More

    ಜೆಟಿಒ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಎಸ್ಸಿ ಮೀನಮೇಷ

    ತುಮಕೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯೋಗಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆಗೆ ಅರ್ಹತಾ ಪಟ್ಟಿ ಪ್ರಕಟಿಸಿ 9 ತಿಂಗಳಾದರೂ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸದೆ ಆಯೋಗವು ವಿಳಂಬ ಮಾಡುತ್ತಿದ್ದು ಸಾವಿರಾರು ಅಭ್ಯರ್ಥಿಗಳ ಭವಿಷ್ಯವನ್ನೇ ಕತ್ತಲಕೂಪಕ್ಕೆ ದೂಡಿದೆ.

    2018ರ ಫೆಬ್ರವರಿ 19ರಂದು ಕೆಪಿಎಸ್ಸಿ ಜೆಟಿಒ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಅದೇ ವರ್ಷ ಲಿಖಿತ ಪರೀಕ್ಷೆ ಕೂಡ ನಡೆಸಿತ್ತು. ವರ್ಷದ ಬಳಿಕ 2019ರ ಸೆಪ್ಟೆಂಬರ್‌ನಲ್ಲಿ ಅರ್ಹತಾ ಪಟ್ಟಿ ಪ್ರಕಟಿಸಿತ್ತು. ಬಳಿಕ ನವೆಂಬರ್‌ನಲ್ಲಿ 1:3ರ ಅನುಪಾತದಲ್ಲಿ ಮೂಲದಾಖಲಾತಿ ಪರಿಶೀಲನೆ ಮಾಡಲಾಗಿತ್ತು. ಆದರೆ, ಈವರೆಗೆ ತಾತ್ಕಾಲಿಕ ಆಯ್ಕೆ ಪ್ರಕಟಿಸಿಲ್ಲ.

    1520 ಹುದ್ದೆಗಳು: ಕಿರಿಯ ತರಬೇತಿ ಅಧಿಕಾರಿಗಳ (ಜೆಟಿಒ) ಹುದ್ದೆಗೆ ಐಟಿಐ ವೃತ್ತಿಗೆ ಅನ್ವಯಿಸುವ ಡಿಪ್ಲೊಮಾ ಕೋರ್ಸ್ ವಿದ್ಯಾರ್ಹತೆಯುಳ್ಳವರು ಅರ್ಹರಾಗಿದ್ದು ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ 266 ಹಾಗೂ ಉಳಿದ ವೃಂದದ 1254 ಹುದ್ದೆಗಳಿದ್ದು ಅರ್ಹತಾ ಪಟ್ಟಿ ಪ್ರಕಟಿಸಿ 1:3ರ ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. 9 ತಿಂಗಳಾಗುತ್ತ ಬಂದರೂ ತಾತ್ಕಾಲಿಕ ಆಯ್ಕೆ ಪ್ರಕಟಿಸಿಲ್ಲ. ಇದಾದ ಬಳಿಕ ಅಂತಿಮ ಆಯ್ಕೆ ಪಟ್ಟಿಗೆ ಇನ್ನೊಂದು ವರ್ಷ ಕಾಯಬೇಕಾದೀತೆಂಬ ನೋವು ಉದ್ಯೋಗಾಂಕ್ಷಿಗಳದ್ದಾಗಿದೆ.

    ಜೆಟಿಒ ಹುದ್ದೆಗಳಿಗೆ 2018ರಲ್ಲಿ ಅರ್ಜಿ ಸಲ್ಲಿಸಿ ಮೂಲ ದಾಖಲಾತಿ ಪರಿಶೀಲನೆ ಕೂಡ ಆಗಿದೆ. ಆದರೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿಲ್ಲ. ಕೆಪಿಎಸ್ಸಿ ಸಹಾಯವಾಣಿಗೆ ಕರೆ ಮಾಡಿದಾಗೆಲ್ಲ ಇನ್ನೂ 3-4 ತಿಂಗಳಲ್ಲಿ ತಾತ್ಕಾಲಿಕ ಆಯ್ಕೆ ಪ್ರಕಟಿಸುವುದಾಗಿ ಹೇಳುತ್ತ್ತ ಬಂದಿದ್ದು, 9 ತಿಂಗಳಾಗುತ್ತ ಬಂತು. ಈ ಬಗ್ಗೆ ಸಣ್ಣ ಸುಳಿವೂ ಇಲ್ಲ.
    ಉದ್ಯೋಗಾಕಾಂಕ್ಷಿ ಮಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts