ್ಕೆ ಪಟ್ಟಿಯನ್ನು ಕೂಡ ಪ್ರಕಟಿಸದೆ ಆಯೋಗವು ವಿಳಂಬಧೋರಣೆ ಅನುಸರಿಸುತ್ತಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಮಾತ್ರವಲ್ಲ, ಅಭ್ಯರ್ಥಿಗಳಿಗೆ ಕೆಲವರಿಗೆ ವಯೋಮಿತಿ ಮೀರುತ್ತಿರುವ ಪರಿಣಾಮ, ಬೇರೆ ಇಲಾಖೆಯಲ್ಲಿನ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಸಾಂಖ್ಯಿಕ ನಿರೀಕ್ಷಕ ಹುದ್ದೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಕೂಡ ತಿಳಿಯುತ್ತಿಲ್ಲ.

    ಈ ಎಲ್ಲ ಕಾರಣದಿಂದ ಅಭ್ಯರ್ಥಿಗಳು ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಈ ಸಂಬಂಧ ಸಾಕಷ್ಟು ಬಾರಿ ಆಯೋಗವನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸಲಾಗಿದೆ. ಆದರೂ ಏನೂ ಪ್ರಯೋಜನವಾಗಿಲ್ಲ. ಕೆಪಿಎಸ್ಸಿ ಕಾರ್ಯದರ್ಶಿಗಳು ಕೂಡ ಬದಲಾಗುತ್ತಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಸಾಂಖ್ಯಿಕ ನಿರೀಕ್ಷಕ ಹುದ್ದೆ ಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts